Advertisement
ಗೌಡನಬಾವಿ ಗ್ರಾಮದ ರಾಮನಗೌಡ (40), ಮತ್ತು ಪುತ್ರಿ ಬಸವಲಿಂಗಮ್ಮ (17)ಮೃತ ದುರ್ದೈವಿಗಳು. ಫೆ.25ರಂದು ಸಮೀಪದ ಗೌಡನಬಾವಿ ಶ್ರೀ ಕಟ್ಟೆ ಬಸವೇಶ್ವರ ಜಾತ್ರೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯ ಕುಂಭ ಹೊತ್ತಿದ್ದ ಫೋಟೋ ತೆಗೆದ ಗ್ರಾಮದ ಕುರುಬ ಸಮಾಜದ ಯುವಕರು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು. ಇದನ್ನು ಪ್ರಶ್ನಿಸಿದ ಯುವತಿಯ ಸಂಬಂಧಿಕರು ಹಾಗೂ ನಾಯಕ ಸಮುದಾಯದವರ ಮೇಲೆ ಹಲ್ಲೆ ಮಾಡಲಾಗಿತ್ತು. ಬಳಿಕ, ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಲಾಗಿತ್ತು. ಆದರೆ,ಮಾ.24ರಂದು ಪಂಚಾಯಿತಿ ಆವರಣದಲ್ಲಿ ಮತ್ತೆ ಯುವತಿಯ ಸಂಬಂಧಿಕರ ಮೇಲೆ ಹಲ್ಲೆ ನಡೆದಿತ್ತು. ಈ ಎಲ್ಲ ಘಟನೆಯಿಂದ ನೊಂದ ರಾಮನಗೌಡ ಭಾನುವಾರ ಮಗಳಿಗೆ ವಿಷವುಣಿಸಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್‌ನೋಟ್‌ನಲ್ಲಿ ಘಟನೆಗೆ ಕಾರಣರಾದ 12 ಜನರ ಹೆಸರು ನಮೂದಿಸಿದ್ದಾರೆ ಎನ್ನಲಾಗಿದೆ. ಈ 12 ಜನ ಸೇರಿ ಒಟ್ಟು 28 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Advertisement
ಮಗಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಂದೆ
08:05 AM Mar 26, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.