Advertisement
ಪಾದ್ರಿ ಕುರಿಯಕೋಸ್ ಅವರ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಆದರೆ ಸಾವಿಗೂ ಮುನ್ನ ಅವರು ವಾಂತಿ ಮಾಡಿಕೊಂಡಿ ರುವುದು ಗೊತ್ತಾಗಿದೆ. ನಾವು ಎಲ್ಲ ಆಯಾಮಗಳಿಂದ ಲೂ ತನಿಖೆ ಆರಂಭಿಸಿದ್ದೇವೆ ಎಂದು ಡಿಎಸ್‌ಪಿ ಎ.ಆರ್. ಶರ್ಮಾ ತಿಳಿಸಿದ್ದಾರೆ. ರವಿವಾರ ರಾತ್ರಿ ಊಟ ಮುಗಿಸಿ ಪಾದ್ರಿ ಕುರಿಯಕೋಸ್ ತಮ್ಮ ಕೊಠಡಿಗೆ ಹೋಗಿ ಮಲಗಿದ್ದರು. ಸೋಮವಾರ ಬೆಳಗ್ಗೆ ಕೊಠಡಿ ಸ್ವತ್ಛಗೊಳಿಸುವ ವ್ಯಕ್ತಿ ಅಲ್ಲಿಗೆ ಹೋದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಬಾರಿ ಬಾಗಿಲು ಬಡಿದರೂ ಫಾದರ್ ಬಾಗಿಲು ತೆರೆಯಲಿಲ್ಲ. ಕೊನೆಗೆ ಆತ ಕಿಟಕಿಯಿಂದ ಇಣುಕಿ ನೋಡಿದಾಗ ಪಾದ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡುಬಂತು. ಇತರರನ್ನು ಕರೆಸಿ ಬಾಗಿಲು ತೆರೆದು ಒಳಗೆ ಹೋದಾಗ ಅವರು ಮೃತಪಟ್ಟಿದ್ದರು ಎಂದರು. ಅತ್ಯಾಚಾರ ಆರೋಪ ಹೊತ್ತಿರುವ ಬಿಷಪ್ ಅವರ ವಿರುದ್ಧ ಪಾದ್ರಿ ಕುರಿಯಕೋಸ್ ಸಾಕ್ಷ್ಯ ನುಡಿದಿದ್ದರು. Advertisement
ಬಿಷಪ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಪಾದ್ರಿ ನಿಗೂಢ ಸಾವು
06:00 AM Oct 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.