Advertisement
ಮಂಗಳೂರಿನ ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್, ನರ್ಸಿಂಗ್ ಕಾಲೇಜು ಹಾಗೂ ವಾಕ್ ಮತ್ತು ಶ್ರವಣ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ನಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ರೆ|ಫಾ|ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸ್ವಾಗತಿಸಿದರು. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅನಿಶಾ ಮೈಕೆಲ್ ಸಿಕ್ವೇರ, ಲಿಶ್ಮಿತಾ ಲಾರೆಲ್ ಡಿಸೋಜ, ಆ್ಯಡ್ಲೆನ್ ಐರೆಲ್ ಪಿರೇರಾ ಸಹಿತ ಹಲವು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಎಫ್‌ಎಂಎಸ್‌ಒಎನ್ ಮತ್ತು ಎಫ್ ಎಂಸಿಒಎನ್ ಪ್ರಾಂಶುಪಾಲರಾದ ಭ| ಜೆಸಿಂತಾ ಡಿ’ಸೋಜಾ, ಎಫ್ ಎಂಸಿಯ ಸ್ಪೀಚ್ ಆ್ಯಂಡ್ ಹಿಯರಿಂಗ್ ಪ್ರಾಂಶುಪಾಲರಾದ ಪ್ರೊ| ಸಿಂಥಿಯಾ ಸಾಂತುಮಾಯರ್, ಪ್ರಮುಖರಾದ ಅಜು ಅಬ್ರಹಾಂ, ಡಾ| ಆ್ಯಗ್ನೆಸ್, ಸಿ| ಧನ್ಯ ದೇವಕಿಯ, ಡಾ| ಉದಯ್ ಕುಮಾರ್ ಉಪಸ್ಥಿತರಿದ್ದರು.
ನಗು ಮುಖದ ಸೇವೆಯೇ ಔಷಧ: ಬಿಷಪ್
ಮಂಗಳೂರು ಬಿಷಪ್ ಹಾಗೂ ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ನರ್ಸಿಂಗ್ ಸೇವೆ ಮಾನವೀಯ ಸೇವೆಯ ದ್ಯೋತಕ. ಕಷ್ಟದಲ್ಲಿರುವವರ ಕೈ ಹಿಡಿದು ಸಾಂತ್ವನದೊಂದಿಗೆ ಭರವಸೆ ನೀಡುವ ಮಹಾ ಕಾರ್ಯ ಇದರಿಂದ ನಡೆಯುತ್ತದೆ ಎಂದು ಹೇಳಿ, ರೋಗಿಯೊಬ್ಬನನ್ನು ಉಪಚರಿಸುವ ರೀತಿ ಹಾಗೂ ಅವನಿಗೆ ನಗುಮುಖದ ಸೇವೆ ನೀಡುವುದೇ ಬಹುದೊಡ್ಡ ಕಾರ್ಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಬೇಕು. ನಗುವಿನ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.