Advertisement

ಯಲ್ಲಾಪುರದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

06:43 PM Oct 23, 2020 | Suhan S |

ಯಲ್ಲಾಪುರ: ದೇಶ ಸದೃಢ,ಸಮರ್ಥವಾಗಿರಲು ಸಿಪಾಯಿಗಳು ಹಾಗೂ ಸಪಾಯಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರಬೇಕು ಎಂದು ನಿವೃತ್ತ ತಹಶೀಲ್ದಾರ್‌ ದಿನಮಣಿ ಹೆಗಡೆ ಹೇಳಿದರು.

Advertisement

ಅವರು ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕಸಾಪ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ನಿವೃತ್ತ ಯೋಧ ಪರಶುರಾಮ ನಾಯ್ಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಪರಶುರಾಮ ನಾಯ್ಕ ವಜ್ರಳ್ಳಿ ಅವರನ್ನು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಸನ್ಮಾನಿಸಿದರು.

ದೇಶ ಸೇವೆಗೈದ ಸೈನಿಕರನ್ನು ಗುರುತಿಸಿ, ಗೌರವಿಸುವುದರಿಂದ ಅವರ ಉತ್ಸಾಹ ಇಮ್ಮಡಿಯಾಗುತ್ತದೆ. ಇನ್ನಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದರು. ಕಸಾಪ ತಾಲೂಕಾಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲಬೀರಣ್ಣ ನಾಯಕ ಮೊಗಟಾ, ಅರ್ಥಧಾರಿ ಎಂ.ಎನ್‌. ಹೆಗಡೆ ಹಳವಳ್ಳಿ, ನಿವೃತ್ತ ಯೋಧ ತುಳಸಿದಾಸ ನಾಯ್ಕ, ಶಿಕ್ಷಕ ಆರ್‌.ಐ. ನಾಯ್ಕಮಾತನಾಡಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಸುಬ್ರಾಯ ಬಿದ್ರೆಮನೆ,ಗಂಗಾಧರ ಎಸ್‌.ಎಲ್‌, ರೇಖಾ ಭಟ್ಟ,  ಕೆ.ಎಸ್‌. ಭಟ್ಟ ಆನಗೋಡ, ಗ.ರಾ. ಭಟ್ಟ, ಪ್ರತಿಮಾ ಕೋಮಾರ, ನಾಗೇಶ, ಶಿಲ್ಪಾ ಬಿದ್ರೆಮನೆ ಕವನ ವಾಚಿಸಿದರು.

ಕಸಾಪ ಜಿಲ್ಲಾ ಸಹಕಾರ್ಯದರ್ಶಿ ಸುಬ್ರಾಯ ಗಾಂವ್ಕಾರ ಸ್ವಾಗತಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ಸನ್ಮಾನಪತ್ರ ವಾಚಿಸಿದರು. ಪತ್ರಕರ್ತ ಕೇಬಲ್‌ ನಾಗೇಶ ನಿರ್ವಹಿಸಿದರು. ಜಿ.ಎನ್‌. ಭಟ್ಟ ವಂದಿಸಿದರು.

 

Advertisement

ಕಾವಲುಗಾರರ ನೇಮಕಕ್ಕೆ  ಆಗ್ರಹ :

ಮುಂಡಗೋಡ: ಪಟ್ಟಣದಲ್ಲಿರುವ ಎಟಿಎಂಗಳಿಗೆ ಸಂಬಂಧಿಸಿದ ಬ್ಯಾಂಕ್‌ ನವರು ರಾತ್ರಿ ಕಾವಲುಗಾರರನ್ನು ನೇಮಿಸದೆ ನಿರ್ಲಕ್ಷ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ವಿವಿಧ ಭಾಗಗಳಲ್ಲಿ ಏಳಕ್ಕೂ ಅಧಿಕ ಎಟಿಎಂ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಈ ಎಟಿಎಂಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಎಟಿಎಂಗಳನ್ನು ಆರಂಭಿಸಲಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಜನರಿಗೆ ಎಟಿಎಂಗಳಿಂದ ಹಣ ಸಿಗಲಿ ಎಂಬ ಪ್ರಮುಖ ಉದ್ದೇಶದಿಂದ ಎಟಿಎಂಗಳನ್ನು ಆರಂಭಿಸಲಾಗಿದೆ. ಆದರೆ ಪಟ್ಟಣದ ಕೆಲವು ಎಟಿಎಂಗಳಲ್ಲಿ ಜನರಿಗೆ ಸಮರ್ಪಕವಾಗಿ ಹಣವೂ ಸಿಗದೆ ಪರದಾಡುವಂತಾಗಿದೆ.

ರಾತ್ರಿ ಬಂದಾಗುವ ಎಟಿಎಂಗಳು: ಎಟಿಎಂ ಅಂದರೆ (ಎನಿ ಟೈಂ ಮನಿ) ಯಾವುದೇ ಸಮಯದಲ್ಲಿ ಹೋದರು ಎಟಿಎಂಗಳಲ್ಲಿ ಗ್ರಾಹಕರಿಗೆ ಹಣ ಸಿಗುತ್ತವೆ. ಅದಕ್ಕಾಗಿ ಎಟಿಎಂ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಆದರೆ ಪಟ್ಟಣದ ಕೆಲವು ಎಟಿಎಂಗಳು ಮಾತ್ರ ಕತ್ತಲಾಗುತ್ತಿದ್ದಂತೆ ಬಾಗಿಲು ಮುಚ್ಚಿಕೋಳ್ಳುತ್ತವೆ. ಮರುದಿನ ಬೆಳಗ್ಗೆ ಎಂಟುಗಂಟೆಯ ನಂತರವೆ ಬಾಗಿಲು ತೆರೆದುಕೋಳ್ಳುತ್ತವೆ. ಎಟಿಎಂಗಳಿಗೆ ಕಾವಲುಗಾರರಿಲ್ಲ: ಪಟ್ಟಣದ ಬಹುತೇಕ ಎಟಿಎಂಗಳಿಗೆ ರಾತ್ರಿ ಕಾವಲುಗಾರರಿಲ್ಲ. ಈ ಹಿಂದೆ ಸರಕಾರ ಖಡಕ್‌ ಆದೇಶ ಮಾಡಿದ್ದು ಬ್ಯಾಂಕ್‌ನವರು ಎಟಿಎಂಗಳಿಗೆ ರಾತ್ರಿ ಕಾವಲುಗಾರರನ್ನು ಕಡ್ಡಾಯವಾಗಿ ನೇಮಿಸಬೇಕು. ಆದರೆ ಬ್ಯಾಂಕ್‌ನವರು ಆದೇಶ ಗಾಳಿಗೆ ತೂರಿದ್ದಾರೆ. ಎಟಿಎಂಗಳಲ್ಲಿ ಹಣವಿಲ್ಲ: ಕೆಲವು ಎಟಿಎಂಗಳಲ್ಲಿ ಹಣ ಸಿಗುವುದಿಲ್ಲ. ಹಗಲು ವೇಳೆ ಹಣ ಡ್ರಾ ಮಾಡಲು ಎಟಿಎಂಗಳಿಗೆ ಹೋದರೆ ಎಟಿಎಂಗಳಲ್ಲಿ ಹಣ ಇರುವುದಿಲ್ಲ. ವಾರದಲ್ಲಿ ಒಂದೆರಡು ದಿನ ಮಾತ್ರ ಕೆಲ ಎಟಿಎಂಗಳಲ್ಲಿ ಹಣ ಸಿಗುತ್ತದೆ. ಉಳಿದ ದಿನಗಳಲ್ಲಿ ಹಣ ಸಿಗುವುದಿಲ್ಲ. ಹೀಗೆ ಪಟ್ಟಣದಲ್ಲಿನ ಕೆಲವು ಎಟಿಎಂಗಳು ಜನರಿಗೆ ಸದ್ಬಳಕೆಯಾಗುತ್ತಿಲ್ಲ. ಕೆಲ ಬ್ಯಾಂಕ್‌ನವರು ಎಟಿಎಂಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next