Advertisement

ಖ್ಯಾತ ಚಿತ್ರನಟ ವಿಷ್ಣುವರ್ಧನ್ ಅವರ ಯಾವ ಚಿತ್ರ ನಿಮಗೆ ಇಷ್ಟ ? ಯಾಕೆ ಇಷ್ಟ ?

09:37 AM Sep 21, 2019 | keerthan |

ಮಣಿಪಾಲ: ಸಾಹಸಸಿಂಹ ವಿಷ್ಣುವರ್ದನ್‌ ಅವರ ಕನ್ನಡದ ದಿಗ್ಗಜ ನಟ, ಅಭಿಮಾನಿಗಳ ಆಪ್ತಮಿತ್ರ. ಸಪ್ಟೆಂಬರ್‌ 19ರಂದು ಅವರ ಜನ್ಮದಿನ. ಈ ಸಂದರ್ಭದಲ್ಲಿ ʼಉದಯವಾಣಿʼ ಖ್ಯಾತ ಚಿತ್ರನಟ ವಿಷ್ಣುವರ್ಧನ್ ಅವರ ಯಾವ ಚಿತ್ರ ನಿಮಗೆ ಇಷ್ಟ ? ಯಾಕೆ ಇಷ್ಟ ? ಎಂಬ ಪ್ರಶ್ನೆಯನ್ನು ಓದುಗರ ಮುಂದಿರಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ.

Advertisement

ಕೆ. ಸುರೇಂದ್ರ ರಾವ್:‌ ಸಾಹಸ ಸಿಂಹ ತುಂಬಾ ಇಷ್ಟ ,ಕಾರಣ ಅದರಲ್ಲಿ ಹಾಡು ಒಂದು ತುಂಬಾ ಮನಸ್ಸಿಗೆ ಮುಟ್ಟುವಂತೆ ಇದೆ “ಮರೆಯದ ನೆನಪನು ” ಅದು ದುಷ್ಟರೆಲ್ಲಾ ಸೇರಿ ಮಾಡಿದ ಅನ್ಯಾಯಕ್ಕೆ ಆ ನೆನಪು ಎಷ್ಟು ಕಾಡಿ ಬಿಡದೆ ಅಲ್ಲಿಯವರೆಗು ಕರೆದು ಕೊಂಡು ಬಂದಿದೆ ಎಂದು ,ಕೊನೆಗೂ ಅದರಲ್ಲಿ ಆ ನೋವಿಗೆ ಬರುವಂತಹ ಕೋಪ ಎಲ್ಲಾ ಕಡೆಯಲ್ಲಿ ಸಿಂಹದಂತೆ ಗರ್ಜಿಸಿ ಎಲ್ಲರನ್ನು ಮುಗಿಸುವ ಅದ್ಬುತ ಅಭಿನಯ ತುಂಬಾ ಇಷ್ಟ.

ಪ್ರೇಮ ಸತೀಶ್:‌ ಬಂಧನ ಸಿನಿಮಾ ತುಂಬಾ ಇಷ್ಟ, ಆ ಸಿನಿಮಾದಲ್ಲಿ ವಿಷ್ಣುವರ್ಧನ್ ರ ವೈದ್ಯರ ಪಾತ್ರ, ಪ್ರೀತಿ, ಸಂಭಾಷಣೆ ಅದ್ಭುತವಾಗಿ ಮೂಡಿಬಂದಿದೆ.

ಪೂರ್ಣ ಪ್ರಜ್ಞ ಪಿ.ಎಸ್:‌ ಯಜಮಾನ- ಸಂಬಂಧಗಳ ಅರ್ಥ, ಮೌಲ್ಯ ಏನು ಎಂದು ತಿಳಿಸಿಕೊಟ್ಟ ಚಿತ್ರ. ಒಂದು ಜಗಳಕ್ಕೆ ಗಂಟು ಮೂಟೆ ಕಟ್ಟಿಕೊಂಡು ಮನೆ ಬಿಟ್ಟು ಕೋಪದ ಕೈಗೆ ಬುದ್ಧಿ ಕೊಡುವ ಪ್ರತಿಯೊಬ್ಬರಿಗೂ, ಕುಟುಂಬದಲ್ಲಿ ಸಂಬಂಧದ ಅಗತ್ಯತೆ, ತ್ಯಾಗದ ಅನಿವಾರ್ಯತೆಯನ್ನ ತಿಳಿಸಿಕೊಟ್ಟ ಚಿತ್ರ.

ರಾಜೇಶ್‌ ಅಂಚನ್‌ ಎಂ ಬಿ; ಬಂಧನ ನನಗೆ ಬಹಳವಾಗಿ ಹೃದಯಕ್ಕೆ ನಾಟಿದ ಚಿತ್ರ. ಅಂತಹ ಪ್ರೇಮ ಕಾವ್ಯ ಕನ್ನಡದಲ್ಲಿ ಮತ್ತೆ ಬರಲೇ ಇಲ್ಲ. ಡಾ. ಹರೀಶ್ ಮತ್ತು ನಂದಿನಿ ಕನಸಲ್ಲೂ ನನ್ನನ್ನೂ ಕಾಡೊ ಪಾತ್ರಗಳು. ವಿಷ್ಣುವರ್ಧನ್ ಮತ್ತು ಸುಹಾಸಿನಿಗಾಗಿಯೇ ಆ ಪಾತ್ರವನ್ನು ಉಷಾ ನವರತ್ನರಾಮ್ ಸೃಷ್ಟಿಸಿದ ಹಾಗೆ ಮೂಡಿ ಬಂದ ಚಿತ್ರ ಅದು. ಆ ಹಾಡುಗಳು, ಸಂಭಾಷಣೆ ಯಾವತ್ತೂ ಮರೆಯುವ ಹಾಗೆ ಇಲ್ಲಾ. ಇವತ್ತು ಸಹ ದೂರದರ್ಶನದಲ್ಲಿ ಪ್ರಸಾರವಾದರೆ ತಪ್ಪದೆ ವೀಕ್ಷಿಸುತ್ತೇನೆ.

Advertisement

ಸ್ವಾಮಿ ಸಿದ್ದು: ವಿಷ್ಣು ಸರ್‌ ಎಲ್ಲಾ ಚಿತ್ರಗಳು ಇಷ್ಟ. ಯಜಮಾನ ತುಂಬಾ ಇಷ್ಟ. ಯಾಕಂದ್ರೆ ನಾನು ಟಾಕೀಸಿನಲ್ಲಿ ನೋಡಿದ ಮೊದಲ ಚಿತ್ರ. ಅಣ್ಣ ತಮ್ಮಂದಿರ ಬಾಂಧವ್ಯದ ಕಥೆ ಚೆನ್ನಾಗಿದೆ.

ಸುಜಾತ ಹೊರಂತೂರು: ಇಷ್ಟದ ಪಟ್ಟಿಯಲ್ಲಿ ತುಂಬಾ ಚಿತ್ರಗಳಿವೆ. ನಾಗರಹಾವು, ಹೊಂಬಿಸಿಲು, ನಾನಿರುವುದೇ ನಿನಗಾಗಿ, ಮದುವೆ ಮಾಡು ತಮಾಷೆ ನೋಡು ಇತ್ಯಾದಿ.

ಹೇಮಂತ್‌ ಸನಿಲ್:‌ ವಿಷ್ಣುಜಿಯ ಎಲ್ಲಾ ಚಿತ್ರಗಳು ಇಷ್ಟ. ಎಲ್ಲವೂ ಅದ್ಬುತ ನಟನೆಗೆ ಹಿಡಿದ ಕನ್ನಡಿ. ಇಂದು ಎಲ್ಲವನ್ನು ಕಳೆದು ಕೊಂಡಿದ್ದೇವೆ ಅವರೊಂದಿಗೆ.

ವಿನುತಾ ಕುಲಕರ್ಣಿ: ಭೂತಯ್ಯನ ಮಗ ಅಯ್ಯು. ಜಗತ್ತಿನಲ್ಲಿ ಮಾನವೀಯತೆಯೇ ಶ್ರೇಷ್ಠ ಎಂದು ತೋರಿಸುವ ಚಿತ್ರವದು.

ನಾಗರಾಜ ಕಾಮತಿ: ತ್ಯಾಗಮಯಿ ಅಣ್ಣನ ಪಾತ್ರ.ಯಜಮಾನ.

ಕಲ್ಪಿ ಪ್ರಸನ್ನ: ರಿಮೇಕ್ ಆದರೂ ಕೂಡ ರಾಯರು ಬಂದರು ಮಾವನ ಮನೆಗೆ ಚಿತ್ರ ಎಲ್ಲಕ್ಕಿಂತ ತುಂಬಾ ಆಪ್ತವಾದದ್ದು.

ದಿನೇಶ್ ಗೌಡ ಕೆ: ವಿಷ್ಣು ಸರ್ ನಮ್ಮ ಮೊದಲ ಆಯ್ಕೆ ಕಾರಣ ನಾನು ಕೇವಲ 5 ವರ್ಷ ಪ್ರಾಯದಲ್ಲೇ ನೋಡಿದ ಮೊದಲ ಸಿನಿಮಾ ಖೈದಿ ಇಷ್ಟ ಪಡಲು ಅದೊಂದೇ ಮಾನದಂಡವಲ್ಲ.

ರಾಜೇಶ್‌ ಹೆಬ್ಬಾರ್;‌ ಭೂತಯ್ಯನ ಮಗ ಅಯ್ಯು ಚಲನಚಿತ್ರ ದ ಗುಳ್ಳನ ಪಾತ್ರ ಹಾಗು ನಾಗರಹಾವು ಚಿತ್ರದ ರಾಮಾಚಾರಿ ಪಾತ್ರ ಅಧ್ಬುತವಾದ ನಟನೆ.

ಸುಮ ವಿ ಹುನಗುಂದಿ: ನಾಗರಹಾವು, ಸೊಸೆ ತಂದ ಸೌಭಾಗ್ಯ , ಕಿಟ್ಟು ಪುಟ್ಟು, ಸಿಂಗಾಪುರಿನಲ್ಲಿ ರಾಜಾ ಕುಳ್ಳ, ಅವಳ ಹೆಜ್ಜೆ , ಗಂಧರ್ವ ಗಿರಿ , ಹೊಂಬಿಸಿಲು, ವಂಶ ಜ್ಯೋತಿ , ಸಾಹಸ ಸಿಂಹ, ಸಹೋದರರ ಸವಾಲ್, ಸ್ನೇಹಿತರ ಸವಾಲ್, ಸೂರ್ಯವಂಶ , ಯಜಮಾನ , ಕರ್ಣ etc ವಿಷ್ಣುವರ್ಧನ್ ರವರ ಸಿನಿಮಾಗಳು ಒಂದಾ ಎರಡಾ. ಎಲ್ಲವೂ ಚೆನ್ನಾಗಿ ಬಂದಿವೆ.

ಮೈಸೂರು ಶಂಕರಾನಂದ: ಜೀವನ ಚಕ್ರ ಸೂಪರ್.‌ ಅದರಲ್ಲಿ ಅವರ ಮಗಳ ಬಗ್ಗೆ ಇರುವ ಹಾಡನ್ನು ಮರೆಯಲು ಸಾಧ್ಯವಿಲ್ಲ. ಈಗಲೂ ಹಾಡು ಕೇಳುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ.

ಸೂರಜ್‌ ಬಿ ನಾರಾಯಣ: ಈ ಬಂಧನ. ಅವರ ಕಲೆಯನ್ನು ಸಂಪೂರ್ಣ ಬಳಸಿಕೊಂಡ ಚಿತ್ರ ಅನ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next