Advertisement

ಅಪ್ಪನಿಂದ ಪುತ್ರಿಯ ಮೇಲೆ ರೇಪ್‌: ಪತ್ನಿಯ ಕೈಗೆ ಸಿಕ್ಕಿಬಿದ್ದ ಪತಿ

11:34 AM Sep 14, 2018 | Team Udayavani |

ಮುಜಫ‌ರನಗರ : ಅಪ್ರಾಪ್ತ ವಯಸ್ಸಿನ ತನ್ನ ಪುತ್ರಿಯ ಮೇಲೆ ಆಕೆಯ ತಂದೆ ಕಳೆದ ಆರು ತಿಂಗಳಿಂದ ಅತ್ಯಾಚಾರ ನಡೆಸುತ್ತಿದ್ದು ಪತ್ನಿಯ ಕೈಯಲ್ಲಿ ರೆಡ್‌ ಹ್ಯಾಂಡ್‌ ಸಿಕ್ಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಮುಜಫ‌ರನಗರ ಜಿಲ್ಲೆಯ ಬುಢಾನಾ ಎಂಬಲ್ಲಿಂದ ವರದಿಯಾಗಿದೆ. 

Advertisement

ತನ್ನ ಅನೈತಿಕ, ಕಾಮಾಂಧತೆಯ ಕೃತ್ಯ ಬಯಲಾಗುತ್ತಲೇ ಆರೋಪಿ ಅಪ್ಪ, ಪತ್ನಿ ಮತ್ತು ಮಗಳಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಆದರೆ ಇದಕ್ಕೆ ಬೆದರದ ಪತ್ನಿಯು ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರೇಪ್‌ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತಲೆಮರೆಸಿ ಕೊಂಡಿರುವ ಆರೋಪಿಯ ಹುಡುಕಾಟ ನಡೆದಿದ್ದು ಆತನ ವಿರುದ್ಧ ಅತ್ಯಂತ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ಓಂ ವೀರ್‌ ಸಿಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next