Advertisement
ನದಿ ಮತ್ತು ರಾಜಕಾಲುವೆಗಳಿಗೆ ಅಕ್ಕಪಕ್ಕ ಇರುವ ನೂರಾರು ಮನೆಗಳು ಶೌಚ ನೀರನ್ನು ನೇರವಾಗಿ ಬಿಡುವುದರಿಂದ ಇಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ದುರ್ವಾಸನೆಯಿಂದ ಪಾದಚಾರಿಗಳು ಮೂಗುಮುಚ್ಚಿ ನಡೆಯು ವಂತಾಗಿದೆ. ಮನೆಯಲ್ಲಿ ಫ್ಯಾನ್ ಬಳಸಿದರೆ ದುರ್ವಾಸನೆಯ ಗಾಳಿ ಬೀಸುತ್ತದೆ. ಊಟಕ್ಕೆ ಕುಳಿತಕ್ಕೆ ವಾಂತಿ ಬರುವಷ್ಟು ಕೆಟ್ಟ ಗಾಳಿ ಈ ಪ್ರದೇಶದಲ್ಲಿ ತುಂಬಿದೆ. ದೂರದ ಬೈಕಂಪಾಡಿಯಿಂದ ಕೈಗಾರಿಕಾ ಪ್ರದೇಶ, ಎಸ್‌ಇಝಡ್ ಕಾಲನಿ, ತೋಕೂರು ಜೋಕಟ್ಟೆ ಆಗಿ ಈ ನೀರು ನೇರವಾಗಿ ಫಲ್ಗುಣಿ ಒಡಲನ್ನು ಸೇರಿ ಮಳವೂರು ಕುಡಿಯುವ ನೀರಿನ ಕೇಂದ್ರಕ್ಕೆ ಸಾಗುತ್ತದೆ.
ಇಲ್ಲಿ ಸರಿಯಾದ ಮಲೀನ ನೀರು ಸಂಸ್ಕರಣ ಘಟಕಗಳಿಲ್ಲ. ಇರುವ ಸಂಸ್ಕ ರಣಾ ಘಟಕಗಳು ಒಂದು ವರ್ಷದಿಂದ ನಿಷ್ಕ್ರಿಯವಾಗಿವೆ. ಈ ಬಾರಿ ಮಳೆಯ ಕೊರತೆಯೂ ಇದೆ. ಇದೀಗ ಈ ರಾಜಕಾಲುವೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದ್ದರೂ ಮಲೀನ ನೀರು ಹೆಚ್ಚು ಹರಿಯುತ್ತಿದೆ. ರೈಲ್ವೇ ಕಾಮಗಾರಿ ಸಂದರ್ಭ ಹಾಕಲಾದ ಮಣ್ಣು ಕಾಲುವೆಯ ಸಹಜ ಹರಿವಿಗೆ ತಡೆ ಒಡ್ಡಿದೆ. ಇದರಿಂದ ನಿಂತ ನೀರು ಮತ್ತಷ್ಟು ದುರ್ವಾ ಸನೆ ಬೀರಿ ವಾತಾವರಣವನ್ನು ಕೆಡಿಸಿದೆ. ಆರೋಗ್ಯದ ಮೇಲೂ ಪರಿಣಾಮ
ನಾನಾ ಬಡಾವಣೆಗಳಿಂದ ಒಳಚರಂಡಿ ಗಳ ಮೂಲಕ ಹರಿದುಬರುವ ಕೊಳಕು ನೀರು ನದಿಗೆ ಸೇರ್ಪಡೆಯಾಗುತ್ತಿದ್ದರಿಂದ ನದಿ ನೀರು ಕಲುಷಿತವಾಗುತ್ತಿದೆ. ಇದು ಮೀನು ಸಂತತಿ, ಜಲಚರ ಗಳ ಜೀವಕ್ಕೆ ಮಾರಕವಾಗಿದೆ. ಅಲ್ಲದೇ,ನದಿ ತೀರದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
Related Articles
ಹಲವು ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿ ತೋಕೂರು ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ಕೊಳೆತು ನಾರುತ್ತಿದೆ. ಇದು ಅಲ್ಲಿಂದ ಅರ್ಧ ಕಿ.ಮೀ. ದೂರದವರೆಗೆ ಹರಿದು ಫಲ್ಗುಣಿಯನ್ನು ಸೇರುತ್ತದೆ. ಈಗಾಗಲೇ ಈ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಮೀನುಗಾರಿಕೆ, ಕೃಷಿ ಚಟುವಟಿಕೆಗಳು ಪೂರ್ಣವಾಗಿ ಸಂಕಷ್ಟದಲ್ಲಿವೆ. ತೋಕೂರು, ಅತ್ರಬೈಲು, ಮೇಲುಕೊಪ್ಪಲ, ಕೂಳೂರು ಭಾಗದ ಜನತೆಗೆ ನದಿ ನೀರು ಉಪಯೋಗಕ್ಕೆ ಬಾರದಂತಾಗಿದೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ.
Advertisement
ದುರಸ್ತಿಗೆ ಸೂಚಿಸಲಾಗಿದೆವಿಶೇಷ ಆರ್ಥಿಕ ವಲಯ ದಲ್ಲಿರುವ ಕಾಲನಿಯ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆ ನಿಷ್ಕ್ರಿಯ ಆಗಿದೆ.ಹೀಗಾಗಿ ಅವರಿಗೆ ನೋಟಿಸ್ ನೀಡಿ ಕೂಡಲೇ ದುರಸ್ತಿ ಪಡಿಸಲು ಸೂಚಿಸಲಾಗಿದೆ. ಹಲವು ಬರಿ ಇಲ್ಲಿನ ನೀರನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಡ್ರೈನೇಜ್ ನೀರು ನೇರವಾಗಿ ಬಿಡುವುದ ರಿಂದ ಈ ಸಮಸ್ಯೆ ಆಗುತ್ತಿದೆ.
– ರಾಜಶೇಖರ ಪುರಾಣಿಕ್, ಮುಖ್ಯಾಧಿಕಾರಿ,ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಲಕ್ಷ್ಮೀ ನಾರಾಯಣ ರಾವ್