Advertisement

ಎಫ್. ಡಿ. ಬಡ್ಡಿ ಇಳಿಸಿದ ಎಸ್‌ಬಿಐ

11:57 PM May 09, 2020 | Sriram |

ಹೊಸದಿಲ್ಲಿ: ಇತ್ತೀಚೆಗೆ ಜನರಿಗೆ ಅನುಕೂಲ ವಾಗುವಂತಹ ಹಲವು ಯೋಜನೆಗಳನ್ನು ದೇಶದ ಬೃಹತ್‌ ಬ್ಯಾಂಕ್‌ ಎಸ್‌ಬಿಐ ಪ್ರಕಟಿಸುತ್ತಿದೆ. ಹಿರಿಯ ನಾಗರಿಕರಿಗೆ, ಮನೆ ಮೇಲೆ ಸಾಲ ಪಡೆದವರಿಗೆ ಲಾಭವಾಗುವ ಯೋಜನೆ ಗಳನ್ನು ಅದು ಪ್ರಕಟಿಸಿದೆ.

Advertisement

ಆದರೆ ನಿಗದಿತ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು 20 ಮೂಲಾಂಕಗಳಷ್ಟು ಇಳಿ ಸಿದೆ. ಇದು ಮೂರು ವರ್ಷದೊಳಗಿನ ಅವ ಧಿಗೆ ಇರಿಸಲ್ಪಟ್ಟ ಠೇವಣಿ ಗಳ ಮೇಲೆ ಪರಿ ಣಾಮ ಬೀರಲಿದೆ. ಲೆಕ್ಕಾಚಾರ ಹೀಗಿದೆ.

7 ದಿನಗಳಿಂದ 45 ದಿನ ಗಳೊಗಿನ ಠೇವಣಿಗೆ ಶೇ.3.3 ಬಡ್ಡಿ, 46 ದಿನಗಳಿಂದ 179 ದಿನಗಳ ಅವಧಿಯ ಠೇವಣಿ ಗಳು ಶೇ. 4.3ರಷ್ಟು ಬಡ್ಡಿ ಪಡೆಯಲಿವೆ. 180ರಿಂದ 200 ದಿನಗಳು ಮತ್ತು 211 ದಿನಗಳಿಂದ ಒಂ ದು ವರ್ಷ ದೊಳಗಿನ ಠೇವಣಿಗಳಿಗೆ ಶೇ. 4.80ರಿಂದ ಶೇ.5ರೊಳಗೆ ಬಡ್ಡಿ ಮೊತ್ತ ಸಿಗ ಲಿದೆ. 1ರಿಂದ 2 ವರ್ಷದೊಳಗೆ ಮತ್ತು 2 ರಿಂದ 3 ವರ್ಷದೊಳಗಿನ ಠೇವಣಿ ಗಳಿಗೆ ಶೇ. 5.50ರಷ್ಟು ಬಡ್ಡಿ ಸಿಗಲಿದೆ. 3ರಿಂದ 5 ವರ್ಷ ದೊಳಗಿನ ಅವಧಿ, 5 ವರ್ಷ ದಿಂದ 10 ವರ್ಷದೊಳಗಿನ ಅವಧಿಯ ಠೇವಣಿ ಮೇಲಿನ ಬಡ್ಡಿಯಲ್ಲಿ ವ್ಯತ್ಯಾಸವಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next