ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು. ರಸ್ತೆ ರಚನೆಗೆ 1.84 ಕೋಟಿ ರೂ. ಮತ್ತು 5ವರ್ಷಗಳ ನಿರ್ವಹಣೆ ಹಾಗೂ 6ನೇ ವರ್ಷದ ನವೀಕರಣಕ್ಕೆ 31.83 ಲಕ್ಷ, ಅಂದರೆ ಈ ರಸ್ತೆ ಅಭಿವೃದ್ಧಿಗೆ 221.50 ಲಕ್ಷ ರೂ. ಅನುದಾನ ಇರಿಸಲಾಗಿದೆ.
Advertisement
ಇದೀಗ ಕನ್ನಡ್ಕ ಬಸ್ಸು ತಂಗುದಾಣದ ಬಳಿ ರಸ್ತೆ ಕುಸಿದು ಹೋಗಿದ್ದು ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿದೆ. ಇದರಿಂದ ಸುಮಾರು 100 ಮೀಟರ್ ರಸ್ತೆ ಮಧ್ಯೆ ಬಿರುಕು ಕಾಣಿಸಿಕೊಂಡಿದ್ದು, ಮೋರಿಯ ಪಕ್ಕದಲ್ಲಿ ನೀರು ಶೇಖರಣೆಗೊಳುತ್ತಿದೆ. ಇದೀಗ ರಸ್ತೆ ಸಂಪರ್ಕ ಕಡಿತಗೊಳ್ಳುವ ಅತಂಕ ಸಾರ್ವಜನಿಕರಲ್ಲಿ ಮೂಡಿದೆ.
ಕನ್ನಡ್ಕ ಎಂಬಲ್ಲಿ ರಸ್ತೆ ನಿರ್ಮಿಸುವಾಗ ಮಣ್ಣು ಹಾಕಿ ಹದ ಮಾಡಿ ಎತ್ತರ ತಗ್ಗನ್ನು ಸರಿಪಡಿಸಲಾಗಿತ್ತು. ಮಣ್ಣು ಸರಿಯಾಗಿ ಸೆಟ್ ಆಗದೇ ಇರುವುದು ಮತ್ತು ನೀರಿನ ಒರತೆ ಹೆಚ್ಚು ಇರುವುದರಿಂದ ಕುಸಿತವಾಗಿದೆ ಎಂಬ ಮಾತು ಸಾರ್ವಜನಿಕರಿಂದ ವ್ಯಕ್ತವಾಗಿದೆ. ಕೇರಳ-ಕರ್ನಾಟಕ ಸಂಪರ್ಕಿಸುವ ರಸ್ತೆ ಇದಾಗಿದ್ದು.ಸರಕಾರಿ, ಖಾಸಗಿ ಬಸ್‌ಗಳು, ಇತರ ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ಕನ್ನಡ್ಕ, ಸುಳ್ಯಪದವು, ಗಡಿಭಾಗದ ಜನರಿಗೆ ಈ ರಸ್ತೆ ಮುಖ್ಯವಾಗಿದೆ. ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಕೆಂಪುಕಲ್ಲು ಗಳನ್ನು ಸಾಗಾಟ ಮಾಡಲಾಗುತ್ತಿದೆ. ನಿರಂತರವಾಗಿ ಘನ ವಾಹನಗಳು ಸಂಚರಿಸುತ್ತಿರುವುದರಿಂದ ಮೋರಿಯ ಸಮೀಪ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದೆ.
Related Articles
Advertisement
ಕಾಮಗಾರಿಯಲ್ಲಿ ಕೊರತೆರಸ್ತೆ ನಿರ್ಮಾಣ ಮಾಡುವಾಗ ಮಣ್ಣು ತುಂಬಿಸಲಾಗಿತ್ತು. ಮಣ್ಣು ಹಾಕಿರುವುದರಿಂದ ರಸ್ತೆ ಬಿರುಕು ಬಿಟ್ಟಿದೆ. ಒರತೆ ಇರುವ ಪ್ರದೇಶವಾಗಿದೆ. ಇದೀಗ ಮಣ್ಣು ಸಡಿಲಗೊಂಡಿದೆ. ಮಳೆಗಾಲದಲ್ಲಿಯೂ ಕೆಂಪು ಕಲ್ಲು ಸಾಗಾಟದ ಲಾರಿಗಳು ನಿರಂತರವಾಗಿ ಸಂಚರಿಸುತ್ತಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ರಸ್ತೆಯ ಭಾಗದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸೂಕ್ತ ಕ್ರಮಕೈಗೊಳ್ಳಬೇಕು.
- ಶ್ರೀಧರ ಪೂಜಾರಿ,
ಸಾಮಾಜಿಕ ಕಾರ್ಯಕರ್ತ ನನ್ನ ಗಮನಕ್ಕೆ ಬಂದಿಲ್ಲ
ರಸ್ತೆ ಪರಿಸ್ಥಿತಿಯ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಬಿರುಕು ಬಿಟ್ಟ ಮತ್ತು ಹೊಂಡಗಳ ರಸ್ತೆಯನ್ನು ಪರಿಶೀಲನೆ ಮಾಡುತ್ತೇನೆ. ರಸ್ತೆಯಲ್ಲಿ ಹೊಂಡಗಳು ಇದ್ದರೆ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದು ನಂತರ ಪುನ: ಡಾಮರೀಕರಣ ಗೊಳಿಸಲಾಗುವುದು.
– ಜನಾರ್ದನ
ಎಂಜಿನಿಯರ್ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ