Advertisement

ಫೆಡ್‌ ಕಪ್‌ ಟೆನಿಸ್‌: ಚೀನಾ ವಿರುದ್ಧ ಸೋತ ಭಾರತ

06:15 AM Feb 08, 2018 | Team Udayavani |

ನವದೆಹಲಿ: ಅಂಕಿತಾ ರೈನಾ ವೀರೋಚಿತ ಆಟದ ಹೊರತಾಗಿಯೂ ನವದೆಹೆಲಿಯಲ್ಲಿ ನಡೆಯುತ್ತಿರುವ ಏಷ್ಯಾ-ಒಶಿಯಾನಿಯಾ ಗುಂಪು 1 ಫೆಡರೇಷನ್‌ ಕಪ್‌ ಟೆನಿಸ್‌ ಕೂಟದಲ್ಲಿ ಭಾರತ 2-1 ಅಂಕಗಳ ಅಂತರದಿಂದ ಚೀನಾ ವಿರುದ್ಧ ಸೋಲು ಅನುಭವಿಸಿದೆ.

Advertisement

ಭಾರತ ಗುರುವಾರ ನಡೆಯಲಿರುವ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಜಕೀಸ್ಥಾನ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದರಷ್ಟೇ ಭಾರತಕ್ಕೆ ಮುಂದಿನ ಅವಕಾಶ ತೆರೆದುಕೊಳ್ಳಲಿದೆ. ಕಜಕ್‌ ಈಗಾಗಲೇ ಹಾಂಕಾಂಗ್‌ ವಿರುದ್ಧ 3-0 ಅಂತರದ ಸೋಲು ಕಂಡಿದೆ. ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಅಂಕಿತಾ ತಂದ ಏಕೈಕ ಗೆಲುವು: ವಿಶ್ವ ಮಹಿಳಾ ಶ್ರೇಯಾಂಕದಲ್ಲಿ 253ನೇ ಶ್ರೇಯಾಂಕ ಹೊಂದಿರುವ ಅಂಕಿತಾ ರೈನಾ ತನಗಿಂತ ಅಧಿಕ ಶ್ರೇಯಾಂಕ ಹೊಂದಿರುವ ಲಿನ್‌ ಝು ವಿರುದ್ಧ 6-3, 6-2 ಅಂತರದ ಗೆಲುವು ಸಾಧಿಸಿದ್ದಾರೆ. ಲಿನ್‌ ಝು ವಿಶ್ವ 120ನೇ ಶ್ರೇಯಾಂಕ ಹೊಂದಿದವರು ಎನ್ನುವುದು ವಿಶೇಷ. ಅಂಕಿತಾ ಅದ್ಭುತ ಆಟ ಪ್ರದರ್ಶಿಸಿದರೂ, 19 ವರ್ಷದ ಕರ¾ನ್‌ ಕೌರ್‌ ಥಾಂಡಿ 2-6, 2-6 ಸೆಟ್‌ಗಳ ಅಂತರದಿಂದ ವಿಶ್ವ 25ನೇ ಶ್ರೇಯಾಂಕಿತ ಯಾಫ‌ನ್‌ ವಾಂಗ್‌ ವಿರುದ್ಧ ಸೋಲು ಅನುಭವಿಸಿದರು. ಹೀಗಾಗಿ ಚೀನಾ 1-1 ರಿಂದ ಸಮಸಾಧಿಸಿಕೊಂಡಿತು.

ಮೂರನೇ ಪಂದ್ಯದಲ್ಲಿ ಪ್ರಾರ್ಥನಾ ತೊಂಬ್ರೆ ಜತೆಗೆ ಡಬಲ್ಸ್‌ ಆಟಗಾರ್ತಿಯಾಗಿ ಅಂಕಿತಾ ರೈನಾ ಜತೆಯಾದರು. ಇವರ ಮೇಲೆ ಬಾರೀ ನಿರೀಕ್ಷೆ ಇತ್ತು. ಆದರೆ ವಾಂಗ್‌- ಝೋಕ್ಸುವಾನ್‌ ಯಾಂಗ್‌ ವಿರುದ್ಧ 2-6, 6-7(1) ಸೆಟ್‌ಗಳ ಅಂತರದಿಂದ ಸೋಲುವ ಮೂಲಕ ಭಾರತ ಶರಣಾಗಬೇಕಾಯಿತು. ಹೊಂದಾಣಿಕೆ ಕೊರತೆಯೆ ಅಂತಿಮ ಪಂದ್ಯವನ್ನು ಕಳೆದುಕೊಳ್ಳಲು ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next