ನವ ದೆಹಲಿ : ಸ್ಥಿರ ಠೇವಣಿಯಲ್ಲಿನ ಹೂಡಿಕೆ ಅಥವಾ ಫಿಕ್ಸೆಡ್ಡೆಪೋಸಿಟ್ ನಲ್ಲಿ ಈಗ ಕೆಲವು ಬದಲಾವಣೆ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಎಫ್ ಡಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಈ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಆರ್‌ಬಿಐ ಸ್ಥಿರ ಠೇವಣಿ (ಎಫ್‌ಡಿ) ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಮುಕ್ತಾಯದ ನಂತರ, ನೀವು ಮೊತ್ತವನ್ನು ಕ್ಲೈಮ್ ಮಾಡದಿದ್ದರೆ, ನೀವು ಅದರ ಮೇಲೆ ಕಡಿಮೆ ಬಡ್ಡಿಯನ್ನು ಪಡೆಯಬೇಕಾಗುತ್ತದೆ. ಈ ಬಡ್ಡಿ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಗೆ ಸಮಾನವಾಗಿರುತ್ತದೆ.
ಇದನ್ನೂ ಓದಿ : ಬುಡಕಟ್ಟು ಜನರಿಗೆ ಇಲಾಖೆಯಿಂದ ವಿಶೇಷ ಯೋಜನೆ: ಪಾಡ್ವಿ
ಸದ್ಯ, ಉಳಿತಾಯ ಖಾತೆಯ ಬಡ್ಡಿದರಗಳು ಶೇಕಡಾ 3 ರಿಂದ 4 ರಷ್ಟಿದ್ದರೆ, ಬ್ಯಾಂಕುಗಳು ಸಾಮಾನ್ಯವಾಗಿ 5 ರಿಂದ 10 ವರ್ಷಗಳ ದೀರ್ಘಾವಧಿಯ ಎಪ್ ಡಿ ಮೇಲೆ ಅಥವಾ ಶೇಕಡಾ 5ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಎಫ್ ಡಿಗಳಿಗೆ ನೀಡುತ್ತವೆ.
ಸ್ಥಿರ ಠೇವಣಿ ಮೆಚ್ಯೂರ್ ಆಗಿದ್ದರೆ ಹಾಗೂ ಖಾತೆದಾರರು ಆ ಉಳಿತಾಯ ಮೊತ್ತವನ್ನು ಹಿಂಪಡೆಯದಿದ್ದರೆ, ಉಳಿತಾಯ ಖಾತೆಯ ಪ್ರಕಾರ ಅದರ ಮೇಲಿನ ಬಡ್ಡಿದರ ಎಫ್‌ಡಿ ಮೇಲೆ ಸ್ಥಿರ ಬಡ್ಡಿ ನೀಡಲಾಗುವುದು ಎಂದು ಆರ್ ಬಿ ಐ ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ.
ಇನ್ನು, ಎಪ್ ಡಿ ಮೇಲೆ ಹೊರಡಿಸಿರುವ ಹೊಸ ನಿಯಮಗಳು ಎಲ್ಲಾ ಸಣ್ಣ ಹಣಕಾಸು ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ ಅನ್ವಯವಾಗುತ್ತವೆ ಎಂದು ಆರ್ ಬಿ ಐ ತಿಳಿಸಿದೆ.
ಇದನ್ನೂ ಓದಿ : “ಪೆಗಾಸಸ್’ ಸುದ್ದಿ ಹೊರಬಂದ ಸಮಯ ಅರಿಯಿರಿ :ಬೇಹುಗಾರಿಕೆ ಆರೋಪಕ್ಕೆ ಅಮಿತ್ ಶಾ ಪ್ರತಿಕ್ರಿಯೆ