Advertisement

ಡೆಡ್ಲಿ ಕೋವಿಡ್ 19 ವೈರಸ್ ಗೆ ಅಮೆರಿಕದಲ್ಲಿ ಅಂದಾಜು 2 ಲಕ್ಷ ಜನ ಸಾಯಬಹುದು: ಡಾ. ಫೌಸಿ

09:51 AM Mar 31, 2020 | Nagendra Trasi |

ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ಸೋಂಕಿಗೆ ಒಳಗಾದವರಲ್ಲಿ ಅಂದಾಜು 100,000ದಿಂದ 2 ಲಕ್ಷದವರೆಗೆ ಜನರು ಅಮೆರಿಕದಲ್ಲಿ ಸಾವನ್ನಪ್ಪುವ ಸಾಧ್ಯತೆ ಇದ್ದಿರುವುದಾಗಿ ದೇಶದ ಹಿರಿಯ ಸಾಂಕ್ರಾಮಿಕ ತಜ್ಞ ಡಾ.ಅಂಥೋನಿ ಫೌಸಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಅಮೆರಿಕದಲ್ಲಿ ಸದ್ಯದ ಕೋವಿಡ್ 19 ಹರಡುವಿಕೆಯ ಆಧಾರದ ಮೇಲೆ ಡಾ.ಫೌಸಿ ಈ ವಿಷಯ ತಿಳಿಸಿದ್ದು, ದೇಶದಲ್ಲಿ ಕೋವಿಡ್ ಸೋಂಕಿಗೆ ಒಂದರಿಂದ ಎರಡು ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದ್ದಾರೆ.

ಫೆಡರಲ್ ಅಧಿಕಾರಿಗಳು ಕೋವಿಡ್ 19 ಸೋಂಕು ಪ್ರಮಾಣ ಹೆಚ್ಚಳವಾಗುವ ಕುರಿತು ಮುನ್ನೆಚ್ಚರಿಕೆ ನೀಡಿರುವ ಬೆನ್ನಲ್ಲೇ ಅಮೆರಿಕದಲ್ಲಿ ಭಾನುವಾರದವರೆಗೆ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 1,25,000 ಸಾವಿರಕ್ಕೆ ಏರಿದ್ದು, 2,500 ಜನರು ಸಾವನ್ನಪ್ಪಿರುವುದಾಗಿ ಜಾನ್ಸ್ ಹೋಪ್ ಕಿನ್ಸ್ ಯೂನಿರ್ವಸಿಟಿ ಅಂಕಿ ಅಂಶ ತಿಳಿಸಿದೆ.

ಇದಲ್ಲದೇ ಅಮೆರಿಕದಲ್ಲಿ ಲೆಕ್ಕಕ್ಕೆ ಸಿಗದ ಸಾಮೂಹಿಕ ಸೋಂಕು ಪೀಡಿತರ ಸಂಖ್ಯೆಯೂ ಇದ್ದಿರುವುದಾಗಿ ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ರೋಗಿಗಳ ಪರೀಕ್ಷೆಯ ನಂತರ ಮತ್ತಷ್ಟು ಫಲಿತಾಂಶ ತಿಳಿಯಲಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next