ಗಂಗಾವತಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವೈದ್ಯರು ಪೊಲೀಸರು ಆಶಾ ,ಅಂಗನವಾಡಿ ಆರೋಗ್ಯ ಕಾರ್ಯಕರ್ತರು ಪತ್ರಕರ್ತರು ಮುಂದಿನ ಸಾಲಿನಲ್ಲಿ ಹೋರಾಟ ನಡೆಸಿದ್ದು ಇವರಿಗೆಲ್ಲ ವೇಳೆಗೆ ಸರಿಯಾಗಿ ಕಾಫಿ,ಟೀ ಮಜ್ಜಿಗೆ ಗ್ಲುಕೋಸ್ ನೀರು ಊಟ ಉಪಹಾರ ನೀಡಿ ಎಲೆಮರೆಯ ಕಾಯಿಯಂತೆ ಸೇವೆ ಮಾಡಿದವರನ್ನು ಸ್ಮರಿಸುವುದು ಅವಶ್ಯ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ವಿದ್ಯಾನಗರದ ವೀರಾಂಜನೇಯ ದೇಗುಲದ ಬಳಿ ಕೋವಿಡ್-19 ವಿರುದ್ದ ಹೋರಾಟ ಉಚಿತ ಕಾಫಿ, ಚಹಾ, ಊಟ ವಿತರಿಸಿದವರಿಗೆ ಮೀಡಿಯಾ ಕ್ಲಬ್ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡಿದರು.
ಜನಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಮಧ್ಯೆ ಎಲೆಮರೆಯ ಕಾಯಿಗಳಂತೆ ಗಂಗಾವತಿ ನಗರದಲ್ಲಿ ಕಳೆದ 43 ದಿನಗಳಿಂದ ಕೊವಿಡ್-19 ವಿರುದ್ದ ಹೋರಾಟ ಮಾಡುವವರಿಗೆ ಇದ್ದಲ್ಲಿಗೆ ಟೀ,ಕಾಫಿ, ಮಜ್ಜಿಗೆ ಗ್ಲೂಕೋಸ್ ನೀರು ಊಟ ಪೂರೈಕೆ ಮಾಡಿದ ವಿ.ಸತ್ಯನಾರಾಯಣ, ನಾಗೇಶ ವಿದ್ಯಾನಿಕೇತನ ಶಾಲೆ ಮತ್ತು ಪ್ರಶಾಂತ ನಗರದ ವಿರೇಂದ್ರ ಇವರ ಸೇವೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ ಪಿ ಡಾ.ಚಂದ್ರಶೇಖರ, ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ನಗರಸಭೆ ಸದಸ್ಯ ಉಮೇಶ ಸಿಂಗನಾಳ ಮೀಡಿಯಾ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನವಲಿ ಕಾರ್ಯದರ್ಶಿ ಕೆ.ನಿಂಗಜ್ಜ, ಪದಾಧಿಕಾರಿಗಳಾದ ಎಸ್.ಎಂ.ಪಟೇಲ್, ಸಿ.ಮಹಾಲಕ್ಷ್ಮಿ, ಜಿ.ತಿರುಪಾಲಯ್ಯ, ಸಂಜೀವ ಕುಮಾರ್ ನೇಕಾರ, ದೇವದಾನಂ, ಹೊಸ್ಕೇರಿ ಮಲ್ಲಿಕಾರ್ಜುನ, ಗೇಸುದರಾಜ, ಝಾಕೀರ ಹುಸೆನ, ಖಾದ್ರಿ ಚಂದ್ರಶೇಖರ, ಎಂ.ಶರಣಬಸವರಾಜ ಸೇರಿ ಅನೇಕರಿದ್ದರು.