Advertisement

Federation Cup 2024: ಮೂರು ವರ್ಷ ಬಳಿಕ ಜಾವೆಲಿನ್‌ ಎಸೆತಗಾರ ನೀರಜ್‌ ಭಾರತದಲ್ಲಿ ಸ್ಪರ್ಧೆ

09:17 AM May 09, 2024 | Team Udayavani |

ಹೊಸದಿಲ್ಲಿ: ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಮೂರು ವರ್ಷಗಳ ಬಳಿಕ ಮೊದಲ ಬಾರಿ ದೇಶೀಯ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ. ಅವರು ಮೇ 12ರಿಂದ 15ರ ವರೆಗೆ ಭುವನೇಶ್ವರದಲ್ಲಿ ಸಾಗಲಿರುವ ರಾಷ್ಟ್ರೀಯ ಫೆಡರೇಶನ್‌ ಕಪ್‌ ಆ್ಯತ್ಲೆಟಿಕ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

Advertisement

ದೋಹಾದಲ್ಲಿ ನಡೆಯಲಿರುವ ಈ ಋತುವಿನ ಮೊದಲ ಸ್ಪರ್ಧೆಯಾದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿದ ಬಳಿಕ 26ರ ಹರೆಯದ ನೀರಜ್‌ ಅವರು ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಡೈಮಂಡ್‌ ಲೀಗ್‌ ಮೇ 10ರಂದು ನಡೆಯಲಿದೆ.

ನಮಗೆ ಬಂದಿರುವ ಪ್ರವೇಶಪತ್ರದಂತೆ ನೀರಜ್‌ ಚೋಪ್ರಾ ಮತ್ತು ಕಿಶೋರ್‌ ಕುಮಾರ್‌ ಜೆನ ಅವರು ಮೇ 12ರಿಂದ ಆರಂಭವಾಗುವ ದೇಶೀಯ ಸ್ಪರ್ಧೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಭಾರತೀಯ ಆ್ಯತ್ಲೆಟಿಕ್‌ ಫೆಡರೇಶನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭುವನೇಶ್ವರದಲ್ಲಿ ನಡೆಯಲಿರುವ ಫೆಡರೇಶನ್‌ ಕಪ ಕೂಟದಲ್ಲಿ ನೀರಜ್‌ ಭಾಗವಹಿಸುವುದನ್ನು ಅವರ ಕೋಚ್‌ ಕ್ಲಾಸ್‌ ಬಾತೊìನೀಟ್ಜ್ ದೃಢಪಡಿಸಿದ್ದಾರೆ. ನೀರಜ್‌ ಅವರು 2021ರ ಮಾ. 17ರಂದು ಇದೇ ರೀತಿಯ ಸ್ಪರ್ಧೆಯಲ್ಲಿ ಈ ಹಿಂದೆ ಭಾಗವಹಿಸಿದ್ದು 87.80 ಮೀ. ದೂರ ಎಸೆದ ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next