Advertisement
1.ಕೋಡುಬಳೆ.ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು- 1/2 ಕಪ್, ಚಿರೋಟಿ ರವೆ 1/4 ಕಪ್, ಮೈದಾ ಹಿಟ್ಟು 1/2 ಕಪ್, ಅಜವಾನ ಅರ್ಧ ಚಮಚ, ಇಂಗು ಚಿಟಿಕೆ, ಬಿಸಿ ಎಣ್ಣೆ ಎರಡು ಚಮಚ, ಉಪ್ಪು ರುಚಿಗೆ, ಎಣ್ಣೆ ಕರಿಯಲು, ತೆಂಗಿನತುರಿ- 1/4ಕಪ್, ಜೀರಿಗೆ ಅರ್ಧ ಚಮಚ, ಒಣಮೆಣಸು-5-6, ನೀರು 1/4 ಕಪ್ ಹಾಕಿ ರುಬ್ಬಿಕೊಳ್ಳಿ.
ಬೇಕಾಗುವ ಸಾಮಗ್ರಿ: ಹಾಲಿನ ಪುಡಿ-1 ಕಪ್, ಒಣಕೊಬ್ಬರಿ ತುರಿಯ ಬಿಳಿಯ ಭಾಗ (ರೆಡಿಮೇಡ್ ಒಣ ಕೊಬ್ಬರಿ ತುರಿ) 1/2 ಕಪ್, ಸಕ್ಕರೆ 1/4 ಕಪ್, ಹಾಲು- 1/4 ಕಪ್, ಏಲಕ್ಕಿ ಪುಡಿ- 1/4 ಚಮಚ, ತುಪ್ಪ-2 ಚಮಚ.
Related Articles
Advertisement
3. ಪಾಲಕ್ ಸೊಪ್ಪಿನ ಚಕ್ಕುಲಿಬೇಕಾಗುವ ಸಾಮಗ್ರಿ: ಅಕ್ಕಿ- 2ಕಪ್, ಕಡಲೆಹಿಟ್ಟು 1/2ಕಪ್, ಹುರಿಗಡಲೆಪುಡಿ- 2ಚಮಚ, ಜೀರಿಗೆ 1/2ಚಮಚ, ಚಿಟಿಕೆ ಇಂಗು, ಉಪ್ಪು ರುಚಿಗೆ, ಬೆಣ್ಣೆ-1 ಚಮಚ, ಎಳ್ಳು 1 ಚಮಚ, ನೀರು 1/4ಕಪ್, ಕರಿಯಲು ಎಣ್ಣೆ. (ರುಬ್ಬಿಕೊಳ್ಳಲು- ಪಾಲಕ್ ಸೊಪ್ಪು ಒಂದು ಹಿಡಿ, ಹಸಿಮೆಣಸು 2, ನೀರು 1/4 ಕಪ್) ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಎಳ್ಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರುಬ್ಬಿಕೊಂಡ ಪಾಲಕ್ ಸೊಪ್ಪನ್ನು ಹಾಕಿ ಕಲಸಿಕೊಳ್ಳಿ. ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಒಂದು ತಟ್ಟೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಹಿಟ್ಟನ್ನು ಒತ್ತಿ ಕೊಳ್ಳಿ. ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ, ಒತ್ತಿಕೊಂಡ ಚಕ್ಕುಲಿಯನ್ನು ಹಾಕಿ ಎರಡೂ ಬದಿಯಲ್ಲಿ ಗರಿ ಗರಿಯಾಗಿ ಕರಿಯಿರಿ. 4. ಶೇಂಗಾ-ಎಳ್ಳಿನ ಉಂಡೆ
ಬೇಕಾಗುವ ಸಾಮಗ್ರಿ: ಶೇಂಗಾ-1/2 ಕಪ್, ಎಳ್ಳು-1/2 ಕಪ್, ಬೆಲ್ಲದ ಪುಡಿ-1/2 ಕಪ್, ನೀರು-1/4 ಕಪ್, ತುಪ್ಪ-1/2 ಚಮಚ, ಏಲಕ್ಕಿ ಪುಡಿ- 1/2 ಚಮಚ. ತಯಾರಿಸುವ ವಿಧಾನ: ಸಣ್ಣ ಉರಿಯಲ್ಲಿ ಶೇಂಗಾವನ್ನು ಹುರಿದು ಸಿಪ್ಪೆ ತೆಗೆಯಿರಿ. ಎಳ್ಳು ಸಿಡಿಯುವವರೆಗೆ ಹುರಿಯಿರಿ. ಎರಡನ್ನೂ ಬೇರೆ ಬೇರೆಯಾಗಿ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಬೆಲ್ಲ ಮತ್ತು ಕಾಲು ಕಪ್ ನೀರು ಹಾಕಿ ಉಂಡೆ ಪಾಕ ಮಾಡಿಕೊಂಡು ಒಲೆಯಿಂದ ಇಳಿಸಿ. ನಂತರ ಪುಡಿ ಮಾಡಿದ ಶೇಂಗಾ ಮತ್ತು ಎಳ್ಳನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆರಿದ ನಂತರ, ತುಪ್ಪವನ್ನು ಕೈಗೆ ಮುಟ್ಟಿಕೊಂಡು ಉಂಡೆ ಕಟ್ಟಿ. ರುಚಿಯಾದ, ಆರೋಗ್ಯಕರವಾದ ಶೇಂಗಾ ಮತ್ತು ಎಳ್ಳಿನ ಉಂಡೆಯನ್ನು ತಯಾರಿಸುವುದು ತುಂಬಾ ಸುಲಭ. ಮೂರು ವಾರದವರೆಗೆ ಕೆಡದಂತೆ ಇಡಬಹುದು. ವೇದಾವತಿ ಹೆಚ್. ಎಸ್