ಪೂರ್ತಿ ಚಿನ್ನದಿಂದಲೇ ತಯಾರಿಸಿದ ಪದಕಗಳನ್ನು 1912ರ ಸ್ವೀಡನ್‌ನ ಸ್ಟಾಕ್‌ಹೊಮ್ಲಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ನೀಡಲಾಗಿತ್ತು. ಆ ಬಳಿಕ ಬಂಗಾರದ ಪದಕಗಳು ಚಿನ್ನದ ಲೇಪನವನ್ನಷ್ಟೆ (ಕನಿಷ್ಠ 6 ಗ್ರಾಂ) ಹೊಂದಿರುತ್ತವೆ ಮತ್ತು ಶೇಕಡ 93 ಬೆಳ್ಳಿಯೇ ತುಂಬಿರುತ್ತದೆ. ಹೀಗಾಗಿ ಒಲಿಂಪಿಕ್ಸ್‌ನ ಚಿನ್ನ ಮತ್ತು ಬೆಳ್ಳಿ ಪದಕಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. 1896ರ ಮೊದಲ ಒಲಿಂಪಿಕ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕವನ್ನೇ ನೀಡಲಾಗಿತ್ತು. 2ನೇ ಸ್ಥಾನ ಪಡೆದವರು ಕಂಚಿನ ಪದಕ ಗಳಿಸಿದ್ದರು. 1900ರ ಒಲಿಂಪಿಕ್ಸ್ ವಿಜೇತರಿಗೆ ಪದಕಗಳ ಬದಲಾಗಿ ಟ್ರೋಫಿಗಳನ್ನು ನೀಡಲಾಗಿತ್ತು. 1904ರ ಒಲಿಂಪಿಕ್ಸ್‌ನಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಹುಟ್ಟಿಕೊಂಡಿತು. ಪ್ರತಿ ಪದಕ ಕನಿಷ್ಠ 7.7 ಎಂ.ಎಂ. ದಪ್ಪ ಮತ್ತು 85 ಎಂ.ಎಂ. ಸುತ್ತಳತೆ ಹೊಂದಿರಬೇಕೆಂದು ಐಒಸಿ ನಿಯಮ.
Advertisement
– 1936ರಿಂದ ಟಿವಿ ಪ್ರಸಾರಈ ಬಾರಿ ಟೋಕಿಯೊ ಒಲಿಂಪಿಕ್ಸ್ ಬರೀ ಟವಿಯಲ್ಲಷ್ಟೇ ಕ್ರೀಡಾಪ್ರೇಮಿಗಳನ್ನು ತಲುಪಲಿದೆ. 1964ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿವಿಯಲ್ಲಿ ಪ್ರಸಾರ ಕಂಡಿದ್ದು ಕೂಡ ಟೋಕಿಯೊ ಒಲಿಂಪಿಕ್ಸ್ ಆಗಿತ್ತು ಎಂಬುದು ಕಾಕಾತಾಳಿಯ ವಿಚಾರವಾಗಿದೆ. 1936ರ ಬರ್ಲಿನ್ ಗೇಮ್ಸ್‌ನ ಆತಿಥೇಯ ಜರ್ಮನಿಯ ಟಿವಿ ಹಾಲ್‌ಗಳಲಷ್ಟೇ ಪ್ರಸಾರ ಕಂಡಿತ್ತು. 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಟಿವಿ ಪ್ರಸಾರ ಹಕ್ಕು ಮಾರಾಟ ಮಾಡಲಾಗಿತ್ತು. ಅಲ್ಲದೆ ಈ ಬಾರಿ ಕ್ರೀಡಾಕೂಟದ ಶೇಕಡ 80ರಷ್ಟು ಆದಾಯ ಟಿವಿ ಪ್ರಸಾರ ಹಕ್ಕಿನಿಂದಲೇ ಬರಲಿದೆ.
ಈ ಬಾರಿಯ ಒಲಿಂಪಿಕ್ಸ್ 17 ದಿನಗಳಲ್ಲೇ ಮುಕ್ತಾಯಗೊಳ್ಳಲಿದೆ. ಆದರೆ 1908ರ ಲಂಡನ್ ಒಲಿಂಪಿಕ್ಸ್ 187 ದಿನ ನಡೆದಿತ್ತು ಎಂದರೆ ನೀವು ನಂಬಲೇಬೇಕು. ಏಪ್ರಿಲ್ 27ರಂದು ಶುರುವಾದ ಒಲಿಂಪಿಕ್ಸ್ ಅ. 31ರ ತನಕವೂ ನಡೆದಿತ್ತು. 1900ರ ಪ್ಯಾರಿಸ್ ಒಲಿಂಪಿಕ್ಸ್ ಕೂಡ 5 ತಿಂಗಳ ಕಾಲ ನಡೆದಿತ್ತು. – 72 ವರ್ಷದ ಹಿರಿಯ ಆ್ಯತ್ಲೀಟ್:
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆ್ಯತ್ಲೀಟ್ ಎಂಬ ಹೆಗ್ಗಳಿಕೆ ಸ್ವೀಡನ್‌ನ ಶೂಟರ್ ಆಸ್ಕರ್ ಸ್ವಾನ್. 1920ರ ಅಂಟೆÌರ್ಪ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಸ್ಪರ್ಧಿಸಿದಾಗ ಅವರಿಗೆ 72 ವರ್ಷವಾಗಿತ್ತು. ಚಿನ್ನವನ್ನೂ ಜಯಿಸಿದ್ದ ಅವರು ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ಹಿರಿಯ ಕ್ರೀಡಾಪಟು ಎನಿಸಿ¨ªಾರೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಹಿರಿಯ ಮಹಿಳಾ ಆ್ಯತ್ಲೀಟ್ ಇಂಗ್ಲೆಂಡ್‌ನ ಹಿಲ್ಡಾ ಲೊರ್ನಾ ಜಾನ್‌ಸ್ಟನ್. 1972ರ ಮ್ಯೂನಿಚ್ ಗೇಮ್ಸ…ನಲ್ಲಿ ಅವರು 70ರ ವಯಸ್ಸಿನಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಿಡ ಪೇಟನ್ ಎಲಿಜಾ 1904ರಲ್ಲಿ 63ನೇ ವಯಸ್ಸಿನಲ್ಲಿ ಆರ್ಚರಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಯ ಮಹಿಳಾ ಕ್ರೀಡಾಪಟು.
Related Articles
1896ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಿಂಪಿಕ್ಸ್‌ನಲ್ಲಿ ಮಹಿಳಾ ಸ್ಪರ್ಧಿಗಳಿರಲಿಲ್ಲ. ಎಲ್ಲ 241 ಸ್ಪರ್ಧಿಗಳು ಪುರುಷರೇ ಆಗಿದ್ದರು. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ 22 ಮಹಿಳೆಯರು ಪಾಲ್ಗೊಂಡಿದ್ದರು. 2012ರ ಲಂಡನ್ ಒಲಿಂಪಿಕ್ಸ್, ಪುರುಷರಂತೆ ಎಲ್ಲ ಸ್ಪರ್ಧೆಗಳಲ್ಲೂ ಮಹಿಳೆಯರು ಪಾಲ್ಗೊಂಡ ಸಮಾನತೆಯ ಮೊದಲ ಒಲಿಂಪಿಕ್ಸ್ ಎನಿಸಿತ್ತು. ಅಲ್ಲದೆ ಎಲ್ಲ ದೇಶಗಳಿಂದ ಮಹಿಳಾ ಸ್ಪರ್ಧಿಗಳೂ ಭಾಗವಹಿಸಿದ್ದರು. ಈ ಬಾರಿ ಟೊಕಿಯೊದಲ್ಲಿ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಪಥಸಂಚಲನದಲ್ಲಿ ಎಲ್ಲ ತಂಡಗಳಿಗೆ ತಲಾ ಇಬ್ಬರು ಧ್ವಜಧಾರಿಗಳನ್ನು ಹೊಂದಲು ಅವಕಾಶ ನೀಡುವ ಮೂಲಕ ಲಿಂಗ ಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
Advertisement
– ಒಲಿಂಪಿಕ್ಸ್ ರಿಂಗ್ ವಿಶೇಷತೆ:5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್ ಪಿತಾಮಹ ಫ್ರಾನ್ಸ್‌ನ ಪಿಯರ್ ಡಿ ಕೌಬರ್ಟಿನ್ ವಿನ್ಯಾಸಗೊಳಿಸಿದರು. ಈ ಒಲಿಂಪಿಕ್ಸ್ ಧ್ವಜ 1920ರ ಬೆಲ್ಜಿಯಂನ ಅಂಟೆÌರ್ಪ್‌ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ವಿಶೇಷವಾಗಿದೆ. – ಒಲಿಂಪಿಕ್ಸ್‌ನಲ್ಲಿ ಗ್ರೀಕ್‌ಗೆ ವಿಶೇಷ ಸ್ಥಾನಮಾನ
ಒಲಿಂಪಿಕ್ಸ್ ಆರಂಭೋತ್ಸವವನ್ನು ಮೊದಲ ಬಾರಿಗೆ ಅಳವಡಿಸಿದ್ದು 1908ರ ಲಂಡನ್ ಒಲಿಂಪಿಕ್ಸ್‌ನಲ್ಲಿ. ಈ ಉದ್ಘಾಟನ ಸಮಾರಂಭದಲ್ಲಿ ಕ್ರೀಡಾಪಟುಗಳ ಪಥಸಂಚಲನ ನಡೆಯುವಾಗ ಪ್ರತಿಸಲವೂ ಗ್ರೀಕ್ ತಂಡವೇ ಮುಂಚೂಣಿಯಲ್ಲಿರುತ್ತದೆ. ಚೊಚ್ಚಲ ಒಲಿಂಪಿಕ್ಸ್ ಸಂಘಟಿಸಿದ ಹೆಗ್ಗಳಿಕೆಗಾಗಿ ಗ್ರೀಕ್‌ಗೆ ಈ ವಿಶೇಷ ಗೌರವ ಸಲ್ಲುತ್ತದೆ. ಬಳಿಕ ಆತಿಥೇಯ ದೇಶದ ಭಾಷೆಯ ಅಲ್ಪಾಬೆಟಿಕ್ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ. – ಒಲಿಂಪಿಕ್ಸ್‌ನಲ್ಲಿ ಡೋಪಿಂಗ್
ಎಲ್ಲ ಕ್ರೀಡೆಗಳಲ್ಲಿರುವಂತೆ ಇದೀಗ ಒಲಿಂಪಿಕ್ಸ್‌ಗಳಲ್ಲಿಯೂ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ. ಬಿಯರ್ ಕುಡಿದಿದ್ದಕ್ಕಾಗಿ ಸ್ವೀಡನ್ ಆ್ಯತ್ಲೀಟ್ ಹನ್ಸ್-ಗುನ್ನಾರ್ ಲಿಲಿಜೆನ್‌ವಾಲ್ ನಿಷೇಧ ಶಿಕ್ಷೆ ಅನುಭವಿಸಬೇಕಾಯಿತು! ಇದಕ್ಕಾಗಿ ಅವರು ಗೆದ್ದಿದ್ದ ಕಂಚಿನ ಪದಕವನ್ನೂ ವಾಪಸ್ ಪಡೆಯಲಾಗಿತ್ತು. – ಅಭಿ