ವಾಘಾ/ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರ್ ಕುರಿತಂತೆ ಪಾಕಿಸ್ಥಾನ ಮತ್ತು ಭಾರತದ ಸಮಿತಿಗಳು ರವಿವಾರ ಎರಡನೇ ಸುತ್ತಿನ ಸಭೆ ನಡೆಸಿದ್ದು, ಈ ವೇಳೆ ಕರ್ತಾರ್ಪುರದ ದೇರಾಬಾಬಾ ನಾನಕ್‌ಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿಯಿದೆ ಎಂದು ಭಾರತದ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ನಿರ್ಮಾ ಣಕ್ಕೆಂದು ಮಣ್ಣು ಹಾಕಲಾಗಿದ್ದು, ಇದರಿಂದ ಗುರುದ್ವಾರ ಮುಳುಗುವ ಭೀತಿ ಎದುರಾಗಿದೆ ಎನ್ನಲಾಗಿದೆ. ಇನ್ನೊಂದೆಡೆ ಕರ್ತಾರ್ಪುರಕ್ಕೆ ತೀರ್ಥ ಯಾತ್ರೆಯನ್ನು ತಡೆಯಲು ಪಾಕಿಸ್ಥಾನದಲ್ಲಿ ದುಷ್ಕೃತ್ಯ ನಡೆಯಬಹುದು ಎಂಬ ಬಗ್ಗೆಯೂ ಭಾರತ ತನ್ನ ಕಳವಳ ವನ್ನು ಪಾಕ್‌ಗೆ ವ್ಯಕ್ತಪಡಿಸಿದೆ. ಈ ಬಗ್ಗೆ ಭರವಸೆ ನೀಡಿದ ಪಾಕಿಸ್ಥಾನ, ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದಿದೆ.
ಇದಕ್ಕೆ ಪೂರಕವಾಗಿ ಪಾಕಿಸ್ಥಾನವು ತನ್ನ ಕರ್ತಾರ್ಪುರ ಸಮಿತಿಯಲ್ಲಿ ಖಲಿಸ್ತಾನ್ ಪರ ಮುಖಂಡ ಗೋಪಾಲ್ ಸಿಂಗ್ ಚಾವ್ಲಾನನ್ನು ಕೈಬಿಟ್ಟಿದೆ. ವಾಘಾ ಗಡಿಯಲ್ಲಿ ಭಾನು ವಾರ 13 ಸದಸ್ಯರನ್ನು ಒಳಗೊಂಡ ಪಾಕಿಸ್ಥಾನ ಸಮಿತಿ ಹಾಗೂ ಭಾರತದ ಸಮಿತಿ ಸಭೆ ನಡೆಸಿದೆ. ಇದು ಕರ್ತಾರ್ಪುರ ವಿಚಾರವಾಗಿ ನಡೆದ ಎರಡನೇ ಸಭೆಯಾಗಿದೆ.
ಒಟ್ಟಾರೆ ಶೇ. 80ರಷ್ಟು ವಿಚಾರಗಳ ಕುರಿತು ಉಭಯ ದೇಶ ಗಳು ಸಮ್ಮತಿಸಿವೆ. ಇನ್ನುಳಿದ ಶೇ. 20 ರಷ್ಟು ವಿಚಾರ ಗಳನ್ನು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ಒಮ್ಮತಕ್ಕೆ ಬರ ಲಾಗುತ್ತದೆ ಎಂದು ಸಭೆ ಅನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಲಾಗಿದೆ. ಮೊದಲ ಸುತ್ತಿನ ಮಾತುಕತೆಯನ್ನು ಮಾರ್ಚ್ 14 ರಂದು ನಡೆಸಲಾಗಿತ್ತು.
ಸೆಪ್ಟಂಬರ್‌ನಲ್ಲಿ ಕಾಮಗಾರಿ ಮುಕ್ತಾಯ: ನವೆಂಬರ್‌ನಲ್ಲಿ ಗುರುನಾನಕ್ 150ನೇ ಜಯಂತಿ ಆಚರಣೆ ನಡೆಯಲಿದ್ದು, ಈ ವೇಳೆ ಸಿಖVರು ಅಲ್ಲಿಗೆ ತೆರಳಲು ಅನುವು ಮಾಡುವಂತೆ ಸೆಪ್ಟೆಂಬರ್‌ನಲ್ಲೇ ಎಲ್ಲ ಕಾಮಗಾರಿ ಮುಕ್ತಾಯಗೊಳಿಸಲು ಎರಡೂ ದೇಶಗಳು ಸಮ್ಮತಿಸಿವೆ. ಇದಕ್ಕೆ ಸಂಬಂಧಿಸಿದಂತೆ ಕರಡು ನೀತಿಗೆ ಎರಡೂ ದೇಶಗಳು ಬಹುತೇಕ ಒಪ್ಪಿಗೆ ನೀಡಿವೆ.
ಸೇತುವೆ ನಿರ್ಮಾಣ ವಿಚಾರ ಮುಗಿಯದ ಗೊಂದಲ
ಭಾರತ ಮತ್ತು ಪಾಕಿಸ್ಥಾನದ ಗಡಿಗಳು ಸೇರುವಲ್ಲಿ ರಾವಿ ನದಿ ಇದ್ದು, ಇಲ್ಲಿ ಭಾರತ ಸೇತುವೆ ನಿರ್ಮಾಣ ಮಾಡುತ್ತಿದೆ. ಇದೇ ರೀತಿ ಪಾಕಿಸ್ಥಾನ ಕೂಡ ಸೇತುವೆ ನಿರ್ಮಾಣ ಮಾಡಬೇಕು ಎಂದು ಭಾರತ ಸೂಚಿಸಿದೆ. ಆದರೆ ಪಾಕಿಸ್ಥಾನ ಸೇತುವೆ ನಿರ್ಮಾಣ ಮಾಡುವುದರ ಬದಲಿಗೆ ಮಣ್ಣು ತುಂಬಿ ಎತ್ತರದ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಪ್ರಸ್ತಾಪಿಸಿದೆ. ಹೀಗೆ ಮಾಡಿದಲ್ಲಿ ಕರ್ತಾರ್ಪುರ ಹಾಗೂ ಭಾರತದ ಕಡೆಗೆ ನೀರು ನುಗ್ಗುವ ಭೀತಿ ಇರುತ್ತದೆ ಎಂದು ಭಾರತ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿನಿತ್ಯ 5 ಸಾವಿರ
ಯಾತ್ರಿಕರಿಗೆ ಅವಕಾಶ
ಭಾರತೀಯರಿಗೆ ವೀಸಾ ರಹಿತ ಪ್ರಯಾಣಕ್ಕೆ ಅನುವು ಮಾಡಲಾಗಿದೆ. ನಿತ್ಯ 5 ಸಾವಿರ ಜನರು ಕರ್ತಾರ್ಪುರಕ್ಕೆ ಭೇಟಿ ನೀಡಬಹುದು. ವೈಯಕ್ತಿಕವಾಗಿ, ಗುಂಪಾಗಿಯೂ ತೆರಳಬಹುದು. ಅಷ್ಟೇ ಅಲ್ಲ, ನಡೆದುಕೊಂಡು ಪ್ರಯಾಣಿಸಲೂ ಅವಕಾಶವಿದೆ. ಪ್ರತೀ ದಿನ 5 ಸಾವಿರ ಹಾಗೂ ವಿಶೇಷ ದಿನಗಳಲ್ಲಿ 10 ಸಾವಿರ ಜನರಿಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಭಾರತ ಬೇಡಿಕೆ ಮುಂದಿಟ್ಟಿದೆ.