Advertisement

ಪ್ರಾಣಿ ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ

07:35 AM Mar 22, 2019 | |

ಚಿಂತಾಮಣಿ: ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ನೀರು ಆಹಾರ ಇಲ್ಲದೆ ನರಳುತ್ತಿದ್ದ ಪ್ರಾಣಿ ಪಕ್ಷಿಗಳಿಗೆ ಮಾನವೀಯ ದೃಷ್ಟಿಯಿಂದ ಐಕಾನ್‌ ಗ್ರೂಪ್‌ನ ಸದಸ್ಯರು ನೀರು ಮತ್ತು ಆಹಾರ ನೀಡಿ ಮಾನವೀಯತೆ ಮೆರೆದರು.

Advertisement

ತಾಲೂಕಿನ ಕೈವಾರ, ಕಾಡುಮಲ್ಲೇಶ್ವರ, ಕೈಲಾಸಗಿರಿ ಸೇರಿದಂತೆ ಅರಣ್ಯದಲ್ಲಿ ಕೆಲ ಮರಗಳಿಗೆ ಮರಳಲ್ಲಿ ಸರ್ವ ಜೀವಿಗಳಿಗೂ ಸಮಬಾಳು ಎನ್ನುವ ಪರಿಸರ ಸಂರಕ್ಷಣೆಯ ಘೋಷಣೆಯೊಂದಿಗೆ ಪ್ರಾಣಿ ಪಕ್ಷಿಗಳಿಗೆ ಬೇಕಾದ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಅಭಿಯಾನಕ್ಕೆ ಐಕಾನ್‌ ವೇದಿಕೆಯ ಅಧ್ಯಕ್ಷ ಕರಾಟೆ ಅರ್ಜುನ್‌ ಚಾಲನೆ ನೀಡಿದರು.

ಸುಡು ಬಿಸಿಲಿಗೆ ತತ್ತರಿಸುತ್ತಿದ್ದ ಪ್ರಾಣಿಗಳ ರಕ್ಷಣೆಗೆ ಸರ್ಕಾರ ಯಾವುದೆ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷಿಸಿದ್ದು, ಮುಂದಿನ ದಿನಗಳಲ್ಲಿ ಕಾಡು ಪ್ರಾಣಿ, ಪಕ್ಷಿಗಳನ್ನು ಗ್ರಾಫಿಕ್‌ ಮತ್ತು ಫೋಟೋಗಳಲ್ಲಿ ಕಾಣುವ ದುಸ್ಥಿತಿ ಎದುರಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. 

ಬೇಸಿಗೆಯಲ್ಲಿ ಜನರೇ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಪ್ರಾಣಿ ಪಕ್ಷಿಗಳ ಸ್ಥಿತಿ ಮಾತ್ರ ಘೋರವಾಗಿರುತ್ತದೆ. ಮಾನವರು ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು. ಐಕಾನ್‌ ಮುಖ್ಯಸ್ಥರಾದ ಅರ್ಜುನ್‌ ಕರಾಟೆ, ಚಂದ್ರಶೇಖರ್‌, ಅವಿನಾಶ್‌, ನವೀನ್‌, ಲೋಕೇಶ್‌ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next