Advertisement

ಮನೆಯಲ್ಲೇ ಸ್ಕ್ರಬ್‌ ಮಾಡಿ

08:12 PM Aug 27, 2019 | mahesh |

ಮುಖ ಯಾಕೋ ಡಲ್‌ ಆಗಿ ಕಾಣ್ತಿದೆ ಅಂತನ್ನಿಸಿದಾಗ, ಬ್ಯೂಟಿಪಾರ್ಲ್ರ್‌ಗೆ ಹೋಗಿ, ಫೇಸ್‌ ಸ್ಕ್ರಬ್‌ ಮಾಡಿಸಿಕೊಳ್ಳುತ್ತೇವೆ. ಪಾರ್ಲರ್‌ನಲ್ಲಿ ಬಳಸುವ ಸ್ಕ್ರಬ್‌ ಕ್ರೀಮ್‌ಗಳು ದುಬಾರಿಯಷ್ಟೇ ಅಲ್ಲ, ಚರ್ಮಕ್ಕೆ ಹಾನಿಕಾರಕವೂ ಹೌದು. ತ್ವಚೆಗೆ ಯಾವುದೇ ರೀತಿಯಲ್ಲೂ ಹಾನಿ ಮಾಡದ, ಅಡುಗೆಮನೆಯಲ್ಲೇ ಸಿಗುವ ವಸ್ತುಗಳನ್ನು ಫೇಸ್‌ ಸ್ಕ್ರಬ್‌ ಮಾಡಬಹುದು.

Advertisement

1. ಕಾಫಿ ಸ್ಕ್ರಬ್‌
ಕಾಫಿಪುಡಿ, ಸಕ್ಕರೆ, ಆಲಿವ್‌ ಎಣ್ಣೆ ಮತ್ತು ವಿಟಮಿನ್‌ ಇ ಕ್ಯಾಪ್ಸೂಲ್‌ ಅನ್ನು ಮಿಶ್ರಣ ಮಾಡಿ, ಪೇಸ್ಟ್‌ನ ಹದಕ್ಕೆ ತನ್ನಿ. ಅದನ್ನು ಮುಖಕ್ಕೆ ಹಚ್ಚಿದರೆ, ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡಂಟ್‌ಗಳು, ಒಣಚರ್ಮವನ್ನು ಹೋಗಲಾಡಿಸುತ್ತವೆ.

2. ಅರಿಶಿಣದ ಸ್ಕ್ರಬ್‌
2 ಚಮಚ ಅರಿಶಿಣಕ್ಕೆ 1 ಚಮಚ ಕೊಬ್ಬರಿ ಎಣ್ಣ ಸೇರಿಸಿ, ಮೈಗೆಲ್ಲಾ ಹಚ್ಚಿ ಅರ್ಧ ಗಂಟೆ ನಂತರ ಬಿಸಿನೀರಿನಿಂದ ಸ್ನಾನ ಮಾಡಿ. ಅರಿಶಿಣದಲ್ಲಿರುವ ಆ್ಯಂಟಿ ಸೆಪ್ಟಿಕ್‌ ಗುಣವು, ಒಣ ಚರ್ಮ ಹಾಗೂ ಬೇಡದ ರೋಮಗಳನ್ನು ದೂರ ಮಾಡುತ್ತದೆ.

3. ಕಲ್ಲುಪ್ಪಿನ ಸ್ಕ್ರಬ್‌
ಕಲ್ಲುಪ್ಪಿನ ಹರಳನ್ನು ಜೊಜೊಬಾ ಎಣ್ಣೆ ಜೊತೆ ಸೇರಿಸಿ, ಕೈ ಕಾಲಿನ ಮೇಲೆ ಮಸಾಜ್‌ ಮಾಡಿದರೆ, ಸ್ನಾಯುಗಳಿಗೆ ಆರಾಮ ಸಿಗುತ್ತದೆ. ಶುಷ್ಕ ತ್ವಚೆ ನಿವಾರಣೆಯಾಗಿ ಚರ್ಮ
ಹೊಳಪು ಪಡೆಯುತ್ತದೆ.

4. ಕೊಬ್ಬರಿ ಎಣ್ಣೆ ಸ್ಕ್ರಬ್‌
ಕೊಬ್ಬರಿ ಎಣ್ಣೆಯಲ್ಲಿ, ಚರ್ಮಕ್ಕೆ ಬೇಕಾದ ಮಾಯಿಶ್ಚರೈಸರ್‌ ಅಂಶ ಇದೆ. ಕೊಬ್ಬರಿ ಎಣ್ಣೆಯ ಜೊತೆಗೆ ಎರಡು ಚಮಚ ಸಕ್ಕರೆ ಬೆರೆಸಿ, ಮುಖ-ಕೈ ಕಾಲಿಗೆ ಸðಬ್‌ ಮಾಡಬಹುದು.

Advertisement

5. ಲಿಂಬೆರಸದ ಸ್ಕ್ರಬ್‌
ಲಿಂಬೆ ಹಣ್ಣಿನ ರಸಕ್ಕೆ, 2-3 ಚಮಚ ಸಕ್ಕರೆ ಬೆರೆಸಿದಾಗ ಸಿಗುವ ಅಂಟು ಅಂಟಾದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ, ಹತ್ತು ನಿಮಿಷದ ನಂತರ ಮುಖ ತೊಳೆಯಿರಿ. ಮುಖದ ಮೇಲಿನ ರೋಮ ಉದುರಿ, ತ್ವಚೆಗೆ ನುಣುಪು ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next