Advertisement

ಹಿಂಸಾಚಾರ ಭೀತಿ: ಅಮೆರಿಕದಾದ್ಯಂತ ಕಟ್ಟೆಚ್ಚರ

02:03 AM Jan 17, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅಧಿಕಾರ ಸ್ವೀಕಾರಕ್ಕೆ ಇನ್ನು 3 ದಿನಗಳಷ್ಟೇ ಬಾಕಿಯಿದ್ದು, ಅಮೆರಿಕದಾದ್ಯಂತ ಟ್ರಂಪ್‌ ಹಿಂಬಾಲಕರಿಂದ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ 50 ಪ್ರಾಂತ್ಯ ಗಳಲ್ಲೂ ಟ್ರಂಪ್‌ ಬೆಂಬಲಿಗರನ್ನು ಸಮರ್ಥವಾಗಿ ಎದುರಿಸಲು ದೇಶದ ಭದ್ರತಾ ಪಡೆ ಸನ್ನದ್ಧವಾಗಿದೆ.

Advertisement

ಮಿಚಿಗನ್‌, ವರ್ಜೀನಿಯಾ, ವಿಸ್ಕನ್ಸಿನ್‌, ಪೆನ್ಸಿಲ್ವೇನಿಯಾ, ವಾಷಿಂಗ್ಟನ್‌ ಸೇರಿ ಹಲವೆಡೆ ನ್ಯಾಶನಲ್‌ ಗಾರ್ಡ್‌ಗಳನ್ನು ನಿಯೋಜಿಸುವ ಮೂಲಕ ಭದ್ರತೆ ಹೆಚ್ಚಿಸಲಾಗಿದೆ. ಟೆಕ್ಸಾಸ್‌ ಪ್ರಾಂತ್ಯವು ತನ್ನ ರಾಜಧಾನಿಯನ್ನು ಶನಿವಾರದಿಂದ ಜ.20ರ ವರೆಗೂ ಮುಚ್ಚಲು ನಿರ್ಧರಿಸಿದೆ. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸಶಸ್ತ್ರ ಹಿಂಸಾಚಾರದ ಭೀತಿ ಇರುವ ಕಾರಣ, ಪೊಲೀಸರು, ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿದ್ದಾರೆ.

10 ಕೋಟಿ ಮಂದಿಗೆ ಲಸಿಕೆ: ಶನಿವಾರ ಮಾತನಾಡಿರುವ ಬೈಡೆನ್‌, ತಾವು ಅಧಿಕಾರ ಸ್ವೀಕರಿಸಿದ 100 ದಿನಗಳ ಒಳಗಾಗಿ ದೇಶದ 10 ಕೋಟಿ ಮಂದಿಗೆ ಕೊರೊನಾ ಲಸಿಕೆ ವಿತರಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ. ಕೋವಿಡ್‌ 19 ಕಾರ್ಯಪಡೆಯ ಪರೀಕ್ಷಾ ಸಲಹೆಗಾರರನ್ನಾಗಿ ಭಾರತೀಯ ಮೂಲದ ವಿದುರ್‌ ಶರ್ಮಾರನ್ನು ಬೈಡೆನ್‌ ನೇಮಕ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next