Advertisement

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

05:34 PM Jun 21, 2020 | Hari Prasad |

ಇಂದ,

Advertisement

ಅನುರಾಧಾ ಬಿಲ್ಕರ್

ಹತ್ತನೇ ತರಗತಿ ವಿದ್ಯಾರ್ಥಿನಿ

ದಿಪಾಂಜಲಿ ನಗರ

ಬೆಂಗಳೂರು

Advertisement

ಇವರಿಗೆ,

ಉದಯವಾಣಿ. ಕಾಂ

ಮಾನ್ಯರೆ,

ವಿಷಯ: ಅಪ್ಪನ ಕುರಿತು ಪತ್ರ…

ನನ್ನ ಅಪ್ಪ ಬಹಳ ಕಷ್ಟ ಪಟ್ಟು ಶಿಕ್ಷಣ ಪಡೆದು ಸರಕಾರಿ ಸೇವೆಗೆ ಸೇರಿದವರು ಅವರ ಜಿವನವೆ ನನಗೆ ಆದರ್ಶ. ನನ್ನ ವಿದ್ಯಾಭ್ಯಾಸ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡವರು.

ಸರಕಾರಿ ಸೇವೆಗೆ ಸೇರಲು ತುಂಬಾ ಶ್ರಮ ಪಟ್ಟು ಓದಿ ಜೀವನದಲ್ಲಿ ಸಾಕಷ್ಟು ತೊಂದರೆಪಟ್ಟವರು ನನ್ನನ್ನು ಬಹಳ ಶಿಸ್ತನಿಂದ ಬೆಳೆಸುತ್ತಿರುವರು. ಜೀವನಕ್ಕೆ ಶಿಕ್ಷಣ, ಸಂಕೃತಿ ಸಂಸ್ಕಾರ ಇರಬೇಕು ಅದೇ ರೀತಿ ನಡೆದುಕೊಳ್ಳಬೇಕು.

ಜೀವನಕ್ಕೆ ಗುರಿ ಇಟ್ಟಕೊಂಡು ಅದನ್ನು ಸಾಧಿಸಬೇಕೆಂಬ ಛಲ ಹೊಂದಿರಬೇಕು. ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಪ್ರೇಮ ಗೌರವದಿಂದ ಕಾಣಬೇಕು, ದೇಶ ಪ್ರೇಮ ಹೊಂದಬೇಕು ಶಿಸ್ತಿನ ಸಿಪಾಯಿ ಆಗಬೇಕು. ಎಲ್ಲಿಯೂ ದ್ವೇಷ, ಅಸಹನೆ, ಕೋಪ ಮಾಡಿಕೊಳ್ಳಬಾರದು ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದು ಗುರಿ ಸಾಧಿಸಬೇಕು.., ಎಂದು ನನ್ನ ಅಪ್ಪ ನನಗೆ ಬುದ್ಧಿವಾದ ಹೇಳುವರು ಅವರ ಸಲಹೆಯಂತೆ ನಾನು ನಡೆದುಕೊಂಡು ಗುರಿ ಸಾಧಿಸಬೇಕು ಎಂಬುದು ನನ್ನ ಹೆಬ್ಬಯಕೆ

ಇಂತಿ

ನಿಮ್ಮ ವಿಶ್ವಾಸಿ

ಅನುರಾಧ ಬಿಲ್ಕರ್, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next