Advertisement

ಜನತೆಗೆ ಆನೆ ಜೊತೆಗೆ ಚಿರತೆ ದಾಳಿ ಆತಂಕ

03:46 PM Aug 22, 2022 | Team Udayavani |

ಆಲೂರು: ತಾಲೂಕಿನಲ್ಲಿ ಮೂರ್ನಾಲ್ಕು ದಶಕಗಳಿಂದ ಕಾಡಾನೆಗಳ ದಾಳಿಯಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಶಾಶ್ವತವಾಗಿ ದಿವ್ಯಾಂಗರಾಗಿ ಬಳಲುತ್ತಿದ್ದಾರೆ. ಇದರ ಜೊತೆಗೆ ಇತ್ತೀಚಿಗೆ ಚಿರತೆ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಜನಸಾಮಾನ್ಯರನ್ನು ಅತಂಕಗೀಡು ಮಾಡಿದೆ.

Advertisement

ತಾಲೂಕಿನ ಕದಾಳು, ಹಂಚೂರು, ಕುಂದೂರು, ಬೈರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷಗೊಂಡು ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಈ ಭಾಗಗಳಲ್ಲಿ ಹಲವು ದಿನಗಳಿಂದ ಜನುವಾರು ಹಾಗೂ ನಾಯಿಗಳನ್ನು ಚಿರತೆ ಬಲಿ ತೆಗೆದುಕೊಂಡಿದೆ. ಚಿರತೆ ದಾಳಿಯಿಂದ ಪಾರು: ತುರುಗನಹಳ್ಳಿ ಗ್ರಾಮದ ಲಕ್ಷ್ಮಣ ಎಂಬುವವರು ಜಮೀನಿಗೆ ಗೊಬ್ಬರ ತೆಗೆದುಕೊಂಡು ಹೋಗುವ ವೇಳೆ ಚಿರತೆ ದಾಳಿಗೆ ಮುಂದಾಗಿದೆ. ತಕ್ಷಣ ಗೊಬ್ಬರದ ಮೂಟೆ ಬಿಟ್ಟು ಕಾಲ್ಕಿತ್ತ ಲಕ್ಷ್ಮಣ್‌, ಈ ಬಗ್ಗೆ ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಅದರೆ ಅದನ್ನು ನಂಬಲಿಲ್ಲ. ಆದರೆ ಅದೇ ದಿನ ಕಟ್ಟಿಹಾಕಿದ್ದ ನಾಯಿಯನ್ನು ಹೊತ್ತುಕೊಂಡು ತಿಂದು ಹಾಕಿದೆ. ಅದರ ಕುರುಹುಗಳು ಹೊಲದ ಬಳಿ ಕಾಣಿಸಿಕೊಂಡು ಗ್ರಾಮದ ಮುಖಂಡ ರು ಅರಣ್ಯ ಇಲಾಖೆ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅದರ ಹೆಜ್ಜೆ ಗುರುತು ಪತ್ತೆ ಹಚ್ಚಿ ಚಿರತೆ ಇರುವ ಬಗ್ಗೆ ಖಚಿತ ಪಡಿಸಿದ್ದು ಬೋನ್‌ ಅಳವಡಿಸಿದ್ದಾರೆ. ಅದರೆ ಬೋನ್‌ ಒಳಗಡೆ ಹೋಗದೆ ಹೊರ ಭಾಗದಲ್ಲಿ ನಾಯಿಗಳನ್ನು ಹಿಡಿದು ತಿನ್ನುತ್ತಿದೆ. ಇದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

ನಾಯಿಗಳ ಮೇಲೆ ದಾಳಿ: ಆಲೂರು ತಾಲೂಕಿನ ಬೆಟ್ಟದಹಳ್ಳಿ,ಟಿ.ತಿಮ್ಮನಹಳ್ಳಿ, ತಿಪ್ಪನಹಳ್ಳಿ, ಬೆಟ್ಟಹಳ್ಳಿ ಹಾಗೂ ಆಲೂರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕೆಲವು ನಾಯಿಗಳು ಕಾಣೆಯಾಗುತ್ತಿದ್ದು, ಜನಸಾಮಾನ್ಯರು ಚಿರತೆ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅದರೆ ಇತ್ತೀಚೆಗೆ ದಿನ ಗಳಲ್ಲಿ ಚಿರತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಜನರು ತಮ್ಮ ಜಮೀನಿಗೆ ಹೋಗಲು, ಮನೆಯಿಂದ ಹೊರ ಹೋಗಲು ಅತಂಕ ಪಡುವಂತಾಗಿದೆ. ತಕ್ಷಣ ಚಿರತೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಕದಾಳು ಗ್ರಾಪಂ ಸದಸ್ಯ ಕಾಂತರಾಜ್‌ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಚಿರತೆ ಸೆರೆಗೆ ಬೋನ್‌ ಇಡಲಾಗಿದೆ: ಅರಣ್ಯ ಇಲಾಖೆ ಸಿಬ್ಬಂದಿ ಭಾಗಗಳಲ್ಲಿ ಭೇಟಿ ನೀಡಿ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಇದುವರೆಗೂ ಚಿರತೆ ಕಾಣಿಸಿಕೊಂಡಿಲ್ಲ. ಊರನವರಿಗೆ ಕಾಣಸಿಕೊಂಡಿದೆ ಎಂಬ ಮಾಹಿತಿ ಹಿನ್ನೆಲೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆ ಸೆರೆಗೆ ಬೋನ್‌ ಇಡಲಾಗಿದೆ. ಅದರೆ ಈ ಭಾಗದಲಿ ಮೆಕ್ಕೆಜೋಳ ಹೆಚ್ಚಾಗಿ ಬೆಳದಿರುವುದರಿಂದ ಚಿರತೆ ಬೋನಿಗೆ ಬಿದ್ದಿಲ್ಲ. ಜನಸಾಮಾನ್ಯರು ಹೊರಗೆ ಹೋಗುವಾಗ ಎಚ್ಚರಿಕೆಯಿಂದ ಇರವಂತೆ ಮನವಿ ಮಾಡಿದ್ದಾರೆ.

ಚಿರತೆ ಸೆರೆಗೆ ಆಗ್ರಹ: ಗಣೇಶ್‌ : ಈ ಭಾಗದಲ್ಲಿ ಚಿರತೆ ದಾಳಿಯಿಂದ ಜಾನುವಾರು ಹಾಗೂ ಸಾಕು ನಾಯಿಗಳನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕಾಡಾನೆಯಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಜನರು ಈಗ ಮತ್ತೂಂದು ಗಂಭೀರ ಸಮಸ್ಯೆ ಎದುರಿಸಬೇಕಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಬೈರಾಪುರ ಗ್ರಾಪಂ ಸದಸ್ಯ ಸ್ನೇಹಜೀವಿ ಗಣೇಶ್‌ ಆಗ್ರಹಿಸಿದ್ದಾರೆ.

Advertisement

ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next