Advertisement
ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರಿಗೆ ರಾಜಸ್ವ ಕೊರತೆಯ ಸವಾಲು ಸ್ಪಷ್ಟವಾಗಿದೆ. ಸವಾಲುಗಳ ಮಧ್ಯೆ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಮಾತ್ರ ಲಕ್ಷ್ಯ ತಲುಪುವುದಕ್ಕೆ ಸಾಧ್ಯ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಬರುವ ದಿನಗಳು ಸರಕಾರಕ್ಕೆ ಹಗ್ಗದ ಮೇಲಿನ ನಡಿಗೆಯಾಗುವ ಸಾಧ್ಯತೆ ಇದೆ.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಗಳಿಗಾಗಿ 7,500 ಕೋಟಿ ರೂ. ಹೆಚ್ಚುವರಿ ಬೇಡಿಕೆಯನ್ನು ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟಿ ರುವುದು ಮತ್ತೂಂದು ಆತಂಕಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣೆ ಸರಕಾರದ ಆದ್ಯತೆ. ನಿಮ್ಮ ಬೇಡಿಕೆಗೆ ಬೆಂಬಲವಿದೆ. ಪೂರಕ ಬಜೆಟ್ ಮಂಡನೆ ವೇಳೆ ಈ ಬಗ್ಗೆ ಯೋಚಿಸೋಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.