Advertisement

ಫೆ. 9ರಿಂದ ಪುರುಷರ ಹಾಗೂ ವನಿತೆಯರ ರಾಷ್ಟ್ರೀಯ ಕುಸ್ತಿ ಶಿಬಿರ

11:24 PM Jan 01, 2024 | Team Udayavani |

ಹೊಸದಿಲ್ಲಿ: ಪುರುಷರ ಹಾಗೂ ವನಿತೆಯರ ರಾಷ್ಟ್ರೀಯ ಕುಸ್ತಿ ಶಿಬಿರಗಳ ದಿನಾಂಕವನ್ನು ಪ್ರಕಟಿಸಲಾಗಿದೆ. ಇವು ಫೆ. 9ರಂದು ಆರಂಭಗೊಳ್ಳಲಿವೆ. ಐಒಎ ನೂತನವಾಗಿ ರಚಿಸಿದ ಅಡ್‌-ಹಾಕ್‌ ಕಮಿಟಿ ಈ ದಿನಾಂಕಗಳನ್ನು ಘೋಷಿಸಿದೆ.

Advertisement

ಅದರಂತೆ ಪುರುಷರ ಶಿಬಿರ (ಗ್ರೀಕೊ-ರೋಮನ್‌ ಮತ್ತು ಫ್ರೀಸ್ಟೈಲ್‌ ವಿಭಾಗ) ಸೋನೆಪತ್‌ನಲ್ಲಿ ಹಾಗೂ ವನಿತೆಯರ ಕುಸ್ತಿ ಶಿಬಿರ ಪಟಿಯಾಲಾದಲ್ಲಿ ನಡೆಯಲಿದೆ. ಏಷ್ಯನ್‌ ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ ಅರ್ಹತಾ ಪಂದ್ಯಾವಳಿಗಳು ಸಮೀಪಿಸುತ್ತಿರುವ ಕಾರಣ ಈ ಶಿಬಿರಗಳನ್ನು ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next