Advertisement

ಬಿಡಿ ಕತೆಗಳೊಳಗೆ ಇಡಿಯಾದ ಭಾವ

12:30 AM Feb 24, 2019 | |

ಜಯಶ್ರೀ ಕಾಸರವಳ್ಳಿಯವರ ಚಿತ್ರಗುಪ್ತನ ಸನ್ನಿಧಿಯಲ್ಲಿ  ಎಂಬ ಹೊಸ ಕಥಾಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. ಆರಂಭದಲ್ಲಿ ವಿಮರ್ಶಕ ಟಿ. ಪಿ. ಅಶೋಕ ಅವರ ಮುನ್ನುಡಿ ಇದೆ. ಅವರು ಇಲ್ಲಿನ ಕಥಾಕಸುಬಿನಲ್ಲಿರುವ ಪ್ರಯೋಗಶೀಲ ಗುಣವನ್ನು ಎತ್ತಿ ಹಿಡಿದಿದ್ದಾರೆ.

Advertisement

ಲೇಖಕಿಯ ಮಾತುಗಳಿವು: ನನ್ನ ಕಥಾ ಪಯಣ ಹಾಗೆ ನೋಡಿದರೆ ಅಷ್ಟೇನೂ ಸುಲಭದ್ದಲ್ಲ. ಬರೆಯುವ ಪ್ರಕ್ರಿಯೆಯಲ್ಲಿ ಮನಸ್ಸು ತ್ರಾಸಗೊಂಡು ಚಡಪಡಿಸುವುದೇ ಜಾಸ್ತಿ. ಕೂತು ಬರೆಯಲು ಆಲಸ್ಯ, ಮತ್ತೇನೋ ಹಿಂಜರಿಕೆ. ಕತೆ ಬರೆಯುತ್ತಿದ್ದ ಪ್ರಾರಂಭ ಕಾಲದಲ್ಲಿದ್ದ ಭಾವುಕತೆ, ಕತೆ ಬರೆಯುತ್ತ ಹೋದ ಹಾಗೆ ಮಾಗುತ್ತದೆಯೋ ಅಥವಾ ಮೊದಲಿನ ತೀವ್ರತೆಯನ್ನು ಕುಗ್ಗಿಸಿ, ಕಾಲವೇ ನಮ್ಮನ್ನು ಮಾಗಿಸುತ್ತದೆಯೋ ಗೊತ್ತಿಲ್ಲ. ಇತ್ತೀಚೆಗೆ ಬರೆಯುತ್ತಿದ್ದಂತೆ ನನ್ನನ್ನೇ ನಿಕಷಕ್ಕೊಡ್ಡಿಕೊಳ್ಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಿಷ್ಟಾದರೂ ಹಂಚಿಕೊಳ್ಳಲು ಸಾಧ್ಯವಾಗಿದೆಯೆಂಬ ಸಂತಸ, ಎಲ್ಲದರ ಮಿಳಿತ ಭಾವವೇ ಕಥಾಸಂಕಲನವಾಗಿ ಇದೀಗ ನಿಮ್ಮ ಮುಂದಿದೆ. ಬರೆದು ಮುಗಿದ ನಂತರ ಲೇಖಕ ಕೇವಲ ನೆಪಮಾತ್ರ. ಅದು ಸೇರಬೇಕಾಗಿದ್ದು ಓದುಗರಿಗೇ. ಆದ್ದರಿಂದ ಕೈಹಿಡಿದು ಲಾಲಿಸುವಿರೆಂಬ ಧೈರ್ಯ ಪ್ರಕಟಿಸುವುದಕ್ಕೆ ಇಂಬು ಕೊಟ್ಟಿದೆ. ನನ್ನನ್ನೂ ನಿಮ್ಮನ್ನೂ ಬೆಸೆಯುವ ಹೃದಯದ ತಂತು ಬಲ್ಲವರ್ಯಾರು? ಎನ್ನುವ ನುಡಿಯೊಡನೆ ಈ ಎಲ್ಲಾ ಕತೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

ಚಿತ್ರಗುಪ್ತನ ಸನ್ನಿಧಿಯಲ್ಲಿ  (ಕಥಾ ಸಂಕಲನ)
ಲೇ.: ಜಯಶ್ರೀ ಕಾಸರವಳ್ಳಿ
ಪ್ರ.: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌ , ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
ಫೋನ್‌: 080-26617100/26617755
ಮೊದಲ ಮುದ್ರಣ: 2018 ಬೆಲೆ: ರೂ. 130

ಸಾಹಿತ್ಯ ಚಳುವಳಿಗಳು
ಸಂ.: ಶ್ರೀಧರ ಹೆಗಡೆ ಭದ್ರನ್‌
ಪ್ರ.: ಅಭಿನವ ಪ್ರಕಾಶನ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
ಫೋನ್‌: 080-23505825
ಮೊದಲ ಮುದ್ರಣ: 2018 ಬೆಲೆ: ರೂ. 100

ಉಡುಪಿ-ಮಣಿಪಾಲ : ದೃಶ್ಯ ಕಾವ್ಯ
(ಛಾಯಾಕಥನ)
ಲೇ.: ಆಸ್ಟ್ರೋಮೋಹನ್‌
ಪ್ರ.: ಯೂನಿವರ್ಸಿಟಿ ಪ್ರಸ್‌, 
ಮಣಿಪಾಲ- 576104 
ಮೊಬೈಲ್‌: 9845243306
ಮೊದಲ ಮುದ್ರಣ: 2019 ಬೆಲೆ: ರೂ. 650 

Advertisement
Advertisement

Udayavani is now on Telegram. Click here to join our channel and stay updated with the latest news.

Next