Advertisement
ನನ್ನ ಅಪ್ಪ ಬಹಳ ಒಳ್ಳೆಯ ಲೇಖನ ಬರೆಯುತ್ತಾರೆಂದೋ, ನನ್ನ ಮಗಳ ಪುಸ್ತಕ ಚೆನ್ನಾಗಿದೆ ಎಂದೋ ನಾವಿಬ್ಬರೂ ಒಬ್ಬರಿಗೊಬ್ಬರು ಹೇಳಿಕೊಂಡಿದ್ದೇವೆ.
Related Articles
Advertisement
ಅಪ್ಪ ಇದ್ದು ಇದನ್ನೆಲ್ಲಾ ನೋಡಬೇಕಿತ್ತು. ಅವರು ಮಕ್ಕಳನ್ನ ಕೂರಿಸಿಕೊಂಡು ಕಥೆ ಹೇಳಬೇಕಿತ್ತು, ಆಟ ಆಡಿಸಬೇಕಿತ್ತು. ಅವರು ಬರೆದಿರುವ ಲೇಖನ ತೋರಿಸ ಬೇಕಿತ್ತು. ದಿನಕ್ಕೆ ಹತ್ತು ಬಾರಿ “ತಾತ ತಾತ’ ಎಂದು ಕೂಗುವ ಮಕ್ಕಳ ಜೊತೆ ರೌಂಡ್ ಹೋಗಬೇಕಿತ್ತು ಮತ್ತು ಅವರನ್ನು ಮಾತಾಡಿಸಲು ಬರುತ್ತಿದ್ದ ಹತ್ತು ಹಲವು ಓದುಗರಿಗೆ “ನನ್ನ ಮೊಮ್ಮಕ್ಕಳು’ ಎಂದು ಪರಿಚಯಿಸಬೇಕಿತ್ತು. ಇದೆಲ್ಲಾ ಆಗಬೇಕಿತ್ತು, ನೋಡಬೇಕಿತ್ತು, ಇರಬೇಕಿತ್ತು ಎಂಬುದೇ ನನ್ನ ತಲೆಯಲ್ಲಿ ದಿನಾ ಓಡುತ್ತಿರುತ್ತದೆ. ನೀನು ಇನ್ನೂ ಲೇಖನಗಳನ್ನು, ಪುಸ್ತಕಗಳನ್ನು ಬರೆಯಬೇಕಿತ್ತು ಎಂದು ನಾನು ಅಪ್ಪನಿಗೆ ಹೇಳಬೇಕಿತ್ತು. ಅವರ ಇನ್ನಷ್ಟು ಪುಸ್ತಕಗಳು ಬರಬೇಕಿತ್ತು. ಇನ್ನಷ್ಟು ಚರ್ಚೆಗಳಲ್ಲಿ ಭಾಗವಹಿಸಿ ಜನರ ಸೈಂಟಿಫಿಕ್ ಟೆಂಪರ್ಮೆಂಟ್ ಹೆಚ್ಚಿಸಬೇಕಾಗಿತ್ತು ಎಂದೂ ಅನ್ನಿಸುತ್ತಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಅಪ್ಪಂದಿರ ದಿನ ದಂದು ಖುದ್ದಾಗಿ ಅಪ್ಪನಿಗೆ ಶುಭಾಶಯ ಹೇಳಬೇಕು ಎಂಬ ಆಸೆಗೋಸ್ಕರವಾದರೂ ಅಪ್ಪ ಇರಬೇಕಿತ್ತು ಎಂದು ಬಹಳ ಬಾರಿ ಅನ್ನಿಸಿದ್ದಿದೆ.
ಅಪ್ಪನಿಗೆ ಈ ವರ್ಷ ಹೇಳದೇ ಉಳಿದ ಮಾತು ಇಷ್ಟೇ: ಹ್ಯಾಪಿ ಫಾದರ್ಸ್ ಡೇ ಅಪ್ಪಿ, ನೀನು ಇರಬೇಕಿತ್ತು…
-ಮೇಘನಾ ಸುಧೀಂದ್ರ