Advertisement

‘ಮೂಲ್ಕಿ-ಮೂಡಬಿದಿರೆ ಕಾಂಗ್ರೆಸ್‌ ಮುಕ್ತ ಸಂಕಲ್ಪ’

10:42 AM Jun 13, 2018 | Team Udayavani |

ಸ‌ಸಿಹಿತ್ಲು: ಮೂಲ್ಕಿ- ಮೂಡಬಿದಿರೆ ಕ್ಷೇತ್ರವನ್ನು ಕಾಂಗ್ರೆಸ್‌ ಮುಕ್ತವನ್ನಾಗಿ ಮಾಡುವ ಸಂಕಲ್ಪ ಪ್ರತೀ ಕಾರ್ಯಕರ್ತರಲ್ಲಿ ಮೂಡಬೇಕು. ಶಾಸಕನಾಗಿ ತನ್ನ ಮೊದಲ ಪ್ರಾಶಸ್ತ್ಯವನ್ನು ಕಾರ್ಯಕರ್ತರಿಗೆ ಮೀಸಲಿರಿಸಿದ್ದೇನೆ. ಬಿಜೆಪಿಯಲ್ಲಿ ಮಾತ್ರ ತಳಮಟ್ಟದ ಸಾಮಾನ್ಯ ಕಾರ್ಯಕರ್ತನಿಗೂ ಮನ್ನಣೆ ಸಿಗುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ಸಸಿಹಿತ್ಲು ಬಿಜೆಪಿ ವತಿಯಿಂದ ದಿವ್ಯಾಮೃತ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಮ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ್‌ ಯಾನೆ ಅಪ್ಪು ಪೂಜಾರಿ ಆಶೀರ್ವಚನ ನೀಡಿದರು. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಕಿನ್ನಿಗೊಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು, ಬೂತ್‌ ಸಮಿತಿಯ ಅಧ್ಯಕ್ಷರಾದ ಸೂರ್ಯ ಕಾಂಚನ್‌, ಆನಂದ ಸುವರ್ಣ, ಧನರಾಜ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

ಕ್ಷೇತ್ರದ ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕ ಅನಿಲ್‌ ಕುಂದರ್‌ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲು ಪ್ರಸ್ತಾವನೆಗೈದರು. ದೇಗುಲದ ಅಧ್ಯಕ್ಷ ವಾಮನ ಇಡ್ಯಾ ಪರಿಚಯಿಸಿದರು. ಯತೀಶ್‌ ಕುಮಾರ್‌ ಸಸಿಹಿತ್ಲು ಪ್ರದೇಶದ ಮನವಿ ವಾಚಿಸಿದರು. ಗ್ರಾ.ಪಂ. ಸದಸ್ಯ ಅಶೋಕ್‌ ಬಂಗೇರ ವಂದಿಸಿ, ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್‌ ನಿರೂಪಿಸಿದರು. ಶಾಸಕರನ್ನು ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಗೌರವಿಸಿದರು.

ಕಾರ್ಯಕರ್ತರ ಕೆಲಸ ಅಗತ್ಯ
ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಅಧ್ಯಕ್ಷತೆ ವಹಿಸಿ, ಹಿಂದಿನ ಶಾಸಕರ ವರ್ತನೆಯಿಂದ ಸಸಿಹಿತ್ಲು ಭಾಗದ ಜನರು ಬಹಳಷ್ಟು ನೋವು ಅನುಭವಿಸಿದ್ದರಿಂದ ಅದು ಮತಗಳಾಗಿ ಪರಿವರ್ತನೆಗೊಂಡಿದೆ. ಹಿಂದೆಂದು ಕಾಣದ ಕಾರ್ಯ ಕರ್ತರ ಪಡೆಯನ್ನು ಸಸಿಹಿತ್ಲುವಿನಲ್ಲಿ ಕಂಡಿದ್ದೇವೆ. ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಕೆಲಸ ಮಾಡಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next