Advertisement

ಕೃಷಿ ಭೂಮಿಗೆ ಜೇಡಿ ಮಣ್ಣು ನುಗ್ಗುವ ಭೀತಿ

11:27 PM Jun 11, 2019 | sudhir |

ಬೈಂದೂರು: ಕಳೆದ ಬಾರಿ ಮಳೆಗಾಲದಲ್ಲಿ ಬೈಂದೂರಿನಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ವರ್ಷ ಒಂದಷ್ಟು ಕೆಲಸಗಳಾಗಿದ್ದರೂ, ಕೃತಕ ನೆರೆ ಭೀತಿ ಇನ್ನೂ ತಗ್ಗಿಲ್ಲ.

Advertisement

ಹೆದ್ದಾರಿ ಕಿರಿಕಿರಿ
ಕಳೆದ ನಾಲ್ಕೈದು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ಬಳಿಕ ಬೈಂದೂರು ಪರಿಸರದ ಪಟ್ಟಣ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಇಳಿಜಾರು ಪ್ರದೇಶ, ನೀರಿನಿಂದಾವೃತವಾಗುವ ಸ್ಥಳಗಳ ಕುರಿತು ಗಂಭೀರವಾಗಿ ಪರಿಗಣಿಸದ್ದರಿಂದ ಸಮಸ್ಯೆಯಾಗುತ್ತಿದೆ. ಎಲ್ಲೆಡೆ ಚರಂಡಿ ಅವ್ಯವಸ್ಥೆ ಸಾಮಾನ್ಯವಾಗಿದೆ. ಬೈಂದೂರಿನ ಪ್ರಮುಖ ರಸ್ತೆಗಳಲ್ಲೇ ಚರಂಡಿ ಸರಿಯಾಗಿಲ್ಲ.

ಹೂಳೆತ್ತುವ ಯತ್ನ
ಬೈಂದೂರು ನಗರ ವ್ಯಾಪ್ತಿ ಯಡ್ತರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ ವಿವಿಧ ಇಲಾಖೆಗಳಿಗೆ ಚರಂಡಿ, ನದಿ, ತೊರೆಗಳ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮುನ್ನೆಚ್ಚರಿಕೆವಹಿಸಬೇಕು ಎಂದು ಪಂಚಾಯತ್‌ ಲಿಖೀತ ಮನವಿ ನೀಡಿದೆ. ಪಂಚಾಯತ್‌ನಿಂದಲೂ ಹೂಳೆತ್ತುವ ಯತ್ನ ನಡೆದಿದೆ. ಒತ್ತಿನೆಣೆ ಗುಡ್ಡದಿಂದ ಜೇಡಿಮಣ್ಣು ತೊರೆಗಳ ಮೂಲಕ ಕೃಷಿ ಭೂಮಿಗೆ ನುಗ್ಗುತ್ತದೆ. ವತ್ತಿನಕಟ್ಟೆ ಮುಂತಾದೆಡೆ ಸಮಸ್ಯೆಯಾಗುವ ಕಾರಣ ಸರಿಪಡಿಸಲು ತಿಳಿಸಲಾಗಿದೆ. ಪಂಚಾಯತ್‌ ಕಲ್ಲು ಕೋರೆ, ನದಿಗಳು ಗ್ರಾಮೀಣ ಭಾಗದಲ್ಲಿ ಜಾಗೃತೆ ವಹಿಸುವ ಕ್ರಮಕೈಗೊಂಡಿದೆ ಎಂದು ಪಂಚಾಯತ್‌ ಅಭಿವೃದ್ದಿ ಅಧಿಕಾರಿ ರುಕ್ಕನ್‌ಗೌಡ ತಿಳಿಸಿದ್ದಾರೆ.

ಜಂಕ್ಷನ್‌ಗಳಲ್ಲಿ ಕಾಡುವ ಸಮಸ್ಯೆ
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಯಡ್ತರೆ, ಬೈಂದೂರು, ಹೊಸ ಬಸ್‌ ನಿಲ್ದಾಣ ಭಾಗಗಳಲ್ಲಿ ಸಮಸ್ಯೆ ಎದುರಾಗಲಿದೆ. ದಿನಗಳ ಹಿಂದೆ ಸಹಾಯಕ ಕಮಿಷನರ್‌ ಸಭೆ ನಡೆಸಿದ್ದು, ಕಾಮಗಾರಿ ಕಂಪೆನಿಗೆ ನೋಟಿಸ್‌ ನೀಡಿದ್ದರು. ಮುನ್ನೆಚ್ಚರಿಕೆ ವಹಿಸದಿದ್ದರೆ ಮಳೆಗಾಲದಲ್ಲಿ ಅಪಾಯ ಖಂಡಿತ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಮಳೆಗಾಲದ ಮುನ್ನೆಚ್ಚರಿಕೆಗೆ ಬೈಂದೂರು ತಾ. ವ್ಯಾಪ್ತಿಯ ಎಲ್ಲ ಗ್ರಾ.ಪಂ.ಗಳಿಗೆ ಮುಂಜಾಗ್ರತೆಗೆ ಸೂಚಿಸಲಾಗಿದೆ. ಬೈಂದೂರು ತಾಲೂಕಿನಲ್ಲಿ ಕಂದಾಯ ಇಲಾಖೆ ಮಳೆಗಾಲದ ದೂರು ಸ್ವೀಕರಿಸಲು ಮತ್ತು ತಕ್ಷಣ ಮಾಹಿತಿ ಪಡೆಯಲು ದಿನದ 24 ಗಂಟೆ ಕಾರ್ಯಾಚರಿಸುವ ಸೇವಾ ಕೇಂದ್ರ ಸ್ಥಾಪಿಸಿದ್ದು, ಅಲ್ಲಿಗೆ ಕರೆ ಮಾಡಬಹುದಾಗಿದೆ.
-ಬಿ.ಪಿ. ಪೂಜಾರ್‌, ತಹಶೀಲ್ದಾರ್‌ ಬೈಂದೂರು ತಾ. ಕಚೇರಿ

Advertisement

ಮಳೆಗಾಲ ಆರಂಭವಾಗುವ ಮುಂಚಿತವಾಗಿ ಸಾರ್ವಜನಿಕರ ದೂರು ಬಂದಿರುವ ಬಹುತೇಕ ಕಡೆಗಳಲ್ಲಿ ಸರಿಪಡಿಸಲಾಗಿದೆ. ಮಳೆಗಾಲದಲ್ಲಿ 24 ತಾಸು ದೂರು ಸ್ವೀಕರಿಸಿ ಸ್ಪಂದಿಸುತ್ತೇವೆ.
-ಯಶವಂತ ಬಳೆಗಾರ್‌, ಸಹಾಯಕ ಎಂಜಿನಿಯರ್‌ , ಮೆಸ್ಕಾಂ

Advertisement

Udayavani is now on Telegram. Click here to join our channel and stay updated with the latest news.

Next