Advertisement

ತಂದೆ-ತಾಯಿ ಜೋಪಾನ ಪ್ರತಿಯೊಬ್ಬರ ಆದ್ಯ ಕರ್ತವ್ಯ

12:58 PM Sep 15, 2018 | |

ಸಿಂದಗಿ: ನಮಗೆ ಜೀವನ ನೀಡಿ ತಿದ್ದಿ-ತಿಡಿ ಜೀವನ ರೂಪಿಸಿದ ತಂದೆ-ತಾಯಿ ಮತ್ತು ಶಿಕ್ಷಣ-ಸಂಸ್ಕಾರ ನೀಡಿದ ಗುರುವನ್ನು ಎಂದು ಮರೆಯಬಾರದು ಎಂದು ಸ್ಥಳೀಯ ಆರ್‌.ಡಿ. ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ಕೊಪ್ಪ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನ ಪಠ್ಯಪೂರಕ
ಚಟುವಟುಕೆಗಳ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಜೀವನದಲ್ಲಿ ಸಾಧನೆ ಮಾಡಿದ ನಂತರ ತಂದೆ-ತಾಯಿ ಜೋಪಾನ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಗುರುವಿನ ಮಾರ್ಗದರ್ಶನ ಪಡೆಯಬೇಕು. ನಾವು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ನಮ್ಮನ್ನು ಅರಿಸಿ ಬರುತ್ತದೆ ಎಂದು ಹೇಳಿದರು.

ಪರೀಕ್ಷೆ ಬಂದಾಗ ಹಗಲಿರಳು ಓದುವುದು ಸೂಕ್ತವಲ್ಲ. ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಹೆಣ್ಣು ಮಕ್ಕಳು ಎಂದೂ ಅಶಕ್ತರಲ್ಲ. ನಾವು ಸಾಧಕರಾಗೋಣ. ಸಾಧನೆ ಮಾಡಬೇಕು ಎಂದು ಕನಸು ಕಂಡರೆ ಸಾಧನೆ ಕನಸಾಗಿ ಉಳಿಯುತ್ತದೆ. ನಾವು ಸಾಧನೆಯ ಗುರಿಯಿಟ್ಟುಕೊಂಡು ಶ್ರಮವಹಿಸಿ ಅಧ್ಯಯನ ಮಾಡಬೇಕು. ಅಂದಿನ ಪಾಠ ಅಂದೇ ಅಧ್ಯಯನ ಮಾಡಬೇಕು. ಸಮಸ್ಯೆ ಬಂದಾಗ ಉಪನ್ಯಾಸಕರಿಂದ ಅರ್ಥೈಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಸಾಧಕರಾದ ಮಿಥಾಲಿ ರಾಜ್‌, ಸೈನಾ ನೆಹ್ವಾಲ್‌, ಕಲ್ಪನಾ ಚಾವ್ಲಾ, ಮೇರಿಕೊಮ ಮುಂತಾದ ಸಾಧನೆಗೈದ ಮಹಿಳೆಯರ ಕುರಿತು ಅಧ್ಯಯನ ಮಾಡಬೇಕು. ಅವರು ನಮಗೆ ಮಾದರಿಯಾಗಿದ್ದಾರೆ. ಅವರ ಜೀವನ ಕ್ರಮ, ಸಾಧನೆ ಬಗ್ಗೆ ಅರಿಯಬೇಕು. ಅವರ ವಿಚಾರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಸಾನ್ನಿಧ್ಯ ವಹಿಸಿ ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ,
ವಿದ್ಯಾರ್ಥಿಗಳು ಶಿಕ್ಷಣ ಕಲಿಯುವ ಜೊತೆಗೆ ಸಂಸ್ಕಾರ ಕಲಿಯಬೇಕು. ಯೋಗ, ಧ್ಯಾನ ಮಾಡುವುದರಿಂದ ನಮ್ಮ
ಆರೋಗ್ಯ ವೃದ್ಧಿಸುವ ಜೊತೆಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಂಸ್ಕಾರ ಬೆಳೆಯಲು ಸಾಧ್ಯ ಎಂದರು.

ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿರುತ್ತದೆ. ಪಠ್ಯ ಅಧ್ಯಯನ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪಠ್ಯ ಪೂರಕ ಚಟುವಟಿಕೆಗಳು ಸಾಕಷ್ಟು ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಪಠ್ಯಪೂರಕ ಚಟುವಟಿಕೆಗಳನ್ನು ನಿರ್ಲಕ್ಷಿಸದೆ ಸಕ್ರೀಯವಾಗಿ ಭಾಗವಹಿಸಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಸ್‌. ಹಯ್ನಾಳಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆಸೂಕ್ತ ವೇದಿಕೆ ನಿರ್ಮಾಣ ಮಾಡಿ ಕೊಡಲಾಗುವುದು. ಅವರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ ಕುಂಬಾರ ಹಾಗೂ ಪಿಎಚ್‌ಡಿ ಪದವಿ ಪಡೆದ ಆರ್‌.ಡಿ. ಪಾಟೀಲ ಕಾಲೇಜಿನ ಉಪನ್ಯಾಸಕ ಬಿ.ಬಿ. ಜಮಾದಾರ ಅವರಿಗೆ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವಧಿಸಿದರು.

ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಡಾ| ಶರಣಬಸವ ಜೋಗೂರ, ಶಿವಮಾಂತ ಪೂಜಾರಿ, ವಿಶ್ರಾಂತ ಪ್ರಾಚಾರ್ಯ ಎಸ್‌.ಜಿ. ಹಿರೇಮಠ, ಎಂ.ವಿ. ಗಣಾಚಾರಿ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಗಿರೀಶ್‌ ಕುಲಕರ್ಣಿ, ಯು.ಸಿ. ಪೂಜಾರಿ, ಜಿ.ಎ. ನಂದಿಮಠ, ಜ್ಯೋತಿ ಕೊಡಗಾನೂರ, ಅಕ್ಷತಾ ಕತ್ತಿ, ಬಿ.ಬಿ. ಹಿರೇಮಠ, ಡಾ| ಬಾಹುಬಲಿ ವನಕುದರಿ, ಆಸಿಫ್‌ ಕೋಕಣಿ, ಎಂ.ಪಿ. ಸಾಗರ, ಲಕ್ಷ್ಮೀ ಮಾರ್ಸನಳ್ಳಿ, ಹೇಮಾ ಕಾಸರ, ಶಿವಾನಂದ ನಾಗರಾಳ ಇದ್ದರು. ಕಸ್ತೂರಿ ಭೂತಿ ಪ್ರಾರ್ಥಿಸಿದರು. ಆರ್‌.ಎಂ. ನದಾಫ್‌ ಸ್ವಾಗತಿಸಿದರು. ಸರಸ್ವತಿ ಪಟೇದ ಮತ್ತು
ವಿಜಯಲಕ್ಷ್ಮೀ ಭಜಂತ್ರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next