Advertisement
ಏನಿದು ಘಟನೆ?ಯುಎಸ್‌ನಲ್ಲಿ ಫುಟ್‌ಬಾಲ್ ಕೂಟವೊಂದಕ್ಕಾಗಿ ಬಾರ್ಸಿಲೋನಾ ಪುರುಷರ ಮತ್ತು ಮಹಿಳಾ ತಂಡ ಹೊರಟು ನಿಂತಿತ್ತು. ವಿಶೇಷವೆಂದರೆ ಇದೇ ಮೊದಲ ಸಲ ಮಹಿಳಾ ತಂಡ ಪುರುಷರ ತಂಡದ ಜತೆಗೆ ಪ್ರಯಾಣ ಬೆಳೆಸಿತ್ತು. ಇದೇ ವೇಳೆ ಪುರುಷರ ತಂಡ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಿದೆ. ಮಹಿಳಾ ತಂಡಕ್ಕೆ ಎಕಾನಮಿ ಕ್ಲಾಸ್ ನೀಡಲಾಗಿದೆ. ಈ ವೇಳೆ ತಾರತಮ್ಯ ಎಸಗಲಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿವಾದದ ಬೆನ್ನಲ್ಲೇ ಬಾರ್ಸಿಲೋನಾ ಮಾಧ್ಯಮ ವಕ್ತಾರ ಜೋಸೆಫ್ ಪ್ರತಿಕ್ರಿಯಿಸಿದ್ದಾರೆ. “ವಿಮಾನದಲ್ಲಿ ಮಹಿಳಾ ಸ್ಪರ್ಧಿಗಳಿಗೆ ಕೂರುವಷ್ಟು ಸೀಟುಗಳ ಲಭ್ಯತೆ ಇರಲಿಲ್ಲ. ಹೀಗಾಗಿ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಬೇಕಾಯಿತು. ಪುರುಷರ ತಂಡದ ಜತೆಗೆಯೇ ಮಹಿಳಾ ತಂಡ ಕೂಟ ಪ್ರಯಾಣಿಸುವುದು ಅಂತಿಮ ಕ್ಷಣದಲ್ಲಿ ನಿರ್ಧಾರವಾಗಿದ್ದರಿಂದ ಇಂಥದೊಂದು ಘಟನೆ ನಡೆದಿದೆ. ಇದಕ್ಕೆ ಕ್ಷಮೆ ಯಾಚಿಸುತ್ತೇವೆ’ ಎಂದಿದ್ದಾರೆ.