Advertisement

ಫೆ. 11: ಆರನೇ ಮಣಿಪಾಲ್‌ ಮ್ಯಾರಥಾನ್‌

12:51 AM Feb 08, 2024 | Team Udayavani |

ಮಣಿಪಾಲ: ಜೀವನ್ಮರಣ ಹೋರಾಟ ದಲ್ಲಿರುವ ರೋಗಿಗಳ ಉಪಶಾಮಕ ಆರೈಕೆ (ಹಾಸ್ಪೈಸ್‌ ಪೆಲಿಟೀವ್‌ ಕೇರ್‌) ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ಮಾಹೆ ವಿ.ವಿ. ಹಾಗೂ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಸಹಭಾಗಿತ್ವದಲ್ಲಿ 6ನೇ ಮಣಿಪಾಲ್‌ ಮ್ಯಾರಥಾನ್‌ಗೆ ಫೆ. 11ರಂದು ಕೆಎಂಸಿ ಗ್ರೀನ್ಸ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಪೂರ್ಣ ಮ್ಯಾರಥಾನ್‌ (42 ಕಿ.ಮೀ.), ಹಾಫ್ ಮ್ಯಾರಥಾನ್‌ (21 ಕಿ.ಮೀ.), 10 ಕಿ.ಮೀ, 5 ಕಿ.ಮೀ. ಮತ್ತು 3 ಕಿ.ಮೀ. ಓಟ (ಫ‌ನ್‌ ರನ್‌) ಇರಲಿದೆ.

ಅಂಧರೂ ಪಾಲ್ಗೊಳ್ಳುವರು!
ಅಂಧರು ಭಾಗವಹಿಸುತ್ತಿರುವುದು ಈ ಸಲದ ವಿಶೇಷವಾಗಿದೆ. ವಿದೇಶಗಳಿಂದ ನೂರಕ್ಕೂ ಅಧಿಕ ಆ್ಯತ್ಲೀಟ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮರ್ಥನಂ ಟ್ರಸ್ಟ್‌ನಿಂದ 100ಕ್ಕೂ ಅಧಿಕ ಅಂಧರು ಹಾಗೂ ರಾಜ್ಯದ ವಿವಿಧ ಭಾಗದಿಂದ 15 ಮಂದಿ ವಿಶೇಷ ಚೇತನರು ಭಾಗಿಯಾಗಲಿದ್ದಾರೆ. ಅಕಾಡೆಮಿ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಫೆಡರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ ಸಹಭಾಗಿತ್ವ ನೀಡುತ್ತಿದೆ.

ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌ ಅವರು ಮಾತನಾಡಿ, ಮಣಿಪಾಲ್‌ ಮ್ಯಾರಥಾನ್‌ ಕೇವಲ ಓಟವಲ್ಲ. ಇದು ಸೆಲೆಬ್ರೇಶನ್‌ ಆಫ್ ಎಕ್ಸಲೆನ್ಸ್‌, ಸ್ಥಳೀಯರ ಪಾಲ್ಗೊಳ್ಳುವಿಕೆಯೂ ಇರುತ್ತದೆ ಎಂದರು.

ಸಹಕುಲಪತಿ ಡಾ| ಶರತ್‌ ಕೆ. ರಾವ್‌, ಕುಲಸಚಿವ ಡಾ| ಗಿರಿಧರ ಕಿಣಿ ಮಾತನಾಡಿ, ಪೂರ್ಣ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಆ್ಯತ್ಲೀಟ್‌ಗಳ ಆರೋಗ್ಯ ತಪಾಸಣೆಯನ್ನು ಮಾಡಲಿದ್ದೇವೆ. ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳೇ ಹೆಚ್ಚು ತೊಡ ಗಿಸಿ ಕೊಂಡಿದ್ದಾರೆ ಎಂದರು.

Advertisement

ಮಾಹೆ ಕ್ರೀಡಾ ಕೌನ್ಸಿಲ್‌ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌ ಅವರು ಮ್ಯಾರಥಾನ್‌ ಮಾರ್ಗ, ಸಿದ್ಧತೆ, ನೋಂದಣಿ ಮಾಹಿತಿ ಒದಗಿಸಿದರು. ಅಮೆರಿಕ, ಜಪಾನ್‌, ಫ್ರಾನ್ಸ್‌, ಟರ್ಕಿ, ಇಥಿಯೋಪಿಯಾ, ಕೀನ್ಯಾ, ಜರ್ಮನಿ, ಇಂಗ್ಲೆಂಡ್‌, ಆಸ್ಟ್ರೇಲಿಯ ಸಹಿತ ಅನೇಕ ದೇಶಗಳಿಂದ ಓಟ ಗಾರರು ಬರಲಿದ್ದಾರೆ. ಪೂರ್ಣ ಮ್ಯಾರಥಾನ್‌ಗೆ
ಈಗಾಗಲೇ 110 ಮಂದಿ ನೋಂದಣಿ ಮಾಡಿ ಕೊಂಡಿದ್ದಾರೆ ಎಂದರು.

ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಕೆಂಪರಾಜು, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಕ್ರೀಡಾ ಕೌನ್ಸಿಲ್‌ ಸಹ ಕಾರ್ಯದರ್ಶಿ ಮೋನಿಕಾ ಉಪಸ್ಥಿತರಿದ್ದರು.

21 ಲಕ್ಷ ರೂ. ಬಹುಮಾನ
ಡಾ| ಗಿರೀಶ್‌ ಮೆನನ್‌, ಡಾ| ನವೀನ್‌ ಸಾಲಿನ್ಸ್‌ ಮಾತನಾಡಿ, ಪ್ರತಿ ವಿಭಾಗದಲ್ಲೂ ಪ್ರತ್ಯೇಕ ಬಹುಮಾನ ಇರಲಿದೆ. ಸುಮಾರು 21 ಲಕ್ಷ ರೂ.ಗಳ ವರೆಗಿನ ಮೊತ್ತವನ್ನು ಬಹುಮಾನ ವಾಗಿ ನೀಡಲಾಗುತ್ತದೆ. ಹಾಸ್ಪೈಸ್‌ ಪೆಲಿಟೀವ್‌ ಕೇರ್‌ ಪ್ರಸ್ತುತ ಭಾರತಕ್ಕೆ ಹೆಚ್ಚು ಆವಶ್ಯಕತೆಯಿದೆ. ಮಾಹೆ ವಿ.ವಿ.ಯಿಂದಲೂ 100 ಹಾಸಿಗೆಯ ಹಾಸ್ಪೈಸ್‌ ಪೆಲಿಟೀವ್‌ ಕೇರ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next