Advertisement

ಅಸ್ವಚ್ಛತೆಯಿಂದ ಕಾಯಿಲೆ ಭೀತಿ

12:33 PM Jul 30, 2019 | Suhan S |

ಮುದ್ದೇಬಿಹಾಳ: ಮಳೆಗಾಲ ಬಂದಿದ್ದು ನೀರು ನಿಲ್ಲದಂತೆ ನೋಡಿಕೊಂಡು ಮಲೇರಿಯಾ ಮತ್ತು ಡೆಂಘೀ ಕಾಯಿಲೆಯಿಂದ ದೂರವಿರಿ ಎಂದು ಒಂದು ಕಡೆ ಸರಕಾರವೇ ಜನ ಜಾಗೃತಿ ಮಾಡಿದರೆ ಇನ್ನೊಂದೆಡೆ ಸರಕಾರಿ ಅಧಿಕಾರಿಗಳು ಮಾತ್ರ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ವಿಷಾದನೀಯ ಸಂಗತಿಯಾಗಿದೆ.

Advertisement

ಪಟ್ಟಣದ ವಿವಿಧ ಬಡಾವಣೆ ಚರಂಡಿಗಳು ಕಸದಿಂದ ತುಂಬಿಕೊಂಡು ಗಲೀಜು ನೀರು ರಸ್ತೆಗೆ ಬರುತ್ತದೆ. ಅದರೆ ಪುರಸಭೆ ಅಧಿಕಾರಿಗಳು ಮಾತ್ರ ಇದರತ್ತ ಗಮನ ಹರಿಸುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಮೌಖೀಕವಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

ಚರಂಡಿ ನೀರು: ಪಟ್ಟಣದ ನೇತಾಜಿ ನಗರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಶಿವಯೋಗಿ ಸಿದ್ದರಾಮೇಶ್ವರ ವೃತ್ತದ ಪಕ್ಕ ದೊಡ್ಡ ಚರಂಡಿ ಇದೆ. ಚರಂಡಿ ಸ್ವಚ್ಛಗೊಳಿಸದ ಕಾರಣ ಗಲೀಜು ನೀರು ವೃತ್ತ ಸೇರಿದಂತೆ ರಸ್ತೆಗೂ ಬರುತ್ತದೆ. ಜನರು ವೃತ್ತದ ಪಕ್ಕಕ್ಕೂ ಹೋಗಲು ಸಾದ್ಯವಿಲ್ಲದಂತಾಗಿದೆ. ಆದ್ದರಿಂದ ದೇವತಾ ಮನುಷ್ಯನ ಹೆಸರಿನಲ್ಲಿ ವೃತ್ತ ನಿರ್ಮಿಸಿದ್ದು ಒಂದು ಸಮಾಜದವರು ಪುರಸಭೆ ನಿರ್ಲಕ್ಷ್ಯಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಮಾಂಸ ಮಾರಾಟ: ನೇತಾಜಿ ನಗರಕ್ಕೆ ತೆರಳುವ ರಸ್ತೆ ಅಕ್ಕಪಕ್ಕದಲ್ಲಿ ದಿನ ನಿತ್ಯವೂ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದರೆ ಮಾಂಸ ಮಾರಾಟಗಾರರು ಪ್ರಾಣಿಯನ್ನು ಕೊಂದು ಅದರ ಚರ್ಮಗಳನ್ನು ಇದೇ ಚರಂಡಿಗೆ ಎಸೆಯುತ್ತಾರೆ. ಇದರಿಂದ ಚರಂಡಿಗೆ ಹಂದಿಗಳ ಹಾವಳಿಯೂ ಹೆಚ್ಚಾಗಿರುತ್ತದೆ.

ಪುರಸಭೆ ನಿರ್ಲಕ್ಷ್ಯ: ನೇತಾಜಿ ನಗರಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಮಾಂಸ ಮಾರಾಟ ಮಾಡದಂತೆ ನಿವಾಸಿಗರು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಲಿಖೀತವಾಗಿ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ನಿವಾಸಿಗರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನೇತಾಜಿ ನಗರದ ನಾಗರಿಕರ ದೂರಾಗಿದೆ.

Advertisement

ಪಟ್ಟಣ ಸ್ವಚ್ಛತೆಗಾಗಿ ಪುರಸಭೆ ಎನ್ನುವ ಪದನಾಮವನ್ನು ಅಧಿಕಾರಿಗಳು ಅರಿತು ಮುಂಬರುವ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

ಸಿದ್ದರಾಮೇಶ್ವರರ ವೃತ್ತದ ಸುತ್ತ ಚರಂಡಿ ನೀರು ನಿಲ್ಲುತ್ತದೆ. ಇದರಿಂದ ವೃತ್ತದ ಹತ್ತಿರವೂ ಹೋಗಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇದೇ ರಸ್ತೆಯಲ್ಲಿ ಮಾಂಸ ಮಾರಾಟ ಮಾಡುತ್ತಿರುವುದು ಇದಕ್ಕೆ ಇನ್ನೊಂದು ಕಾರಣವಾಗಿದೆ.•ಪರಶುರಾಮ ನಾಲತವಾಡ, ನೇತಾಜಿ ನಗರ ನಿವಾಸಿ

 

•ಶಿವಕುಮಾರ ಶಾರದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next