Advertisement

ಒಬ್ಬ ಉಗ್ರ ಸತ್ತರೂ ಮಾನವತೆ ದೃಷ್ಟಿಯಿಂದ ನೋವಾಗುತ್ತದೆ: ರಾಜ್ಯಪಾಲ

10:49 AM Jan 24, 2019 | udayavani editorial |

ಜಮ್ಮು : ‘ಒಬ್ಬನೇ ಒಬ್ಬ ಭಯೋತ್ಪಾದಕ ಸತ್ತರೂ ನನಗೆ ಮಾನವತೆಯ ದೃಷ್ಟಿಯಿಂದ ನೋವಾಗುತ್ತದೆ. ಆದುದರಿಂದ  ಕಾಶ್ಮೀರ ಕಣಿವೆಯ ಉಗ್ರರು ಹಿಂಸೆಯನ್ನು ತೊರೆದು ಮುಖ್ಯವಾಹಿನಿಗೆ ಬರಬೇಕು ಎಂದು ಬಯಸುತ್ತೇನೆ’  ಎಂಬುದಾಗಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಉಗ್ರ ಚಟುವಟಿಕೆಗಳನ್ನು ಆಮೂಲಾಗ್ರವಾಗಿ ಮೂಲೋತ್ಪಾಟನೆ ಮಾಡುವಲ್ಲಿ ಭದ್ರತಾ ಪಡೆಗಳು ಕಾಣುತ್ತಿರುವ ಯಶಸ್ಸನ್ನು ಅವರು ಪ್ರಶಂಸಿಸಿದರು. 

ಜಮ್ಮು ಕಾಶ್ಮೀರದ ಉಗ್ರರಿಗೆ ಪುನರ್‌ ವಸತಿ ಕಲ್ಪಿಸುವ ಹೊಸ ಪ್ಯಾಕೇಜ್‌ ಒಂದನ್ನು ತನ್ನ ಆಡಳಿತೆಯು ರೂಪಿಸುತ್ತಿದೆ ಎಂದು ಮಲಿಕ್‌ ಹೇಳಿದರು. 

ಇದೇ ಸಂದರ್ಭದಲ್ಲಿ  ಭದ್ರತಾ ಪಡೆಗಳಿಗೆ ದೊರಕಿರುವ ಅತ್ಯದ್ಭುತ ವಿಜಯ ಎನ್ನುವುದಕ್ಕೆ ಸಾಕ್ಷಿಯಾಗಿ ಜಮ್ಮು ಕಾಶ್ಮೀರದ ಪೊಲೀಸ್‌ ಮಹಾ ನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಅವರು ಹಿಂದೊಮ್ಮೆ ಉಗ್ರರ ಭದ್ರಕೋಟೆ ಎನಿಸಿಕೊಂಡಿದ್ದ  ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯನ್ನು ಉಗ್ರ ಮುಕ್ತ ಜಿಲ್ಲೆ ಎಂದು ಇಂದು ಗುರುವಾರ ಘೋಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next