ಮುಂಬೈ: ಬೆಂಗಳೂರು ಮೂಲದ 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆ ಬಗ್ಗೆ ಪಾಠ ಮಾಡಿ, ಕೊನೆಗೆ ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ಜಿಗಿದು ಪ್ರಾಣ ಕಳೆದುಕೊಂಡಿರುವ ಘಟನೆ ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಕಟ್ಟಡದಲ್ಲಿ ಸೋಮವಾರ ಸಂಜೆ ನಡೆದಿದೆ. ಅರ್ಜುನ್ ಭಾರದ್ವಾಜ್ ಆತ್ಮಹತ್ಯೆ ಶರಣಾದ ಯುವಕ.
ನರ್ಸೆ ಮೊಂಜಿ ವಾಣಿಜ್ಯ ಮತ್ತು ಅರ್ಥಧಿಶಾಸ್ತ್ರ ಕಾಲೇಜಿನ ಬಿಕಾಂ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಈತ ಅಂಧೇರಿಯ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದ. ಸೋಮವಾರ 3 ಗಂಟೆ ಸುಮಾರಿಗೆ ಹೋಟೆಲ್ ರೂಂನಿಂದ ನಿರ್ಗಮಿಸಿದ್ದಾನೆ. ಸಂಜೆ 6.30ರ ಸುಮಾರಿಗೆ ಕಿಟಕಿಯ ಗ್ಲಾಸ್ ಒಡೆದು, ಗಾಯ ಮಾಡಿಕೊಂಡಿದ್ದಾನೆ. ಬಳಿಕ ತಾನಿದ್ದ 19ನೇ ಅಂತಸ್ತಿನಿಂದಲೇ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಧಿಯಿತಾಧಿದರೂ, ಅಷ್ಟರಲ್ಲಾಗಲೇ ಆತ ಪ್ರಾಣಬಿಟ್ಟಿದ್ದಾನೆ. ಇಷ್ಟೆಲ್ಲಾ ಅನಾಹುತ ಮಾಡಿಕೊಳ್ಳುವುದಕ್ಕೂ ಮೊದಲು ಭಾರದ್ವಾಜ್ ಫೇಸ್‌ಬುಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಲೈವ್ ವಿಡಿಯೋ ಮಾಡಿದ್ದ. ಆತ್ಮಹತ್ಯೆಯ ಕುರಿತು ಒಂದಿಷ್ಟು ಪಾಠ ಮಾಡಿದ್ದ.
1 ನಿಮಿಷ, 44 ಸೆಕೆಂಡ್‌ಗಳ ಕಾಲ ಲೈವ್‌ನಲ್ಲಿ ಕಾಣಿಸಿಕೊಂಡಿರುವ ಭಾರದ್ವಾಜ್, ಅನೇಕ ವಿಚಾರಗಳನ್ನು ಖನ್ನತೆಗೊಳಗಾದವರು ಹೇಳಿಕೊಳ್ಳುವ ರೀತಿ ಮಾತನಾಡಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿಕೊಂಡಿದ್ದಾನೆ. ಅಲ್ಲದೆ, 3 ಪ್ಯಾರಾ ಸಾರಾಂಶವೂ ವಿಡಿಯೋ ಜತೆ ಪೋಸ್ಟ್ ಆಗಿದೆ. ಗುಡ್‌ಬೈ ಹೇಳಿ ಕೊನೆಗೊಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾವಿನ ಬಗ್ಗೆ ಯುವಕನ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಬಳಿಕ ಆತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾವಿಗೆ ಕಾರಣ ಡ್ರಗ್ಸ್
ತನಿಖೆ ಹಂತದಲ್ಲಿ ಪೊಲೀಸರಿಗೆ ಸಿಕ್ಕಿರುವ ಬರಹದಲ್ಲಿ ಆತ ತನ್ನ ಪೋಷಕರಲ್ಲಿ ಕ್ಷಮೆಯಾಚಿಸಿದ್ದು, ನಾನು ಡ್ರಗ್ ಚಟಕ್ಕೆ ಅಂಟಿಕೊಂಡಿದ್ದೇನೆ. ಬಹಳದಿನಗಳ ಕಾಲ ನಾನು ಬದುಕುಳಿಯುವುದಿಲ್ಲ. ಅದೇ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಮಗನ ವಿಚಾರದಲ್ಲಿ ತಂದೆಗೆ ನೋವು
ಪೊಲೀಸರು ನೀಡಿರುವ ಮಾಹಿತಿಯಂತೆ ಕೆಲ ದಿನಗಳ ಹಿಂದಷ್ಟೇ ಅರ್ಜುನ್ ಭಾರದ್ವಾಜ್ ಅವರ ತಂದೆ ಮಗನನ್ನು ಭೇಟಿ ಮಾಡಿದ್ದರು. ಅಲ್ಲದೇ ಮಗನ ಸ್ಥಿತಿಯ ಬಗ್ಗೆ ಸಾಕಷ್ಟು ನೊಂದುಕೊಂಡಿದ್ದರು.