Advertisement
ಜೀವನ್ಮರಣ (ಪ್ರಾಣಾಂತಿಕ) ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ (ಹೋಸ್ಪಿಸ್ ಕೇರ್) ಎಂಬ ಉದಾತ್ತ ಧ್ಯೇಯ ಹಾಗೂ “ನಾವು ನಿಮ್ಮೊಂದಿಗೆ ಸದಾ ಇದ್ದೇವೆ’ ಎಂಬ ಘೋಷವಾಕ್ಯ ಈ ಬಾರಿಯದ್ದು. ರಾಜ್ಯದ ವಿವಿಧ ಜಿಲ್ಲೆ, ಹೊರರಾಜ್ಯ ಹಾಗೂ ಇಥಿಯೋ ಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮಲೇಷ್ಯಾ, ಅಮೆರಿಕ, ಶ್ರೀಲಂಕಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆ್ಯತ್ಲೀಟ್‌ಗಳು ಭಾಗವಹಿಸುವರು ಎಂದರು.
ಮಾಹೆ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ಮಾತನಾಡಿ, //www.manipalmarathon.in ನಲ್ಲಿ ಅ.15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. 42 ಕಿ.ಮೀ , 21 ಕಿ.ಮೀ ಹಾಫ್ ಮ್ಯಾರಾಥಾನ್, 5 ಕಿ.ಮೀ. ಓಟ, 10 ಕಿ.ಮೀ ಓಟ ಪ್ರತ್ಯೇಕವಾಗಿರಲಿದ್ದು, ಸುಮಾರು 15 ಲಕ್ಷ ರೂ. ವರೆಗೂ ಬಹುಮಾನ ವಿತರಿಸ ಲಿದ್ದೇವೆ ಎಂದು ವಿವರ ನೀಡಿದರು.
Related Articles
Advertisement
ರಾಜ್ಯ ಆ್ಯತ್ಲೆಟಿಕ್ ಅಸೋಸಿಯೇಶನ್ ಉಪಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾಧ್ಯಕ್ಷ ಕೆಂಪರಾಜ್, ಮಾಹೆ ಹಿರಿಯ ಅಧಿಕಾರಿಗಳಾದ ಡಾ| ಶರತ್ ಕುಮಾರ್ ರಾವ್, ಡಾ| ನಾರಾಯಣ ಸಭಾಹಿತ್, ಡಾ| ಗಿರಿಧರ ಕಿಣಿ, ಡಾ| ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.