Advertisement

ಮೋಟಾರು ವಾಹನ ತಿದ್ದುಪಡಿ ಕಾಯಿದೆಯ ವಿರುದ್ಧ ಚಾಲಕರಿಂದ ಸಂಯುಕ್ತ ಪ್ರತಿಭಟನೆ

12:18 AM Sep 26, 2019 | Sriram |

ಮಹಾನಗರ: ಮೋಟಾರು ವಾಹನ ತಿದ್ದುಪಡಿ ವಿಧೇಯಕವು ಚಾಲಕ ವರ್ಗಕ್ಕೆ ಮಾರಕವಾಗಿದೆ ಎಂದು ಆರೋಪಿಸಿ, ಜಿಲ್ಲೆಯ ರಾ.ಹೆ. ಸಹಿತ ಇತರ ಪ್ರಮುಖ ರಸ್ತೆಗಳ ಅವ್ಯವಸ್ಥೆ, ಟೋಲ್‌ ಸಂಗ್ರಹ, ಪಾರ್ಕಿಂಗ್‌ ಸಮಸ್ಯೆ ವಿರೋಧಿಸಿ ಸಮಾನ ಮನಸ್ಕ ಚಾಲ ಕರ, ಸಾರ್ವಜನಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ಜರಗಿತು.

Advertisement

ದ.ಕ. ಜಿಲ್ಲಾ ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ದಿನೇಶ್‌ ಕುಂಪಲ ಮಾತನಾಡಿ, ಕೇಂದ್ರ ಸರಕಾ ರವು ಸೆ. 1ರಿಂದ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಚಾಲಕರು ಆಕ್ರೋ ಶಿತರಾಗಿದ್ದಾರೆ. ದುಬಾರಿ ದಂಡ ವನ್ನು ಸಹಿಸಲು ಅಸಾಧ್ಯವಾಗಿದೆ. ದಂಡ ಹೆಚ್ಚಳ ಮಾಡಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ವನ್ನು ಸರಿಪಡಿಸಲು ಹೊರಟಿರು ವುದು ತೀರಾ ಭ್ರಮೆಯಾಗಿದೆ. ಪ್ರಸ್ತುತ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ಸರಿಪಡಿಸಲು ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮ ವಹಿಸಿಲ್ಲ. ಇದು ಖಂಡನೀಯ ಎಂದರು.

ಕಾರ್ಮಿಕ ಪರಿಷತ್‌ನ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ವಿಧಾನ ಮಂಡಲದಲ್ಲಿ ಮಂಡಿಸಿ ಚರ್ಚಿ ಸದೆ, ಕಾರ್ಮಿಕ ವರ್ಗದ ಅಭಿಪ್ರಾಯ ಪಡೆಯದೆ ಹೊಸ ಕಾನೂನು ಜಾರಿಗೆ ತಂದಿರುವುದು ಖಂಡನೀಯ. ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇನೆ ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಮೋಟಾರು ವಾಹನ ತಿದ್ದು ಪಡಿ ಕಾಯಿದೆ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್‌ ಕುಮಾರ್‌ ಬಜಾಲ್‌, ಕರಾವಳಿ ಶ್ರಮಿಕ ಸಂಘದ ಗೌರವಾಧ್ಯಕ್ಷ ಎಂ.ಜಿ. ಹೆಗಡೆ, ದ.ಕ.ಜಿಲ್ಲಾ ಆನ್‌ಲೈನ್‌ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮಿ¤ಯಾಜ್‌, ಇಂಟಕ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್‌ ಶೆಟ್ಟಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಚ್‌.ವಿ.ರಾವ್‌, ಆಲಿ ಹಸನ್‌ ಮಾತನಾಡಿದರು.

ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್‌ ಜಪ್ಪಿನಮೊಗರು, ಜಯಂತ ನಾಯಕ್‌, ಪದ್ಮಾವತಿ ಶೆಟ್ಟಿ, ದಿನೇಶ್‌ ಶೆಟ್ಟಿ, ಜೆಡಿಎಸ್‌ ಯುವ ಘಟ ಕದ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ಡಿವೈಎಫ್‌ಐನ ನವೀನ್‌ ಕೊಂಚಾಡಿ, ನಿತಿನ್‌ ಬಂಗೇರ, ರಫೀಕ್‌ ಹರೇಕಳ, ಇಂಟಕ್‌ ನಾಯಕರಾದ ವಾಲ್ಟರ್‌ ಪಿಂಟೋ, ಉಮೇಶ್‌ ಕೋಟ್ಯಾನ್‌, ಮಲ್ಲಣ್ಣ, ಮೊಯ್ದಿನ್‌ ಬಾವಾ, ಸ್ಟೀವನ್‌ ಡಿ’ಸೋಜಾ, ಉಮೇಶ್‌ ದೇವಾಡಿಗ, ಕರಾವಳಿ ಶ್ರಮಿಕ ಸಂಘದ ಅಧ್ಯಕ್ಷ ರೋಹಿತ್‌ ಕೋಟ್ಯಾನ್‌, ಎಐಟಿಯುಸಿ ನಾಯಕರಾದ ವಿ.ಕುಕ್ಯಾನ್‌, ಕರುಣಾಕರ್‌, ಪ್ರವೀಣ್‌ ಕುಮಾರ್‌, ಟ್ಯಾಕ್ಸಿ ಚಾಲಕರ ಸಂಘಟನೆಯ ನಾಯ ಕರಾದ ಆನಂದ ಕೆ., ಪ್ರಮೋದ್‌ ಉಳ್ಳಾಲ, ಕ್ಯಾನಿ ಡಿ’ಸೋಜಾ, ಆನ್‌ಲೈನ್‌ ಟ್ಯಾಕ್ಸಿ ಚಾಲಕರ ಸಂಘದ ಸತ್ಯೇಂದ್ರ ಶೆಟ್ಟಿ, ಮುನಾವರ್‌ ಕುತ್ತಾರ್‌, ಆಟೋರಿûಾ ಚಾಲಕರ ಸಂಘಟನೆಯ ನಾಯಕರಾದ ಕೃಷ್ಣಪ್ಪ ಗೌಡ, ಸ್ಟ್ಯಾನ್ಲಿ ನೊರೋನ್ಹಾ, ಅನ್ಸಾರ್‌, ಶೇಖರ್‌ ದೇರಳಕಟ್ಟೆ, ವಿಶ್ವನಾಥ, ಶಾಲಾ ಮಕ್ಕಳ ವಾಹನ ಚಾಲಕರಾದ ರೆಹಮಾನ್‌ ಖಾನ್‌, ಸತೀಶ್‌ ಅಡಪ, ನರೇಂದ್ರ, ಮುನ್ನಾ ಪದವಿನಂಗಡಿ,ಸಂಕಪ್ಪ, ಮಾನವ ಸಮಾನತಾ ಮಂಚ್‌ನ ಮುಖಂಡರಾದ ವಸಂತ ಟೈಲರ್‌, ರೋಶನ್‌ ಪತ್ರಾವೋ, ರೈತ ಸಂಘದ ನಾಯಕ ರಾದ ಕೃಷ್ಣಪ್ಪ ಸಾಲಿಯಾನ್‌, ಗೂಡ್ಸ್‌ ಟೆಂಪೋ ಚಾಲಕರ ಸಂಘದ ನಾಯಕರಾದ ಜೋನ್‌ ಡಿ’ಸೋಜಾ, ಪ್ರಕಾಶ್‌ ಡಿ’ಸೋಜಾ, ನೀಲಯ್ಯ, ರಾಕೇಶ್‌,ರಫೀಕ್‌, ಜೆರಾಲ್ಡ್‌ ಟವರ್‌, ಸಿಪ್ರಿಯನ್‌, ಅಶ್ರಫ್‌, ಖಾಲಿದ್‌ ಉಜಿರೆ, ಹುಸೇನ್‌ ಕಾಟಿಪಳ್ಳ, ಟಿ.ಎನ್‌, ರಮೇಶ್‌ ಭಾಗವಹಿಸಿದ್ದರು. ಪ್ರಾರಂಭದಲ್ಲಿ ನಗರದ ಮಿನಿ ವಿಧಾನಸೌಧದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next