Advertisement

ಅಸ್ಸಾಂನ ಗಾಯಕಿ ಅಫ್ರೀನ್‌ ವಿರುದ್ಧ  ಫ‌ತ್ವಾ

03:50 AM Mar 16, 2017 | Team Udayavani |

ಹೊಸದಿಲ್ಲಿ: ಇಂಡಿಯನ್‌ ಐಡಲ್‌ ಜೂನಿಯರ್‌-2015 ಟಿವಿ ರಿಯಾಲಿಟಿ ಶೋನಲ್ಲಿ ರನ್ನರ್‌ ಅಪ್‌ ಆಗಿ ದೇಶದ ಜನರ ಮನಗೆದ್ದ ಗಾಯಕಿ ನಹೀದ್‌ ಅಫ್ರೀನ್‌ (16) ವಿರುದ್ಧ ಅಸ್ಸಾಂನ 42 ಮಂದಿ ಮುಸ್ಲಿಂ ಧರ್ಮಗುರುಗಳು ಫ‌ತ್ವಾ ಹೊರಡಿಸಿದ್ದಾರೆ. ಮಾ. 25ರಂದು ಮಸೀದಿಯೊಂದರ ಆವರಣದಲ್ಲಿ ಅಫ್ರೀನ್‌ಳ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಯಾರೂ ಪಾಲ್ಗೊಳ್ಳದಂತೆ ಮೌಲ್ವಿಗಳು ಸೂಚಿಸಿದ್ದಾರೆ. ಜತೆಗೆ, ಸಾರ್ವಜನಿಕವಾಗಿ ಕಾರ್ಯಕ್ರಮ ನೀಡದಂತೆ ಅಫ್ರೀನ್‌ಗೆ ಸೂಚಿಸಲಾಗಿದೆ. 

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕಿ,  ಫ‌ತ್ವಾ ಹೊರಡಿಸಿದ ವಿಚಾರ ತಿಳಿದಾಗ ಹೃದಯ ಒಡೆದಂತಾಯಿತು. ಆದರೆ, ಗಾಯನವು ನನಗೆ ಭಗವಂತ ಕೊಟ್ಟ ವರ. ಅದನ್ನು ಸದ್ಬಳಕೆ ಮಾಡದಿದ್ದರೆ ದೇವರನ್ನೇ ನಿರ್ಲಕ್ಷ್ಯ ಮಾಡಿದಂತೆ. ಹಾಗಾಗಿ, ನಾನು ಹಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾಳೆ. ಘಟನೆ ಹಿನ್ನೆಲೆ ಅಫ್ರೀನ್‌ಗೆ ಕರೆ ಮಾಡಿರುವ ಅಸ್ಸಾಂ ಸಿಎಂ ಸರ್ಬಾನಂದ ಸೊನೊವಾಲ್‌, ಆಕೆಗೆ ಭದ್ರತೆ ಸಹಿತ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next