ಮುಂಬಯಿ: “ನ್ಯಾಯಾಲಯಗಳ ನಿರ್ಭೀತ ಸ್ವಾತಂತ್ರ್ಯ ಪ್ರಜ್ಞೆಯೇ 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವನ್ನು ರಕ್ಷಿಸಿತು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿ ದ್ದಾರೆ. ಮುಂಬಯಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ವೇಳೆ ಸ್ವಾತಂತ್ರ್ಯದ ಬೆಳಕು ನಂದಿ ಹೋಗುವ ಸ್ಥಿತಿಯ ಲ್ಲಿತ್ತು.
Advertisement
ಆದರೂ, ನ್ಯಾ| ರಾಣಾರಂತಹ ಜಡ್ಜ್ ಗಳು ಆ ಬೆಳಕನ್ನು ನಂದಿಹೋಗಲು ಬಿಡಲಿಲ್ಲ. ಸ್ವಾತಂತ್ರ್ಯವೆಂಬ ಧೈರ್ಯದ ಪ್ರಜ್ಞೆಯೇ ಅಂದು ಪ್ರಜಾಸತ್ತೆಯನ್ನು ರಕ್ಷಿಸಿತು ಎಂದು ಹೇಳಿದ್ದಾರೆ.