Advertisement

ಹಿರಿಯಡಕ ಗೋಪಾಲರಾಯರಿಗೆ ಮಹಿಳಾ ಕಾಂಗ್ರೆಸ್‌ ಗೌರವ

03:15 AM Dec 19, 2018 | Karthik A |

ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ರಂಗದ ದಿಗ್ಗಜ, ನೂರರ ಹೊಸ್ತಿಲಲ್ಲಿರುವ ಹಿರಿಯಡಕ ಗೋಪಾಲರಾಯರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯಿಂದ, ಹಿರಿಯಡಕ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಸಮಿತಿ ಸಹಭಾಗಿತ್ವದಲ್ಲಿ ಗೌರವಿಸಲಾಯಿತು.

Advertisement

ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ಗೋಪಾಲ ರಾವ್‌ ಅವರು ಚಾಲನೆ ನೀಡಿದರು. ಮಾಜಿ ಸಚಿವ ವಿನಯಕುಮಾರ ಸೊರಕೆಯವರು ಸಮ್ಮಾನಿಸಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ವೇಷಧಾರಿಗಳಷ್ಟೇ ಮಹತ್ವ ಹಿಮ್ಮೇಳಕ್ಕೂ ಇದೆ.  ಹಿಮ್ಮೇಳಗಳಲ್ಲಿ ಒಂದಾದ ಮದ್ದಲೆಯನ್ನು ಈ ಇಳಿ ವಯಸ್ಸಿನಲ್ಲಿಯೂ ನುಡಿಸುವುದರ ಮೂಲಕ ಯಕ್ಷಗಾನ ರಂಗಕ್ಕೆ ಬಹುದೊಡ್ಡ ಕೊಡುಗೆಯನ್ನು ಗೋಪಾಲರಾಯರು ನೀಡಿದ್ದಾರೆ ಎಂದರು. ವಿದ್ವಾಂಸ ಡಾ| ರಾಘವ ನಂಬಿಯಾರ್‌ ಅವರು ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಶತಾಯುಷಿಗಳಾಗಿರುವುದು ಬಹಳ ಅಪರೂಪ. ಅಂತಹುದರಲ್ಲಿ ಗೋಪಾಲ ರಾಯರು ತಮ್ಮ ಬದುಕಿನಲ್ಲಿ ಇಷ್ಟೊಂದು ದೀರ್ಘ‌ಕಾಲದಿಂದ  ಕಲಾಸೇವೆಯನ್ನು ಮಾಡಿಕೊಂಡು ಬಂದಿರುವುದು ಅವರ ಶಿಷ್ಯರಾದ ನಮಗೆಲ್ಲಾ ಸಂತಸ ಕೊಡುವ ವಿಚಾರ ಎಂದರು.ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಕೃಷ್ಣಯ್ಯರವರು, ಹತ್ತುಹಲವು ಪ್ರಶಸ್ತಿಗಳಿಗೆ ಭಾಜನರಾದ ಗೋಪಾಲರಾಯರಿಗೆ ಮುಂದಿನ ದಿನಗಳಲ್ಲಿ ಗೌರವ ಡಾಕ್ಟರೇಟ್‌ ಪದವಿ ಸಿಗುವಲ್ಲಿ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ ಎಂದರು. ಗೋಪಾಲರಾಯರು ಕೃತಜ್ಞತೆಗಳನ್ನು ಸಲ್ಲಿಸಿದರು.

ಹಿರಿಯಡಕ ಬ್ಲಾಕ್‌ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಜಿ.ಪಂ. ಸದಸ್ಯೆ ಚಂದ್ರಿಕಾ ಕೇಳ್ಕಳ್‌, ಕಾಪು ಬ್ಲಾಕ್‌ ಮಹಿಳಾ ಅಧ್ಯಕ್ಷೆ ಪ್ರಭಾವತಿ ಸಾಲಿಯಾನ್‌, ಉಡುಪಿ ಬ್ಲಾಕ್‌ ಮಹಿಳಾ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಜ್ಯೋತಿ ಹೆಬ್ಟಾರ್‌, ತಾ.ಪಂ.ಸದಸ್ಯೆ ಸುಜಾತಾ ಸುವರ್ಣ, ಆಶಾ ಚಂದ್ರಶೇಖರ್‌, ವಿನೋದ್‌ ರಾವ್‌, ಬೊಮ್ಮಾರಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಆಚಾರ್ಯ, ಕೊಡಿಬೆಟ್ಟು ಗ್ರಾ.ಪಂ.ಅಧ್ಯಕ್ಷ ರಾಜು ಪೂಜಾರಿ, ಭಾಸ್ಕರ್‌ ಪೂಜಾರಿ, ಹಿರಿಯ ಕಾಂಗ್ರೆಸಿಗರಾದ ಮಹಾಬಲ ಕುಂದರ್‌, ಬಿ.ಎಸ್‌.ನಾಯ್ಕ್, ಇಸ್ಮಾಯಿಲ್‌ ಸಾಹೇಬ್, ಪಂಚಾಯತ್‌ ಉಪಾಧ್ಯಕ್ಷ ಚಂದ್ರಶೇಖರ್‌, ಚರಣ್‌ ವಿಠ್ಠಲ್, ಪ್ರಶಾಂತ್‌, ಶಿವಣ್ಣ ಶೆಟ್ಟಿ, ಸುಂದರ ಪೂಜಾರಿ, ಗೋಪಾಲರಾವ್‌ ಅವರ ಪುತ್ರ ರಾಮಮೂರ್ತಿ ರಾವ್‌ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. 

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗ್ಲೆಯವರು ಸ್ವಾಗತಿಸಿದರು. ಹಿರಿಯಡ್ಕ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸಂಧ್ಯಾಶೆಟ್ಟಿ ವಂದಿಸಿದರು. ತಾಲೂಕು ಪಂಚಾಯತ್‌ ಸದಸ್ಯ ಲಕ್ಷ್ಮೀ ನಾರಾಯಣ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next