Advertisement

ಒಂದಲ್ಲ ಎರಡಲ್ಲ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದಿಟ್ಟ ತಂದೆ: ವಿಡಿಯೋ ವೈರಲ್

06:08 PM Nov 07, 2022 | Team Udayavani |

ನವದೆಹಲಿ: ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕುತ್ತಾ ಅವರ ಬಾಲ್ಯವನ್ನು ಮೊಬೈಲ್‌ ಮೂಲಕ ಫೋಟೋವಾಗಿ ಸೆರೆ ಹಿಡಿಯುವುದು ಸಾಮಾನ್ಯ. ಆ ಫೋಟೋಗಳನ್ನೇ ಫ್ರೇಮ್‌ ಆಗಿ, ವಾಲ್‌ ಪೇಪರ್‌ ಆಗಿ ಇಡುತ್ತೇವೆ. ಇಲ್ಲೊಬ್ಬ ತಂದೆ ತನ್ನ ಮಗಳ ಫೋಟೋವನ್ನು ಸೆರೆ ಹಿಡಿದಿದ್ದಾನೆ. ಅದು ಪ್ರತಿ ದಿನ.!

Advertisement

ಡಚ್ಚ್‌ ದೇಶದ ಸಿನಿಮಾ ನಿರ್ದೇಶಕ ಫ್ರಾನ್ಸ್ ಹಾಫ್ಮೀಸ್ಟರ್ ತನ್ನ ಮುದ್ದಿನ ಮಗಳ ಫೋಟೋವನ್ನು, ಆಕೆ ಹುಟ್ಟಿದ ದಿನದಿಂದ ಇದುವರೆಗೆ ಅಂದರೆ ಮಗಳು ಲೊಟ್ಟೆಯ ( ಮಗಳ ಹೆಸರು) ಫೋಟೋವನ್ನು ಸೆರೆ ಹಿಡಿದಿದ್ದಾನೆ.  ಮಗಳಿಗೆ ಈಗ 20 ವರ್ಷ. ಅಷ್ಟು ವರ್ಷದಿಂದ ಹಿಡಿದ ಫೋಟೋವನ್ನು ಫ್ರಾನ್ಸ್ ಹಾಫ್ಮೀಸ್ಟರ್ ಈಗ ಟೈಮ್ ಲ್ಯಾಪ್ಸ್‌ ಮೂಲಕ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಆಪ್ಲೋಡ್‌ ಮಾಡಿದ್ದಾರೆ.

ಇದನ್ನೂ ಓದಿ: ಪೊಲೀಸ್‌ ಅಧಿಕಾರಿ ಬ್ಯಾಂಕ್ ಖಾತೆಗೆ ಸಂಬಳದೊಂದಿಗೆ 10 ಕೋಟಿ ರೂ. ಕ್ರೆಡಿಟ್‌: ಮುಂದೆನಾಯ್ತು?

2 ನಿಮಿಷ 18 ಸೆಕೆಂಡ್‌ ಗಳುಳ್ಳ ಈ ವೀಡಿಯೋದಲ್ಲಿ ಮಗುವಾಗಿದ್ದಾಗ ಲೊಟ್ಟೆ, ಬಾಲ್ಯ, ಯೌವನದ ನೂರಾರು ಫೋಟೋಗಳು ಸೆರೆಯಾಗಿವೆ. 20 ವರ್ಷ ಪ್ರತಿದಿನ ತೆಗೆದ ಫೋಟೋಗಳಲ್ಲಿ ಪ್ರಮುಖ ಫೋಟೋ ಅಂದರೆ ಮಗು, ಬಾಲ್ಯ, ಯೌವನದ ಹಂತದಲ್ಲಿ ಆಕೆಯ ಮುಖ ಬದಲಾದ ಫೋಟೋಗಳನ್ನು ಈ ವಿಡಿಯೋದಲ್ಲಿ ಹಾಕಿದ್ದಾರೆ.

ರೆಡ್ಡಿಟ್‌ ನಲ್ಲಿ ಈ ವಿಡಿಯೋ ಆಪ್ಲೋಡ್‌ ಆಗಿದ್ದು, ವೈರಲ್‌ ಆಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next