ಗಂಗಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೆದರಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ಸಚಿವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸಂಘ ಪರಿವಾರದ ಮುಖಂಡ ಹಾಗೂ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ನಗರದ ಐಎಂಎ ಭವನದಲ್ಲಿ ನಮೋ ಬ್ರಿಗೇಡ್ ಸಂಘಟನೆ ಏರ್ಪಡಿಸಿದ್ದ ಲೋಕಸಭಾ ಚುನಾವಣೆ, ಮೋದಿಗೆ ಬೆಂಬಲ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನರೇಂದ್ರ ಮೋದಿಯವರು ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ಅಮೂಲ್ಯ ಬದಲಾವಣೆ ಮಾಡಿದ್ದಾರೆ ಕೇವಲ ಒಂಬತ್ತು ವರ್ಷದಲ್ಲಿ 4.5 ಕೋಟಿ ಮನೆಗಳನ್ನು ಬಡವರಿಗಾಗಿ ನಿರ್ಮಿಸಿದ್ದಾರೆ. ದೇಶಕ್ಕೆ ಮಾರಕವಾಗಿದ್ದ ಕಲಂ 370 ರದ್ದು ಮಾಡಿದ್ದಾರೆ. ಕಾಶಿಯಲ್ಲಿ ಕಾರಿಡಾರ್ ನಿರ್ಮಿಸಿದ್ದಾರೆ .500 ವರ್ಷಗಳ ಹಿಂದುಗಳ ಕನಸಿನ ಶ್ರೀರಾಮ ಮಂದಿರ ನಿರ್ಮಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿದ್ದಾರೆ ಅಡುಗೆ ಸಿಲಿಂಡರ್ ಮತ್ತು ಪೆಟ್ರೋಲ್ ದರವನ್ನು ಕಡಿಮೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ವಿರೋಧಿಸಿದರು ಅತ್ಯಂತ ಕಡಿಮೆ ದರ ಮತ್ತು ಕೆಲವೆಡೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ವಿತರಣೆ ಮಾಡಿದ್ದಾರೆ ದೇಶವಿದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಮೂಲಕ ಮಾನವೀಯತೆಯನ್ನು ಮೋದಿಯವರು ಮೆರೆದಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಿ, ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲಿಸುವುದು ಅತಿ ಅಗತ್ಯವಾಗಿದೆ. ಒಂದು ಸಾವಿರ ವರ್ಷಗಳ ಭಾರತದ ಭವಿಷ್ಯವನ್ನು ಈ ಚುನಾವಣೆ ನಿರ್ಧಾರ ಮಾಡಲಿದೆ ಎಂದು ಮೋದಿಯವರು ಮನವರಿಕೆ ಮಾಡಿದ್ದು ಅಭ್ಯರ್ಥಿಗಳು ಯಾರೇ ಆಗಲಿ ಭಿನ್ನಮತವನ್ನು ಮರೆತು ಮೋದಿಯವರ ಕೈ ಬಲಪಡಿಸಲು ನಿಮ್ಮ ಮತ 400 ಲೋಕಸಭಾ ಸ್ಥಾನಗಳತ್ತ ಇರಬೇಕು. ನಿಮ್ಮ ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಈ ದೇಶದ ಪ್ರಧಾನಿ ಯಾರಾಗಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮತವನ್ನು ಚಲಾಯಿಸಬೇಕು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈ ದೇಶದಲ್ಲಿ ಸುಸ್ಥಿರವಾದಂತ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ ರಸ್ತೆಗಳು ದೇಶದ ಅಭಿವೃದ್ಧಿಯ ಪ್ರತಿಕವಾಗಿವೆ. ದೇಶದ ಯಾವುದೇ ಸ್ಥಳಕ್ಕೆ ಪ್ರಧಾನ ಮಂತ್ರಿ ಮೋದಿ ಹೋದರು ಆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆಯುತ್ತದೆ ಆದರೆ ಇತ್ತೀಚೆಗೆ ನನ್ನ ಒಬ್ಬ ಕಾಂಗ್ರೆಸ್ ಗೆಳೆಯ ಹೇಳಿದರು ಪ್ರಧಾನಮಂತ್ರಿ ಮೋದಿ ಅವರು ತೆರಳುವ ವಿಮಾನದ ನೆರಳು ಬೀಳುವ ಕ್ಷೇತ್ರದಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಆದ್ದರಿಂದ ದೇಶವೇ ಮೋದಿಮಯವಾಗಿದೆ, ಈ ಬಾರಿ ಮೋದಿಯ ಗೆಲುವು 400 ಸ್ಥಾನಗಳು ಖಚಿತವಾಗಿ ಲಭಿಸುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಶಿವಾನಂದ ಭಾವಿಕಟ್ಟಿ,ವೇದಿಕೆಯ ಮುಂಭಾಗದಲ್ಲಿ ಲೋಕಸಭಾ ನಿಯೋಜಿತ ಅಭ್ಯರ್ಥಿ ಡಾ.ಕೆ.ಬಸವರಾಜ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಬಿಜೆಪಿ ನಗರಸಭಾ ಸದಸ್ಯರು,ಬಿಜೆಪಿ ಮುಖಂಡರು, ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ಎಲ್ಲಾ ಘಟಕಗಳ ಪದಾಧಿಕಾರಿಗಳು ಯುವಕರು ಇದ್ದರು.