Advertisement
60 ವರ್ಷಗಳ ಇತಿಹಾಸ ಸುಮಾರು 60 ವರ್ಷಗಳ ಇತಿಹಾಸ ಹೊಂದಿರುವ ಸಬಳೂರು ಶಾಲೆಯಲ್ಲಿ 133 ವಿದ್ಯಾರ್ಥಿಗಳು, ಆರು ಶಿಕ್ಷಕರಿದ್ದಾರೆ. ಒಟ್ಟು ಹತ್ತು ಕೊಠಡಿಗಳಿವೆ, ಇದರಲ್ಲಿ ಒಂದು ಸಭಾ ಭವನ ಸೇರಿದಂತೆ ಐದು ಕೊಠಡಿಗಳು ಇರುವ ಹಳೆಯ ಕಟ್ಟಡದಲ್ಲಿ ಸಭಾಭವನದ ಸ್ಥಿತಿ ಕೇಳುವವರಿಲ್ಲ. ಶಿಕ್ಷಕರ ಕಚೇರಿ ಹಾಗೂ ಎಂಟನೇ ತರಗತಿಯನ್ನು ಸೇರ್ಪಡಿಸುವ ಛಾವಣಿ ಕುಸಿದು ಹೋಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಜೀವ ಭಯದಿಂದ ಪಾಠ ಕೇಳುವಂತಾಗಿದೆ.
ಸಭಾಭವನದ ಕೊಠಡಿಯ ಗೋಡೆಗಳು ಎರಡು ಭಾಗದಲ್ಲಿ ಬಿರುಕುಗೊಂಡಿದ್ದು, ಎರಡು ಬಾರಿಯ ತೇಪೆಯೂ ಮಾಯವಾಗಿದೆ. ಇನ್ನಷ್ಟು ಮಳೆ ಮುಂದುವರಿದರೆ ಗೋಡೆ ಕುಸಿಯುವ ಹಂತಕ್ಕೆ ತಲುಪಲಿದೆ. ಎಂಟನೇ ತರಗತಿಯ ಕೊಠಡಿಯ ಛಾವಣಿ ಶಿಥಿಲಗೊಂಡು ನೀರು ಸೋರುವ ಹಿನ್ನೆಲೆಯಲ್ಲಿ ಜೋರು ಮಳೆ ಗಾಳಿ ಬಂದರೆ ವಿದ್ಯಾರ್ಥಿಗಳನ್ನು ಬೇರೆ ತರಗತಿಗಳಿಗೆ ಸ್ಥಳಾಂತರಿಸುವ ಅನಿವಾರ್ಯತೆ ಶಿಕ್ಷಕರದ್ದು. ಇತ್ತ ಈ ಕೊಠಡಿಗೆ ಅಂಟಿಕೊಂಡಿರುವ ಶಿಕ್ಷಕರ ಕೊಠಡಿಯೂ ಸೋರುತ್ತದೆ. ಸಭಾಭವನದಲ್ಲಿ ನಾಲ್ಕು ಹಾಗೂ ಐದನೇ ತರಗತಿಯನ್ನು ನಡೆಸಲಾಗುತ್ತಿತ್ತು. ಈಗ ನಾಲ್ಕನೇ ತರಗತಿಯನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಖ್ಯಶಿಕ್ಷಕರ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ಅರ್ಧದಲ್ಲಿರುವ ರಂಗಮಂದಿರ
ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ರಂಗ ಮಂದಿರದ ಕಾಮಗಾರಿ ಅರ್ಧದಲ್ಲೇ ಇದೆ. ಜಿ.ಪಂ. ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಪ್ರಾಧಿಕಾರದ ಒಂದಷ್ಟು ಅನುದಾನ ಹಾಗೂ ಸಾರ್ವಜನಿಕರ ಸಹಕಾರದಿಂದ ಕಾಮಗಾರಿ ಆರಂಭಿಸಿದ್ದು, ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.
Related Articles
Advertisement
ಛಾವಣಿ ಕುಸಿಯುವ ಭೀತಿಈ ಹಳೆಯ ಕಟ್ಟಡದ ಛಾವಣಿಯನ್ನು ಜಿ.ಪಂ. ಹಾಗೂ ತಾ.ಪಂ.ನ 90 ಸಾವಿರ ರೂ. ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ. ವಿಶೇಷವೆಂದರೆ ದುರಸ್ತಿ ಮಾಡಿರುವ ಛಾವಣಿಯ ಪಕ್ಕಾಸುಗಳು ಕಳಪೆಯಾಗಿರುವುದರಿಂದ ಛಾವಣಿ ಕುಸಿಯುವ ಹಂತದಲ್ಲಿದೆ. ಇತ್ತೀಚೆಗೆ ಗ್ರಾ.ಪಂ.ನ ವಾರ್ಡ್ ಸಭೆ ಇದೇ ಶಾಲಾ ಸಭಾಭವನದಲ್ಲಿ ನಡೆಯುತ್ತಿದ್ದಾಗ ಜೋರು ಗಾಳಿ ಮಳೆ ಬಂದು ಗ್ರಾಮಸ್ಥರು ಹಾಗೂ ಅಧಿಕಾರಿಗಳು ಬೇರೆ ಕೊಠಡಿಗೆ ಸ್ಥಳಾಂತರಗೊಂಡಿದ್ದರು. ಈ ಸಭಾಭವನದ ಕೊಠಡಿ ಮತದಾನ ಕೇಂದ್ರವೂ ಆ ದ್ದು, ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಟ್ಟಡದ ಪರಿಸ್ಥಿತಿ ಅರಿವಿಗೆ ಬಂದಿತ್ತು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದರು. ಕಟ್ಟಡದ ಪರಿಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳಿಗೆ ಮುಖ್ಯ ಶಿಕ್ಷಕರು ಮನವಿ ಮಾಡಿದ್ದು, ಈವರೆಗೆ ಕ್ರಮ ಕೈಗೊಂಡಿಲ್ಲ. ಶಿಥಿಲಗೊಂಡಿರುವ ಐದು ಕೊಠಡಿಗಳ ಕಟ್ಟಡ ಸಂಪೂರ್ಣ ನೆಲಸಮ ಮಾಡಿ ನೂತನವಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರಿಂದ ಆಗ್ರಹಿಸಿದ್ದಾರೆ. ನೂತನ ಕಟ್ಟಡ ನಿರ್ಮಾಣ ಸೂಕ್ತ
ಶಾಲಾ ಕೊಠಡಿಗಳ ಗೋಡೆಗಳು ಬಿರುಕುಗೊಂಡು ಎರಡು ವರ್ಷಗಳು ಕಳೆದಿವೆ. ಛಾವಣಿಗಳು ಕುಸಿಯುತ್ತಿವೆ. ಈ ಹಿನ್ನೆಯಲ್ಲಿ ಐದು ಕೊಠಡಿಗಳಿರುವ ಹಳೆಯ ಕಟ್ಟವನ್ನು ಸಂಪೂರ್ಣ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣವಾದರೆ ಮಾತ್ರ ಸಮಸ್ಯೆಗೆ ಪರಿಹಾರವಾಗುತ್ತದೆ. ದುರಸ್ತಿ ಮಾಡಿದರೆ ಮತ್ತೆ ಮತ್ತೆ ದುಸ್ಥಿತಿಗೆ ಹೋಗುವುದು ಖಂಡಿತ. ಈ ಹಿನ್ನೆಲೆಯಲ್ಲಿ ತತ್‌ಕ್ಷಣ ನೂತನ ಕಟ್ಟಡ ನಿರ್ಮಿಸಬೇಕು.
– ಶೇಖರ ಗೌಡ ಕೊಲ್ಯ,
ಅಧ್ಯಕ್ಷ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಮನವಿ ಮಾಡಲಾಗಿದೆ
ಕಟ್ಟಡ ಹಾಗೂ ಛಾವಣಿ ಶಿಥಿಲಾ ವಸ್ಥೆಗೆ ತಲುಪಿ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ದೂಡುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಗಾಳಿಮಳೆಯ ಸಂದರ್ಭದಲ್ಲಿ ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಲಾಗುತ್ತದೆ. ಕಟ್ಟಡದ ದುಸ್ಥಿತಿಯ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ.
– ವಾರಿಜಾ,
ಮುಖ್ಯಶಿಕ್ಷಕಿ.