Advertisement

ಕಟೀಲು ಸಿತ್ಲದಲ್ಲಿ ಯಕ್ಷಗಾನ ಕಲಾವಿದರಿಗೆ ಸಮ್ಮಾನ

11:07 AM Apr 27, 2018 | |

ಕಟೀಲು : ಯಕ್ಷಗಾನ ನಶಿಸಿಹೋಗುವ ಕಲೆಯಲ್ಲ ಅದು ಶಿಷ್ಟ ಪರಂಪರೆಯ ಕಲೆ, ಈ ಕಲೆಯ ಮೂಲಕ ವಾಗಿ ಜನರಲ್ಲಿ ಧಾರ್ಮಿಕತೆ, ಪುರಾಣ ಜ್ಞಾನ, ಸನ್ನಡೆತೆ, ಸನ್ಮಾರ್ಗದಲ್ಲಿ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.

Advertisement

ಎ. 25 ರಂದು ಕಟೀಲು ಸಿತ್ಲ ಬೈಲಿನಲ್ಲಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿ ಮುಂಬಯಿ ಹಾಗೂ ದುಬೈ ಇದರ ಆಶ್ರಯದಲ್ಲಿ ಶ್ರೀಧರ್ಮಸ್ಥಳ ಮಂಜುನಾಥ ಕೃಪಾಪೋಷಿತ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಇತರರಿಗೂ ಅನುಕರಣೀಯ
ಕಟೀಲಿನ ಅರ್ಚಕ ಶ್ರೀ ಹರಿನಾಯಣ ದಾಸ ಆಸ್ರಣ್ಣ ಮಾತನಾಡಿ, ಪದ್ಮನಾಭ ಕಟೀಲು ಅವರು ಕೀರ್ತಿಶೇಷ ಗೋಪಾಕೃಷ್ಣ ಆಸ್ರಣ್ಣರ ನೆನಪಿನಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಮಾರ್ಗದರ್ಶನದ ಮೂಲಕವಾಗಿ ಮುಂಬಯಿ ದುಬೈಯಲ್ಲಿ ಯಕ್ಷಗಾನ ಹಾಗೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಕಲಾವಿದರನ್ನು ನೇಪತ್ಯದ ಕಲಾವಿದರನ್ನು ಗೌರವಿಸುವ ಸಂಪ್ರದಾಯ ಉತ್ತಮವಾದುದು ಹಾಗೂ ಇತರರಿಗೂ ಅನುಕರಣೀಯ ಎಂದು ಹೇಳಿದರು.

ಉದ್ಯಮಿಗಳಾದ ಉದ್ಯಮಿ ಆನಂದ ಡಿ. ಶೆಟ್ಟಿ ಎಕ್ಕಾರು, ಯಾದವ ಕೃಷ್ಣ ಶೆಟ್ಟಿ ಶಿಬರೂರು, ಸಂತೋಷ್‌ ಶೆಟ್ಟಿ ಕಿಲೆಂಜೂರು, ಸಂಘಟಕ ಪದ್ಮನಾಭ ಕಟೀಲು, ಹರಿಣಾಕ್ಷಿ ಪದ್ಮನಾಭ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮ್ಮಾನ
ಈ ಸಂದರ್ಭ ಮೇಳದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್‌, ವಸಂತ ಕಾರ್ಯತಡ್ಕ , ನಾಟಕಕಾರ ಅರವಿಂದ ಬೋಳಾರು, ನೇಪಥ್ಯ ಕಲಾವಿದ ಪದ್ಮಯ್ಯ ಗೌಡ ಅವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next