Advertisement

ನೇಣಿಗೆ ಶರಣಾದ ತಂದೆ: ಅಪಘಾತದಲ್ಲಿ ಪುತ್ರಿ ಸಾವು

11:08 PM Aug 03, 2019 | Team Udayavani |

ಚಿತ್ರದುರ್ಗ: ಕೌಟುಂಬಿಕ ಕಲಹದಿಂದ ಬೇಸತ್ತು ಜಿಲ್ಲಾ ಖಜಾನೆಯ ಮುಖ್ಯ ಲೆಕ್ಕಿಗ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನೊಂದೆಡೆ ಇವರ ಮಗಳು ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಶನಿವಾರ ನಡೆದಿದೆ.

Advertisement

ನಾರಾಯಣಪ್ಪ (39) ಆತ್ಮಹತ್ಯೆಗೆ ಶರಣಾದವರು. ಇವರು ಕೆಳಗೋಟೆ ಯಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇದನ್ನು ನೋಡಿದ ಪಕ್ಕದ ಮನೆಯವರು ನಾರಾಯಣಪ್ಪ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ನಾರಾಯಣಪ್ಪ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಗಂಡ ನೇಣು ಹಾಕಿಕೊಂಡಿದ್ದನ್ನು ಗಮನಿಸಿದ ನಾರಾಯಣಪ್ಪ ಅವರ ಪತ್ನಿ ರಮ್ಯಾ, ಮಗಳು ಆದ್ಯಳನ್ನು ಕರೆದು ಕೊಂಡು ಆಟೋ ಹತ್ತಿ ಮನೆ ಯಿಂದ ತೆರಳಿದ್ದರು. ನಂತರ ಆಟೋ ಇಳಿದು ಮಠದ ಕುರುಬರಹಟ್ಟಿ ಬಳಿ ನಡೆದು ಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಡಿಕ್ಕಿ ಹೊಡೆದಿದ್ದರಿಂದ ಮೂರು ವರ್ಷದ ಆದ್ಯ ಮೃತಪಟ್ಟಿದ್ದಾಳೆ. ರಮ್ಯಾಗೆ ಕಾಲು ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮ್ಯಾ ಅವರು ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ.

ಪತಿಯ ಆತ್ಮಹತ್ಯೆಯಿಂದ ನೊಂದು ತಾವು ಕೂಡ ಸಾಯಲು ನಿರ್ಧರಿಸಿದ ರಮ್ಯಾ, ಆಟೋ ಇಳಿದ ನಂತರ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ತಾವೇ ಅಪರಿಚಿತ ವಾಹನಕ್ಕೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿರಬಹುದು. ಘಟನೆಯಲ್ಲಿ ಮಗಳು ಆದ್ಯ ಮೃತಪಟ್ಟು, ರಮ್ಯಾ ಪ್ರಾಣಾಪಾಯದಿಂದ ಪಾರಾಗಿರಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ನಾರಾಯಣಪ್ಪ ಆತ್ಮಹತ್ಯೆ ಪ್ರಕರಣ ಬಡಾವಣೆ ಠಾಣೆಯಲ್ಲಿ ದಾಖಲಾಗಿದ್ದರೆ, ಮಗಳು ಮತ್ತು ಪತ್ನಿಯ ಅಪಘಾತ ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.

Advertisement

ತನಿಖೆ ನಡೆಸಲಿದ್ದೇವೆ-ಎಸ್‌ಪಿ: ಅವಘಡ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌, ನಾರಾಯಣಪ್ಪ ಅವರು ಶುಕ್ರವಾರ ಮನೆಯಲ್ಲಿ ಜಗಳ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ನಾರಾಯಣಪ್ಪ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಪತ್ನಿ ರಮ್ಯಾ ಹಾಗೂ ಮಗಳು ಆದ್ಯ, ಎಂ.ಕೆ.ಹಟ್ಟಿ ಕಡೆ ಯಾಕೆ ಹೋದರು ಎನ್ನುವುದು ಈವರೆಗೂ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next