Advertisement

ಅತ್ಯಾಚಾರಿಗಳ ಭಯ: ಪಾಕ್‌ನಲ್ಲಿ ಗೋರಿಗಳಿಗೂ ರಕ್ಷಣೆ!

08:28 AM Apr 30, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರತಿ 2 ಗಂಟೆಗೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಉಗ್ರಗಾಮಿಗಳ ಮೂಲ ನೆಲವಾದ ಪಾಕಿಸ್ತಾನ, ಇದೀಗ ಅತ್ಯಾಚಾರಿಗಳ ದೇಶವಾಗಿ ಕುಖ್ಯಾತಿ ಪಡೆಯುತ್ತಿದೆ.

Advertisement

ಮತ್ತೂಂದೆಡೆ, ದೇಶದಲ್ಲಿ ಶವಗಳೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವ ವಿಚಿತ್ರ ಪ್ರಕರಣಗಳು ಅಧಿಕವಾಗುತ್ತಿದೆ. “ನೆಕ್ರೋಫಿಲಿಯಾ’ ಎಂದು ಕರೆಯುವ ಈ ಪ್ರಕರಣಗಳು ಪಾಕಿಸ್ತಾನದಲ್ಲಿ ದಿನೇ ದಿನೆ ಏರಿಕೆಯಾಗುತ್ತಿದೆ. ಪೋಷಕರು ತಮ್ಮ ಮಡಿದ ಹೆಣ್ಣುಮಕ್ಕಳನ್ನು ಈ ರೀತಿಯ ವಿಕೃತ ಅತ್ಯಾಚಾರದಿಂದ ಪಾರು ಮಾಡಲು ಗೋರಿಗಳಿಗೆ ಕಬ್ಬಿಣದ ಸಲಾಕೆಗಳನ್ನು ಅಳವಡಿಸುತ್ತಿದ್ದಾರೆ.

ವಿವಿಧ ಭಾಗಗಳಲ್ಲಿ ಶವಸಂಸ್ಕಾರ ಮುಗಿದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ಹೊರತೆಗೆದು ಲೈಂಗಿಕ ಸಂಪರ್ಕ ಎಸಗುವ ಪ್ರಕರಣಗಳು ಅಧಿಕವಾಗುತ್ತಿದೆ.

48 ಶವಗಳೊಂದಿಗೆ ಲೈಂಗಿಕ ಸಂಪರ್ಕ:
ಆಶ್ಚರ್ಯಕರ ಅಂಶವೆಂದರೆ, 2011ರಲ್ಲಿ ಮೊದಲ ಬಾರಿಗೆ “ನೆಕ್ರೋಫಿಲಿಯಾ’ ಪ್ರಕರಣ ಪಾಕಿಸ್ತಾನದಲ್ಲಿ ಬೆಳಕಿಗೆ ಬಂತು. ಕರಾಚಿಯ ಉತ್ತರ ನಜಿಮಾಬಾದ್‌ನಲ್ಲಿ ಸ್ಮಶಾನವನ್ನು ನೋಡಿಕೊಳ್ಳುತ್ತಿದ್ದ ಮೊಹಮ್ಮದ್‌ ರಿಜ್ವಾನ್‌ ಬರೋಬ್ಬರಿ 48 ಮಹಿಳಾ ಶವಗಳೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದು ಬಹಿರಂಗವಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದರು.

ಇನ್ನೊಂದೆಡೆ, ಪಾಕಿಸ್ತಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಶೇ.40ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರು ಪುರುಷರಿಂದ ದೌರ್ಜನ್ಯ ಅನುಭವಿಸಿದ್ದಾರೆ ಎಂದು ಪಾಕ್‌ ಮಾನವ ಹಕ್ಕುಗಳ ಆಯೋಗದ ವರದಿ ತಿಳಿಸಿದೆ.

Advertisement

ಪಾಕಿಸ್ತಾನವು ಇಂತಹ ಲೈಂಗಿಕ ಹತಾಶೆಯ ಸಮಾಜವನ್ನು ಸೃಷ್ಟಿಸಿದೆ. ಇಲ್ಲಿ ಪೋಷಕರಿಗೆ ತಮ್ಮ ಮಡಿದ ಮಗಳ ಗೋರಿಯನ್ನು ರಕ್ಷಿಸುವ ದುರ್ದೈವ ಬಂದಿದೆ.
– ಹ್ಯಾರಿಸ್‌ ಸುಲ್ತಾನ್‌, ಪಾಕ್‌ ಸಾಹಿತಿ

“ನೆಕ್ರೋಫಿಲಿಯಾ” ಎಂದರೇನು?
ಮಾನವ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ವಿಚಿತ್ರವಾಗಿ ಶವಗಳೊಂದಿಗೆ ಲೈಂಗಿಕ ಸಂಪರ್ಕ ನಡೆಸುವ ಮಾನಸಿಕ ಅಸ್ವಸ್ಥತೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next