Advertisement

“ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ’

12:51 AM Apr 21, 2019 | Team Udayavani |

ತೆಕ್ಕಟ್ಟೆ: ಸಂವಹನಕ್ಕೆ ಭಾಷೆಗಿಂತಲೂ ಭಾವ ಮುಖ್ಯ. ಬೇರೆ ಬೇರೆ ಭಾಷೆಗಳನ್ನಾಡುವ ವ್ಯಕ್ತಿಗಳ ನಡುವೆ ಸಂವಹನ ಏರ್ಪಡುವುದಾದರೆ ಅದು ಭಾವಾಭಿನಯದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಭಾಷಾ ಅಭಿವ್ಯಕ್ತಿಗಿಂತಲೂ ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಕಲಾವಿದೆ ಅಶ್ವಿ‌ನಿ ಕೊಂಡದಕುಳಿ ಹೇಳಿದರು.

Advertisement

ಅವರು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತƒತ್ವದ ನಡೆದ ರಜಾರಂಗು 2019 ಶಿಬಿರದಲ್ಲಿ ಯಕ್ಷ ಕಲೆಯಲ್ಲಿ ನವರಸಾಭಿನಯ ಎನ್ನುವ ವಿಷಯವನ್ನು ಉದ್ದೇಶಿಸಿ ಮಾತನಾಡಿದರು.

ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ ರಸಗಳ ಅಭಿನಯದ ಪರಿಚಯದೊಂದಿಗೆ ಕೊನೆಯಲ್ಲಿ ಧರಣಿ ಮಂಡಲ ಮಧ್ಯದೊಳಗೆ ರೂಪಕವನ್ನು ಪ್ರದರ್ಶಿಸಿ ಶಿಬಿರಾರ್ಥಿಗಳನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ ಭಾಗವತ ಲಂಬೋದರ ಹೆಗಡೆಯವರು ಕಲಾವಿದೆ ಅಶ್ವಿ‌ನಿ ಕೊಂಡದಕುಳಿ ಯವರನ್ನು ಗುರುತಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೊçಕೂರು ಸೀತಾರಾಮ ಶೆಟ್ಟಿ, ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು, ವೆಂಕಟೇಶ್‌ ವೈದ್ಯ ಕೊಮೆ, ಪ್ರಶಾಂತ್‌ ಮಲ್ಯಾಡಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ರಂಗ ಶಿಕ್ಷಕ ರೋಹಿತ್‌ ಎಸ್‌. ಬೆ„ಕಾಡಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next