ಕಾಣಿಸಿಕೊಂಡು ವಿಪರೀತ ಗಂಟು ನೋವು ಉಂಟಾಗಿದ್ದರಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಗೆ ಅ.14ರಂದು ದಾಖಲಾಗಿದ್ದರು. ವೈದ್ಯರು ರಕ್ತದ ಮಾದರಿ ಪಡೆದು ಅ.15ರಂದು ಇಲಿ ಜ್ವರ ಎಂಬುದನ್ನು ಖಚಿತಪಡಿಸಿದ್ದಾರೆ.
Advertisement
ಗಂಟು ನೋವು ಸೇರಿದಂತೆ ವಿಪರೀತ ಆಯಾಸ, ವಾಂತಿ ಲಕ್ಷಣ ಗೋಚರಿಸಿದ್ದು, ಬಿಳಿ ರಕ್ತಕಣ 42 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.ಇಲಿ ಜ್ವರದಿಂದ ಕಿಡ್ನಿ ಮತ್ತು ಲಿವರ್ ಸಮಸ್ಯೆ ಎದುರಾಗುವುದರಿಂದ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮೊದಲ ಬಾರಿಗೆ ಇಲಿಜ್ವರ ಪ್ರಕರಣ ಬೆಳಕಿಗೆ ಬಂದಿರು ವುದಾಗಿಯೂ ವೈದ್ಯರು ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರಕರಣ ಬೆಳಕಿಗೆ ಬಂದಿದ್ದರೂ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಗೆ ಮಾಹಿತಿ ಲಭಿಸಿಲ್ಲ.
ವೈದ್ಯಕೀಯವಾಗಿ ಲೆಪ್ಟೊಸ್ಪೈ ರೋಸಿಸ್ ಎಂದು ಕರೆಸಿಕೊಳ್ಳುವ ಇಲಿ ಜ್ವರದ ರೋಗಾಣು ಮಣ್ಣಲ್ಲಿ ಸುಮಾರು ಆರು ಗಂಟೆವರೆಗೆ ಮಾತ್ರ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು ಎಂಬುದು ದೃಢಪಟ್ಟಿದೆ. ನೀರಿನ ಮೂಲಕ ಹರಡುವುದರಿಂದ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ. ತಾಲೂಕಿನಲ್ಲಿ ಇಲಿ ಜ್ವರ ಪ್ರಕರಣ ಇದೇ ಮೊದಲು. ಕೆಲವು ದಿನಗಳ ಹಿಂದೆ ಕೊಕ್ಕಡದ ಬೇಬಿ ಎಂಬವರಿಗೆ ರೋಗ ಲಕ್ಷಣ ಕಂಡುಬಂದಿದ್ದು, ಅವರು ಗುಣಮುಖರಾಗಿ ಬಂದಿದ್ದಾರೆ. ಇದರ ಹೊರತಾಗಿ ಬೇರೆ ಪ್ರಕರಣದ ಮಾಹಿತಿ ಇಲ್ಲ. ಜಿಲ್ಲಾ ಆಸ್ಪತ್ರೆಗಳ ವರದಿ ಪಡೆದು ಪರಿಶೀಲಿಸಲಾಗುವುದು.
– ಡಾ| ಕಲಾಮಧು, ತಾ| ಆರೋಗ್ಯಾಧಿಕಾರಿ, ಬೆಳ್ತಂಗಡಿ