Advertisement

ಪುತ‹ನಿಗಾಗಿ “ಲ್ಯಾಂಬೋರ್ಗಿನಿ’ಕಾರನ್ನೇ ತಯಾರಿಸಿದ ತಂದೆ!

12:07 AM Oct 26, 2019 | mahesh |

ಕೊಲರಾಡೊ (ಅಮೆರಿಕ): ಇಲ್ಲಿನ ಕೆಎಂಎಲ್‌ ಲ್ಯಾಬೊರೇಟರಿಯಲ್ಲಿ ಪ್ರಧಾನ ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸ್ಟೆರ್ಲಿಂಗ್‌ ಬ್ಯಾಕಸ್‌ ಎಂಬವರು ತಮ್ಮ ಮಗ ಆಸೆ ಪಟ್ಟ ಅಂತ ಐಶಾರಾಮಿ ಲ್ಯಾಂಬೋರ್ಗಿನಿ ಕಾರನ್ನೇ ಉಡುಗೊರೆಯಾಗಿ ನೀಡಿದ್ದಾರೆ!

Advertisement

ಹಾಗಂತ ಅವರೇನೂ ಹೊಸ ಕಾರನ್ನು ಖರೀದಿ ಮಾಡಿಲ್ಲ. ಅದಕ್ಕೆ ಬದಲು, ತಾವೇ ಲ್ಯಾಂಬೋರ್ಗಿನಿ ಆ್ಯವೆಂಟೇಟರ್‌ ಕಾರನ್ನು ಮರುಸೃಷ್ಟಿ ಮಾಡಿದ್ದಾರೆ. ಅಂದರೆ ಪೇಟೆಯಿಂದ ಪ್ರತ್ಯೇಕವಾಗಿ ಇಂಜಿನ್‌, ಚಾಸಿಸ್‌, ಕಾರಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತಂದು ಅದನ್ನು ನೈಜ ಲ್ಯಾಂಬೋರ್ಗಿನಿಯಂತೆ ರೂಪಿಸಿದ್ದಾರೆ. ಬರೀ ನೋಡುವುದಕ್ಕಲ್ಲ ಇದರಲ್ಲಿ ಕುಳಿತು ಸವಾರಿಯನ್ನೂ ಮಾಡಬಹುದಾಗಿದೆ. ಇದಕ್ಕೆ 300ಕ್ಕಿಂತ ಹೆಚ್ಚು ಹಾರ್ಸ್‌ಪವರ್‌ ನೀಡುವ “ಕಾರ್ವೆಟ್ಸ್‌ ಎಲ್‌ಎಸ್‌1 ವಿ 8′ ಇಂಜಿನ್‌ ಅಳವಡಿಸಲಾಗಿದೆ. ಇದರ ಮತ್ತೂಂದು ವಿಶೇಷವೆಂದರೆ, ಪುತ್ರನ ಆಸೆಯಂತೆ ಈ ಕಾರಿನ ಮೇಲೆ ತ್ರೀ-ಡಿ ಸ್ಟಿಕರಿಂಗ್‌ ಮಾಡಿಸಿದ್ದಾರೆ ಕೂಡ. ಈಗ ಹೇಳಿ, ಇಂಥ ತಂದೆಯಿದ್ದರೆ 5 ಕೋಟಿ ರೂ.ಗಳ ಲ್ಯಾಂಬೋರ್ಗಿನಿ ಏಕೆ ಬೇಕು ಅಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next