Advertisement
ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟಗೊಂಡು ದೊಡ್ಡದುರಂತ ಸಂಭವಿಸಿ, ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಹಿಂದೆಯೂ ದೇವ ಭೂಮಿಯಲ್ಲಿ ಪ್ರಕೃತಿ ಮುನಿಸಿಗೆನೂರಾರು ಜೀವಗಳು ಬಲಿಯಾಗಿದ್ದವು. ಜೊತೆಗೆಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಸಿಡಿಮದ್ದುಗಳ ಲಾರಿಸ್ಫೋಟಗೊಂಡು ಹಲವು ಜೀವಗಳು ಬಲಿಯಾಗಿದ್ದವು.ಇವೆಲ್ಲದಕ್ಕೆ ಪ್ರಕೃತಿಯ ಮಡಿಲಲ್ಲಿ ನಡೆಯುತ್ತಿರುವ ಅಕ್ರಮಕಲ್ಲು, ಮರಳು ಗಣಿಗಾರಿಕೆ, ಅಭಿವೃದ್ಧಿ ಕಾಮಗಾರಿಗಳೇಕಾರಣ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ. ಮಿತಿ ಮೀರಿದ ಅಭಿವೃದ್ಧಿ ಕಾರ್ಯಗಳಿಂದ ಇಂತಹದ್ದೇದುರಂತ ರಾಜ್ಯದ ಮಲೆನಾಡು ಮತ್ತು ಪಶ್ಚಿಮಘಟ್ಟಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು. ಆದರೆ, ಇದ್ಯಾವುದನ್ನೂ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ತಾಲೂಕಿನ ಶಿರಾಡಿ ಘಾಟ್ ಪಕ್ಕದ ಕೊಡಗು, ಚಿಕ್ಕಮಗಳೂರುಜಿಲ್ಲೆಗಳಲ್ಲಿ ಪ್ರತಿ ವರ್ಷ ಬೆಟ್ಟ ಗುಡ್ಡಗಳ ಕುಸಿತಸಂಭವಿಸುತ್ತಲೇ ಇದೆ. ತಾಲೂಕಿನಲ್ಲೂ ಇಂತಹದ್ದೇಅನಾಹುತ ಸಂಭವಿಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.
Related Articles
Advertisement
ಶಿರಾಡಿ ಘಾಟ್ ಅಡ್ಡ ಹೊಳೆಯಿಂದ ಮಂಗಳೂರು ಕಡೆಗೆ ಸುರಂಗ ಮಾರ್ಗಗೆ ಸಿದ್ಧತೆ : ಸಾವಿರಾರು ಅಪರೂಪದ ವನ್ಯ ಜೀವಿಗಳು, ಔಷಧೀಯ ಸಸ್ಯಗಳ ತಾಣವಾಗಿರುವ ಪಶ್ಚಿಮ ಘಟ್ಟದ ಪ್ರಮುಖ ಭಾಗ ಶಿರಾಡಿ ಘಾಟ್‌ನಲ್ಲಿ ಬೆಂಗಳೂರು -ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ,ರೈಲ್ವೆ ಮಾರ್ಗ ಹಾದು ಹೋಗಿವೆ. ಜೊತೆಗೆ 4 ರಿಂದ 5 ಕಿರು ಜಲ ವಿದ್ಯುತ್‌ಯೋಜನೆಗಳೂ ಇವೆ. ಈ ಜಲವಿದ್ಯುತ್ ಯೋಜನೆಗಳು ಪ್ರಾರಂಭಿಸದಂತೆದೊಡ್ಡ ಹೋರಾಟಗಳು ಈ ಹಿಂದೆ ನಡೆದಿವೆ. ಆದರೆ, ಅವು ಗಳನ್ನು ನಿಲ್ಲಿಸಲು ಆಗಲಿಲ್ಲ. ಇನ್ನು ಶಿರಾಡಿ ಘಾಟ್‌ನ ಅಡ್ಡಹೊಳೆಯಿಂದ ಮಂಗಳೂರು ಕಡೆಗೆಸಂಪರ್ಕಿಸುವ 30 ಕಿ.ಮೀ. ದೂರದ ಸುರಂಗ ಮಾರ್ಗ ಕಾಮಗಾರಿ ಮಾಡುವಯೋಜನೆ ಇದೆ. ಜೊತೆಗೆ ಕಡೂರು- ಸಕಲೇಶಪುರ ರೈಲು ಮಾರ್ಗ ಸಹ ಆಗಬೇಕಿದೆ. ಇದು ಸಹ ಪರಿಸರ ಪ್ರೇಮಿಗಳಲ್ಲಿ ಆತಂಕ ತಂದಿದೆ.
ದಿಕ್ಕು ತಪ್ಪಿರುವ ಝರಿ, ತೊರೆಗಳು : ಸಕಲೇಶಪುರ – ಆಲೂರು ಗಡಿ ಭಾಗದ ಕೆಲವೆಡೆ ವಿವಿಧ ಅಭಿವೃದ್ಧಿಕಾಮಗಾರಿಗಾಗಿ ಕಲ್ಲು ಗಣಿ ಗಾರಿಕೆ ಮಾಡಲಾಗುತ್ತಿದೆ. ಇಲ್ಲೂ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ನೇರ ಹಾನಿಯುಂಟಾಗುತ್ತಿದೆ. ಸದ್ಯ, ಶಿರಾಡಿ ಘಾಟ್ ಸೇರಿ ಸಕಲೇಶಪುರ ತಾಲೂಕಿನ ವಿವಿಧೆಡೆಹರಿಯುತ್ತಿರುವ ಝರಿಗಳನ್ನೆಲ್ಲ ಎತ್ತಿನಹೊಳೆ ಯೋಜನೆಯ ಪಾತ್ರಕ್ಕೆಸೇರಿಸುವ ಕಾರ್ಯ ಅವ್ಯಾಹತವಾಗಿನಡಿಯುತ್ತಿದೆ. ಜೊತೆಗೆ ಮರಳುಗಣಿಗಾರಿಕೆಗಾಗಿ ನದಿ ಪಾತ್ರವನ್ನುಬಗೆಯಲಾ ಗುತ್ತಿದೆ. ರೆಸಾರ್ಟ್‌ಗಳ ಹೆಸರಿನಲ್ಲಿ ಕಾಡುಗಳನ್ನು ನಾಶಮಾಡಲಾಗುತ್ತಿದೆ. ಎತ್ತಿನಹೊಳೆ ಹಾಗೂ ಮರಳು ಗಣಿಗಾರಿಕೆಗಾಗಿಹರಿಯುವ ನದಿ ನೀರಿನ ಮಾರ್ಗವನ್ನೇ ಬದಲಾಯಿಸಲಾಗುತ್ತಿದೆ.
ಮಲೆನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯಗಳನ್ನು ನಾಶ ಮಾಡುತ್ತಿರುವುದು ಆತಂಕಕಾರಿ ಯಾಗಿದೆ. ಏನಾದರು ಅನಾಹುತ ಸಂಭವಿ ಸುವ ಮೊದಲು ನಾವು ಎಚ್ಚೆತ್ತು ಕೊಳ್ಳಬೇಕು. –ಇತಿಹಾಸ್, ಪರಿಸರ ಪ್ರೇಮಿ
ಎತ್ತಿನಹೊಳೆ ಯೋಜನೆಗಾಗಿ ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಅದರಲ್ಲಿಸಿಡಿಮದ್ದುಗಳನ್ನು ಅಕ್ರಮವಾಗಿ ಬಳಸಲು ಅನುಮತಿ ನೀಡಿಲ್ಲ. ಈ ಕುರಿತು ಯಾವುದೇ ಆತಂಕ ಬೇಡ. –ಜಯಣ್ಣ, ಕಾರ್ಯಪಾಲಕ ಎಂಜಿನಿಯರ್, ವಿಶ್ವೇಶ್ವರಯ್ಯ ಜಲನಿಗಮ
ಎತ್ತಿನಹೊಳೆ ಸೇರಿ ವಿವಿಧ ಯೋಜನೆ ಗಳನ್ನು ಮಲೆನಾಡಿನಲ್ಲಿ ಕೈಗೆತ್ತಿಕೊಳ್ಳ ಲಾಗಿದೆ. ನೀರಾವರಿ ಯೋಜನೆಯ ಹೆಸರಿನಲ್ಲಿ ಝರಿ, ತೊರೆಗಳನ್ನು ಮುಚ್ಚಿಹಾಕಲಾಗಿದೆ. ಸುರಂಗ ಕೊರೆಯಲು ಅಕ್ರಮವಾಗಿ ಸ್ಫೋಟಕ ಬಳಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕುರಿತು ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೂಉತ್ತರ್‌ಖಂಡ್‌ನಲ್ಲಿ ಸಂಭವಿಸದಂತೆ ಇಲ್ಲಿಯೂ ಆಸ್ತಿ ಪಾಸ್ತಿ, ಮನೆ ನಾಶವಾಗುವುದರಲ್ಲಿ ಸಂದೇಹವಿಲ್ಲ.-ಕವನ್‌ಗೌಡ, ವಕೀಲರು
ಸುಧೀರ್ ಎಸ್.ಎಲ್.