Advertisement

ಮುಸ್ಲಿಮರು ಅಲ್ಲಾನನ್ನು ಬಿಟ್ಟು ಬೇರೆ ಪೂಜೆ ಮಾಡಕೂಡದು :ಫ‌ತ್ವಾ 

02:13 PM Oct 21, 2017 | Team Udayavani |

ಹೊಸದಿಲ್ಲಿ: ಭಾರತದ ಇಸ್ಲಾಮ್‌ ಧರ್ಮ ಬೋಧನೆಯ ಅತೀ ದೊಡ್ಡ ಕೇಂದ್ರವಾಗಿರುವ ದಾರುಲ್‌ ಉಲೂಮ್‌ ದೇವಬಂದ್‌ ಇನ್ನೊಂದು  ಫ‌ತ್ವಾ ಹೊರಡಿಸಿದ್ದು,’ಮುಸ್ಲಿಮ್‌ ಮಹಿಳೆಯರಾಗಲಿ, ಪುರುಷರಾಗಲಿ ಅಲ್ಲಾ ಹೊರತು ಪಡಿಸಿ ಬೇರೆ ದೇವರನ್ನು ಪೂಜಿಸಕೂಡದು’ಎಂದು ಆದೇಶ ಹೊರಡಿಸಿದೆ. 

Advertisement

ಮುಸ್ಲಿಂ ಮಹಿಳೆಯರು ವಾರಣಾಸಿಯಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡ ವಿರುದ್ಧ ಪ್ರತಿಕ್ರಿಯೆಯಾಗಿ ‘ಅಲ್ಲಾನನ್ನು ಬಿಟ್ಟು ಬೇರೆ ದೇವರನ್ನೂ ಯಾರಾದರೂ ಪೂಜಿಸುತ್ತಾರೋ ಅವರು ಮುಸ್ಲಿಮರಾಗಿ ಉಳಿಯುವುದಿಲ್ಲ’ ಎಂದು ಫ‌ತ್ವಾ ಹೊರಡಿಸಿದೆ. 

 ಭಾರತೀಯ ಮುಸ್ಲಿಮರು ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಾಕುವುದನ್ನು ನಿಷೇಧಿಸಿ ಫ‌ತ್ವಾ ಹೊರಡಿಸಿದ ಬೆನ್ನಲ್ಲೇ ಈ ಫ‌ತ್ವಾ ಹೊರಡಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next